ಮಹಾಂತೇಶ ಕವಟಗಿಮಠ ಪರ ಸಂಸದ ಈರಣ್ಣ ಕಡಾಡಿ ಪ್ರಚಾರ
ಮೂಡಲಗಿ: ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಬೆಳಗಾವಿ ಬಿಜೆಪಿ ಪಕ್ಷದ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರ ಚುನಾವಣಾ ಪ್ರಚಾರಾರ್ಥ ಸಂಸದ ಈರಣ್ಣ ಕಡಾಡಿ ಅವರು ದಿ.3 ಶುಕ್ರವಾರದಂದು ಪ್ರವಾಸ ಕೈಗೊಳ್ಳಲಿದ್ದಾರೆ. ಅರಭಾವಿ ಮತಕ್ಷೇತ್ರದ ಹಳೆಯ ಜಿಲ್ಲಾ ಪಂಚಾಯತ ಕ್ಷೇತ್ರಗಳಾದ ಮೆಳವಂಕಿಯ ಗೌಡನ ಕ್ರಾಸ್‍ದಲ್ಲಿ ಮಧ್ಯಾಹ್ನ 3.00 ಗಂಟೆಗೆ, ಕೌಜಲಗಿ ಜಿಲ್ಲಾ ಪಂಚಾಯತ ಕ್ಷೇತ್ರದ ಲಕ್ಷ್ಮೇಶ್ವರದ ಮಾಳಿಂಗರಾಯ ದೇಸ್ಥಾನದಲ್ಲಿ 4.00 ಗಂಟೆಗೆ, ಯಾದವಾಡ ಜಿಲ್ಲಾ ಪಂಚಾಯತ ಕ್ಷೇತ್ರದ ಕುಲಗೋಡ ಗ್ರಾಮದ ಬಲಭೀಮ ದೇಸ್ಥಾನದ ಸಭೆಯಲ್ಲಿ ಭಾಗವಹಿಸುವರು. ಶಾಸಕರು ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ, ಪಕ್ಷದ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೇರಿದಂತೆ ಅನೇಕ ನಾಯಕರು ಪಾಲ್ಗೊಳ್ಳಲಿದ್ದಾರೆ.