Breaking News
Home / Recent Posts / ಮಕ್ಕಳಲ್ಲಿ ಭೌದ್ಧಿಕ ವಿಕಾಸದ ಜೊತೆ ಸಾಮಾಜಿಕ ವಿಕಾಸದ ಚಿಂತನೆಗಳನ್ನು ಬೆಳಸಬೇಕು : ಪ್ರದೀಪಕುಮಾರ ಘಂಟಿ ಮಹಾರಾಜರು

ಮಕ್ಕಳಲ್ಲಿ ಭೌದ್ಧಿಕ ವಿಕಾಸದ ಜೊತೆ ಸಾಮಾಜಿಕ ವಿಕಾಸದ ಚಿಂತನೆಗಳನ್ನು ಬೆಳಸಬೇಕು : ಪ್ರದೀಪಕುಮಾರ ಘಂಟಿ ಮಹಾರಾಜರು

Spread the love

ಮಕ್ಕಳಲ್ಲಿ ಭೌದ್ಧಿಕ ವಿಕಾಸದ ಜೊತೆ ಸಾಮಾಜಿಕ ವಿಕಾಸದ ಚಿಂತನೆಗಳನ್ನು ಬೆಳಸಬೇಕು :
ಪ್ರದೀಪಕುಮಾರ ಘಂಟಿ ಮಹಾರಾಜರು

ಮೂಡಲಗಿ : ಮಕ್ಕಳಲ್ಲಿ ಭೌದ್ಧಿಕ ವಿಕಾಸದ ಜೊತೆ ಸಾಮಾಜಿಕ ವಿಕಾಸದ ಚಿಂತನೆಗಳನ್ನು ಬೆಳಸಬೇಕು ಇಂದಿನ ಕಾಲದಲ್ಲಿ ತಂದೆಗೆ ಬಿಡುವು ಇಲ್ಲದೇ ಇರುವ ಮೊಬೈಲ್ ಜೀವನ, ತಾಯಿ ಟಿವಿ ವ್ಯಾಮೂಹ, ಸಹೋದರರು ವ್ಯಾಟ್ಸಾಪ್ ಪೇಸಬುಕ್ ಮೋಹ ಇಂತಹÀ ವ್ಯವಸ್ಥೆಗಳಿಂದ ಮಕ್ಕಳಲ್ಲಿ ಸಾಮಾಜಿಕತೆ ಮಾಯವಾಗುತ್ತಿದೆ. ತಂದೆ, ತಾಯಿ, ಅಜ್ಜ-ಅಜ್ಜಿ ಸಾಮಾಜಿಕ ಜೀವನದ ವಿಕಾಸ ಮಾಡುವಲ್ಲಿ ಮಹತ್ತರ ಪಾತ್ರವಹಿಸುತ್ತಾರೆ ಇಂದು ಈ ಶಾಲೆಯಲ್ಲಿ ಮೊಮ್ಮಕ್ಕಳಿಂದ ಅಜ್ಜ ಅಜ್ಜಿಗೆ ಆರುತಿ ಮಾಡುವುದು ಸಂತಸದ ವಿಷಯ. ಅಜ್ಜ ಅಜ್ಜಿಯರ ಪ್ರೀತಿ & ಆರೈಕೆಗಳಲ್ಲಿ ಬೆಳದ ಮಗು ಸಂಸ್ಕಾರವಂತ ಮತ್ತು ಸಾಮಾಜಿಕ ಜೀವಿಯ ವ್ಯಕ್ತಿತ್ವ ಬೆಳಸಿಕೊಳ್ಳುತ್ತದೆ ಎಂದು ಹಿಡಕಲ್ ಗ್ರಾಮದ ಶ್ರೀ ಪ್ರದೀಪಕುಮಾರ ಘಂಟಿ ಮಹಾರಾಜರು ಅಭಿಪ್ರಾಯಪಟ್ಟರು.
ಅವರು ಮೂಡಲಗಿಯ ಆರ್.ಡಿ.ಎಸ್. ವಿದ್ಯಾನಿಕೇತನ ಸಿ.ಬಿ.ಎಸ್.ಇ. ಶಾಲೆಯ ಅಜ್ಜ ಅಜ್ಜಿಯರ ದಿನ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಆರ್ಶೀವಚನ ನೀಡಿದರು.
ಕಾರ್ಯಕ್ರಮದ ಅತಿಥಿ ಆರ್.ಡಿ.ಎಸ್. ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಟಿ.ಎಸ್.ಒಂಟಿಗೂಡಿ ಮಾತನಾಡಿ ಹಿಂದಿನ ಕಾಲದಲ್ಲಿ ಕೂಡು ಕುಟುಂಬದ ಜೀವನ ನಮ್ಮದಾಗಿತ್ತು ಆ ಸಂದರ್ಭದಲ್ಲಿ ಅಜ್ಜ-ಅಜ್ಜಿಯರ ಪ್ರೀತಿ ನಮಗೆಲ್ಲ ಸಿಕ್ಕಿರುವುದು ನಮ್ಮ ಪುಣ್ಯ ನಮ್ಮ ಅಜ್ಜಿಯ ಕೈತುತ್ತು ನಮ್ಮ ಅಜ್ಜನ ಹೆಗಲು ನಮ್ಮ ಸಾಮಾಜಿಕ ಜೀವನದ ಪ್ರತಿಬಿಂಬವಾಗಿದೆ ಅಂತಹ ಸೌಬಾಗ್ಯವನ್ನು ಇಂದಿನ ನಮ್ಮ ಮಕ್ಕಳಿಗು ಒದಗಿಸುವುದು ಅವಶ್ಯಕ ಎಂದರು.
ಸಮಾರೋಪ ಸಮಾರಂಭದಲ್ಲಿ ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ ಇಂದಿನ ಮಕ್ಕಳಲ್ಲಿ ಕೇಂದ್ರ ಸರಕಾರದ ನೀತಿಯಂತೆ ಶಿಕ್ಷಣ ನೀಡುವುದು ಅವಶ್ಯಕವಿದ್ದು ಅಂತಹ ಶಿಕ್ಷಣ ನೀಡುವಲ್ಲಿ ಈ ಶಿಕ್ಷಣಸಂಸ್ಥೆ ಮಾದುರಿಯಾಗಿದೆ. ಸಿಬಿಎಸ್‍ಇ ಶಾಲೆಯ ಶಿಕ್ಷಣ ಮಕ್ಕಳ ಬದುಕನ್ನು ಅರ್ಥೈಸುವ ಶಿಕ್ಷಣವಾಗಿದ್ದು. ಪಾಲಕರು ತಮ್ಮ ಮಕ್ಕಳನ್ನು ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಸೇರಿಸುವ ಮೂಲಕ ಈ ಶಾಲೆಯ ಆಡಳಿತ ಮಂಡಳಿಯ ಕಾರ್ಯಕ್ಕೆ ಪ್ರೋತ್ಸಾಹಿಸ ಬೇಕೆಂದರು.
ಅತಿಥಿ ನೀಡಶೋಸಿ ಸಿಬಿಎಸ್‍ಇ ಶಾಲೆಯ ಪ್ರಾಚಾರ್ಯ ಉಮೇಶ ನಾಯ್ಕ ಮಾತನಾಡಿ ಮಕ್ಕಳಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಯುಗಕ್ಕೆ ಸರಿಹೊಂದುವ ಶಿಕ್ಷಣ ನೀಡುವಂತೆ ಸಿಬಿಎಸ್‍ಇ ಪಠ್ಯಕ್ರಮ ಇದ್ದು ಪಾಲಕರ ಈ ಶಿಕ್ಷಣ ಕೊಡಸುವಲ್ಲಿ ಪ್ರಯತ್ನಿಸಬೇಕು ಎಂದರು.

ಶಾಲೆಯ ಪ್ರಾಚಾರ್ಯ ಜೋಶಪ್ ಎಸ್.ಬಿ. ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಶಾಲೆ ಸಿಬಿಎಸ್‍ಇ ಮಾದರಿಯಂತೆ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಯಶಸ್ಸನ್ನು ಪಡೆಯುತ್ತಿದೆ ಅಲ್ಲದೇ ಶಿಕ್ಷಣ, ಕ್ರೀಡೆ, ಸಂಗೀತ,ಕರಾಟೆ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಸಿ ಮಕ್ಕಳನ್ನು ಪ್ರತಿಭಾವಂತರನ್ನಾಗಿ ರೂಪಿಸಲಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೆ ಅರಬಾಂವಿ ಮತಕ್ಷೇತ್ರದ ಶಾಸಕರು ಮತ್ತು  ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಆಗಮಿಸಿ ಸಂಸ್ಥೆಯ ಅಧ್ಯಕ್ಷರಿಂದ ಆತಿಥ್ಯ ಸ್ವೀಕರಿಸಿ ಸಂಸ್ಥೆಯ ಶೈಕ್ಷಣಿಕ ಕಾರ್ಯಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ ವಹಿಸಿಕೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ. ಪ್ರಕಾಶ ನಿಡಗುಂದಿ, ಕೆಂಪಣ್ಣಾ ತುಪ್ಪದ. ಶಿವಬಸು ಚಂದರಗಿ,ಬಾಳಗೌಡ ಪಾಟೀಲ ಮುತ್ತಪ್ಪ ಡಾಂಗೆ, ಎ.ಜಿ. ಬಡಕುಂದ್ರಿ, ಶ್ರೀಶೈಲ್ ಬ್ಯಾಕೂಡ, ಭರಮಣ್ಣಾ ಗುಡಗುಡಿ. ಡಾ. ಸುರೇಶ ಗುಡಗುಡಿ, ಅನ್ವರ ನದಾಫ ಮರೆಪ್ಪ ಮರೆಪ್ಪಗೋಳ, ರಮೇಶ ಪಾಟೀಲ, ಮಲ್ಲಪ್ಪ ಗಾಣಿಗೇರ ಬಿ.ಎಲ್. ಮಾದಗೌಡ್ರ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಸದಸ್ಯ ಶಿವಾನಂದ ಚಂಡಕಿ, ಊರಿನ ಗಣ್ಯರು, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು ಸಾಯಂಕಾಲ ಮಕ್ಕಳಿಂದ ವಿವಿದ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ