Breaking News
Home / ತಾಲ್ಲೂಕು / ಕಲ್ಲೋಳಿ ಪಟ್ಟಣದ ಈರಣ್ಣ ಕಡಾಡಿಯವರ ರಾಜ್ಯಸಭಾ ಸಂಸದರ ಜನ ಸಂಪರ್ಕ ಕಛೇರಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಸುರೇಶ ಅಂಗಡಿ ಅವರ ಶ್ರದ್ದಾಜಲಿ ಸಭೆ

ಕಲ್ಲೋಳಿ ಪಟ್ಟಣದ ಈರಣ್ಣ ಕಡಾಡಿಯವರ ರಾಜ್ಯಸಭಾ ಸಂಸದರ ಜನ ಸಂಪರ್ಕ ಕಛೇರಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಸುರೇಶ ಅಂಗಡಿ ಅವರ ಶ್ರದ್ದಾಜಲಿ ಸಭೆ

Spread the love

ಮೂಡಲಗಿ: ಬುಧವಾರದಂದು ನಿಧನರಾದ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಸುರೇಶ ಅಂಗಡಿ ಅವರ ನಿಧನಕ್ಕೆ ಕಲ್ಲೋಳಿ ಪಟ್ಟಣದ ಈರಣ್ಣ ಕಡಾಡಿಯವರ ರಾಜ್ಯಸಭಾ ಸಂಸದರ ಜನ ಸಂಪರ್ಕ ಕಛೇರಿಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಸಹಕಾರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅವರಿಗೆ ಸೆ. 24 ಗುರುವಾರದಂದು ಶ್ರದ್ದಾಂಜಲಿ ಸಲ್ಲಿಸಲಾಯಿತು.
ಬಿಜೆಪಿ ಪ್ರಮುಖರಾದ ಬಸವರಾಜ ಕಡಾಡಿ ಮಾತನಾಡಿ ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ, ಸರಳ ಸಜ್ಜನಿಕೆಯ ವ್ಯಕ್ತಿ, ಕೇಂದ್ರ ಸಚಿವರಾದ ನಮ್ಮ ಭಾಗದ ಸಂಸದರಾದ ಸುರೇಶ ಅಂಗಡಿಯವರ ನಿಧನದ ಸುದ್ದಿ ತಿಳಿದು ಆಘಾತವಾಯಿತು. ನಾಲ್ಕು ಬಾರಿ ಸಂಸದರಾಗಿ ಹಲವಾರು ಜನಪ್ರಿಯ ಹಾಗೂ ಜನಹಿತ ಕಾರ್ಯ ಮಾಡಿದ್ದರು. ಕಳೆದ ಒಂದು ವರ್ಷದಿಂದ ಕೇಂದ್ರ ರಾಜ್ಯ ರೈಲ್ವೆ ಸಚಿವರಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ರೈಲ್ವೆ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಿ ಕಾರ್ಯಪ್ರವೃರ್ತರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ.


ಈ ಸಂದರ್ಭದಲ್ಲಿ ಶಿವಪ್ಪ ಕಡಾಡಿ, ಶ್ರೀಶೈಲ ತುಪ್ಪದ, ರೈತ ಮೋರ್ಚಾ ಕಾರ್ಯದರ್ಶಿ ಅಡಿವೆಪ್ಪ ಕುರಬೇಟ, ಪ್ರಭು ಕಡಾಡಿ, ಒಬಿಸಿ ಮೋರ್ಚಾ ಉಪಾಧ್ಯಕ್ಷ ಪುಂಡಲಿಕ ಅರಭಾವಿ, ಸುನೀಲ ಈರೇಶನವರ ಮಲ್ಲಪ್ಪ ಖಾನಗೌಡರ, ರಾಮಣ್ಣ ಬಿ. ಪಾಟೀಲ, ಈರಣ್ಣ ಮುನ್ನೋಳಿಮಠ, ಜಿಲ್ಲಾ ಬಿಜೆಪಿ ಮಾಜಿ ಕೋಶಾಧ್ಯಕ್ಷ ಪರಪ್ಪ ಗಿರೆಣ್ಣವರ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಮಂಜುಳಾ ಹಿರೇಮಠ, ಸುಗಂದಾ ಗೊರಗುದ್ದಿ, ಕೆಂಪಣ್ಣ ಗಡಹಿಂಗ್ಲೆಜ್, ಅಡಿವೆಪ್ಪ ಮುತ್ನಾಳ, ಹಣಮಂತ ಕಲಕುಟ್ರಿ, ಸಿದ್ದಪ್ಪ ಹೆಬ್ಬಾಳ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About inmudalgi

Check Also

ಹಣಮಂತ ಹುಚರಡ್ಡಿ ನಿಧನ

Spread the loveಮೂಡಲಗಿ : ತಾಲ್ಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿ ಹಣಮಂತ ರಾಮಪ್ಪ ಹುಚರಡ್ಡಿ (80) ಮಂಗಳವಾರ ನಿಧನರಾದರು. ಮೃತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ