Breaking News
Home / Recent Posts / ಬಡ್ಡಿ ಸೆಂಟ್ರಲ್ ಶಾಲೆಯಲ್ಲಿ ಕೈ ಬರೆಹದಿಂದ ಕೂಡಿದ “ಅಕ್ಷರ ದೀವಿಗೆ” ಎನ್ನುವ ಮ್ಯಾಗಜಿನ್ ಬಿಡುಗಡೆ

ಬಡ್ಡಿ ಸೆಂಟ್ರಲ್ ಶಾಲೆಯಲ್ಲಿ ಕೈ ಬರೆಹದಿಂದ ಕೂಡಿದ “ಅಕ್ಷರ ದೀವಿಗೆ” ಎನ್ನುವ ಮ್ಯಾಗಜಿನ್ ಬಿಡುಗಡೆ

Spread the love

ಮೂಡಲಗಿ : ತಾಲೂಕಿನ ಧರ್ಮಮಟ್ಟಿ ಗ್ರಾಮದ ಬಡ್ಡಿ ಸೆಂಟ್ರಲ್ ಶಾಲೆ 74ನೇ ಗಣರಾಜ್ಯೋತ್ಸವನ್ನು ಸಡಗರ, ಸಂಭ್ರಮಗಳಿಂದ ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ಚೆನ್ನಬಸವರಾಜ ಬಡ್ಡಿಯವರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ಜನವರಿ 26 ರಂದು ಆಚರಿಸಲಾಗುವ ಗಣರಾಜ್ಯೋತ್ಸವ ದಿನ ಪ್ರತಿ ಭಾರತೀಯನ ಪಾಲಿಗೆ ಹೆಮ್ಮೆಯ ದಿನವಾಗಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಎಷ್ಟು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆಯೋ, ಅಷ್ಟೇ ಸಂಭ್ರಮದಿಂದ ದೇಶದಲ್ಲಿ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳ ಹಾಗೂ ಶಿಕ್ಷಕರ ಕೈ ಬರೆಹದಿಂದ ಕೂಡಿದ “ಅಕ್ಷರ ದೀವಿಗೆ” ಎನ್ನುವ ಮ್ಯಾಗಜಿನ್ ಅನ್ನು ಬಿಡುಗಡೆ ಮಾಡಲಾಯಿತು.ಮಕ್ಕಳ ಕೈಬರೆಹದಿಂದ ಕೂಡಿದ ವಿಶೇಷವಾದ ಪುಸ್ತಕವಾಗಿದ್ದು, ಕಥೆ ,ಕವನ ಮತ್ತು ಚಿತ್ರಗಳನ್ನು ಒಳಗೊಂಡಿದವು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶಂಕರ ಡೊಣವಾಡ ಹಾಗೂ ಪ್ರಾಚಾರ್ಯರಾದ ಸಾಜು ಪಿ ರಾಜನ್, ಶಾಲಾ ಸಿಬ್ಬಂದಿ ವರ್ಗ, ಮಕ್ಕಳು ಹಾಗೂ ಪಾಲಕರು ಉಪಸ್ಥಿತರಿದ್ದರು.


Spread the love

About inmudalgi

Check Also

*ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ಧತೆ * ಮಕ್ಕಳಿಗೆ ಮತ್ತು ಪಾಲಕರಿಗೆ ವಿಶೇಷ ಊಟದ ವ್ಯವಸ್ಥೆ

Spread the loveಬೆಟಗೇರಿ ಸಿಆರ್‍ಸಿ ವಲಯದ ಶಾಲೆಗಳಲ್ಲಿ  ಸ್ವಚ್ಛತಾ  ಕಾರ್ಯ.! *ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಹೂ ನೀಡಿ, ಸಿಹಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ