Breaking News
Home / Recent Posts / ನಿರ್ಮಲಾ ಸೀತಾರಾಮಾನ್ ಅವರು ಮಂಡಿಸಿರುವ ಬಜೆಟ್ ಮಧ್ಯಮ, ಬಡವರ ಕುಟುಂಬ ಸ್ನೇಹಿ ಬಜೆಟ್ ಆಗಿದೆ

ನಿರ್ಮಲಾ ಸೀತಾರಾಮಾನ್ ಅವರು ಮಂಡಿಸಿರುವ ಬಜೆಟ್ ಮಧ್ಯಮ, ಬಡವರ ಕುಟುಂಬ ಸ್ನೇಹಿ ಬಜೆಟ್ ಆಗಿದೆ

Spread the love

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮಾನ್ ಅವರು ಮಂಡಿಸಿರುವ ಬಜೆಟ್ ಮಧ್ಯಮ, ಬಡವರ ಕುಟುಂಬ ಸ್ನೇಹಿ ಬಜೆಟ್ ಆಗಿದೆ. ದೇಶದ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಪ್ರಗತಿಗೆ ಹಾಗೂ ಉದ್ಯಮಗಳ ಬೆಳವಣಿಗೆಗೆ ಹತ್ತು ಹಲವಾರು ಅಂಶಗಳನ್ನು ಅವರು ಕೊಡುಗೆಯಾಗಿ ನೀಡಿದ್ದಾರೆ. ಕರ್ನಾಟಕಕ್ಕೆ ಭದ್ರಾ ಮೇಲ್ದಂಡೆ ಯೋಜನೆಗೆ ₹೫೩೦೦ ಕೋಟಿ ಕೊಟ್ಟಿರುವುದನ್ನು ಸ್ವಾಗತಿಸುತ್ತೇನೆ. ಅದರಂತೆ ಆದಾಯ ಮಿತಿ ಹೆಚ್ಚಳ, ಕೃಷಿ ಉದ್ಯಮಿಗಳ ಸ್ಟಾರ್ಟಪ್ ಆಪ್‌ಗೆ ಉತ್ತೇಜನ, ೧೫೭ ಹೊಸ ನರ್ಸಿಂಗ್ ಕಾಲೇಜು ಸ್ಥಾಪನೆ, ೫೦ ಹೊಸ ವಿಮಾನ ನಿಲ್ದಾಣ, ಏಕಲವ್ಯ ಶಾಲಾ ವಸತಿ ಶಾಲೆಗಳಿಗೆ ಶಿಕ್ಷಕರ ನೇಮಕ, ಮಹಿಳಾ ಸಮ್ಮಾನ್ ಯೋಜನೆ, ಯುವಕರ ಕೌಶಲ್ಯಕ್ಕೆ ಯೋಜನೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಅಂಶಗಳು, ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ಸ್ಥಾಪನೆ, ಆವಾಸ್ ಯೋಜನೆಗೆ ಉತ್ತೇಜನದಂತಹ ಹತ್ತು ಹಲವಾರು ಯೋಜನೆಗಳು ದೇಶವನ್ನು ವಿಶ್ವದಲ್ಲಿ ಮತ್ತಷ್ಟು ಉನ್ನತ್ತಕ್ಕೆ ಏರಿಸಲು ಅನುಕೂಲವಾಗಿದೆ. ಸಮೃದ್ಧ ಭಾರತ ನಿರ್ಮಾಣ ಮಾಡಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿಗೆ ಬಜೆಟ್ ಮತ್ತಷ್ಟು ಶಕ್ತಿ ತುಂಬಿದೆ.

*-ಬಾಲಚಂದ್ರ ಜಾರಕಿಹೊಳಿ, ಶಾಸಕರು,                                  ಕೆಎಂಎಫ್ ಅಧ್ಯಕ್ಷರು.*


Spread the love

About inmudalgi

Check Also

ರಂಗಭೂಮಿ ಮತ್ತು ಜಾನಪದ ಕಲೆ ನಿತ್ಯ ನೂತನವಾಗಿದೆ : ಶಿವಪುತ್ರ ಪರಮಾನಟ್ಟಿ

Spread the love ಬೆಟಗೇರಿ:ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮಾತ್ರ ರಂಗಭೂಮಿ ಮತ್ತು ಬೈಲಾಟದ ಕಲೆಗಳನ್ನು ಕಾಣಬಹುದಾಗಿದೆ. ಜಾನಪದ ನಮ್ಮ ಸಂಸ್ಕøತಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ