ಬೆಟಗೇರಿ ಪತ್ರೇಪ್ಪನ ತೋಟದ ಶಾಲೆಯಲ್ಲಿ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಬೆಟಗೇರಿ:ಅರಭಾಂವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪತ್ರೇಪ್ಪನ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ 1 ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಶಾಲೆಯ ಪ್ರಧಾನಗುರು ಬಿ.ಎ.ಕೋಟಿ ಮಾತನಾಡಿ, ಬೆಳಗಾವಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವತಿಯಿಂದ ಸುಮಾರು 15 ಲಕ್ಷ ರೂ.ಗಳ ವೆಚ್ಚದಲ್ಲಿ 1 ಕೊಠಡಿ ನಿರ್ಮಾಣ ಕಾಮಗಾರಿ ನಡೆಯಲಿದೆ. ಇಲ್ಲಿಯ ಪತ್ರೇಪ್ಪನ ತೋಟದ ಶಾಲೆಯ ಅಭಿವೃದ್ಧಿಗೆ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಎಸ್‍ಡಿಎಂಸಿ ನೂತನ ಅಧ್ಯಕ್ಷ ಸಿದ್ದಪ್ಪ ಕೋಣಿ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಬೆಟಗೇರಿ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ, ಲಕ್ಷ್ಮಣ ನೀಲಣ್ಣವರ, ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಈಶ್ವರ ಬಳಿಗಾರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಬೆಟಗೇರಿ ಸಿಆರ್‍ಪಿ ಎಂ.ಬಿ.ನಾಯ್ಕರ, ವಿಠಲ ಕೋಣಿ, ಸುಭಾಷ ಕರೆಣ್ಣವರ, ಪ್ರಕಾಶ ಗುಡದಾರ, ರವಿ ಉಪ್ಪಾರ, ಸಿದ್ಧಾರೂಢ ವಡೇರ, ರಮೇಶ ಹಾಲಣ್ಣವರ, ಎಸ್.ಬಿ.ಸನದಿ, ವಿಶ್ವ ಶೀಗಿಹಳ್ಳಿ, ಸಿದ್ದಪ್ಪ ಬಾಣಸಿ, ಬಸನಪ್ಪ ದೇಯಣ್ಣವರ, ಚಂದರಗಿ, ಭೀಮಶೆಪ್ಪ ಮುರಗೋಡ, ಪುಂಡಲೀಕ ಚಿನ್ನನ್ನವರ, ಶಾಲೆಯ ಶಿಕ್ಷಕರು, ಎಸ್‍ಡಿಎಂಸಿ ನೂತನ ಸದಸ್ಯರು, ಶಿಕ್ಷಣ ಪ್ರೇಮಿಗಳು, ಗಣ್ಯರು, ಸ್ಥಳೀಯರು ಇದ್ದರು.
IN MUDALGI Latest Kannada News