Breaking News
Home / Recent Posts / ಭಾರತೀಯ ಮೂಲ ಸಂಸ್ಕøತಿ ಉಳಿಸುವಲ್ಲಿ ತಾಯಂದಿರ ಜವಾಬ್ದಾರಿ ಅಧಿಕ- ಪ್ರೊ. ಬಿ.ಆರ್. ಪೊಲೀಸ್‍ಪಾಟೀಲ

ಭಾರತೀಯ ಮೂಲ ಸಂಸ್ಕøತಿ ಉಳಿಸುವಲ್ಲಿ ತಾಯಂದಿರ ಜವಾಬ್ದಾರಿ ಅಧಿಕ- ಪ್ರೊ. ಬಿ.ಆರ್. ಪೊಲೀಸ್‍ಪಾಟೀಲ

Spread the love

 

ಭಾರತೀಯ ಮೂಲ ಸಂಸ್ಕøತಿ ಉಳಿಸುವಲ್ಲಿ ತಾಯಂದಿರ ಜವಾಬ್ದಾರಿ ಅಧಿಕ

ಗೋಕಾಕ: ‘ಭಾರತೀಯ ಮೂಲ ಸಂಸ್ಕøತಿ, ಆಚರಣೆ ಮತ್ತು ಪರಂಪರೆಗಳು ಉಳಿಸುವಲ್ಲಿ ತಾಯಂದಿರ ಜವಾಬ್ದಾರಿ ಅಧಿಕವಿದೆ’ ಎಂದು ನಾಟಕಕಾರ ಪ್ರೊ. ಬಿ.ಆರ್. ಪೊಲೀಸ್‍ಪಾಟೀಲ ಅಭಿಪ್ರಾಯಪಟ್ಟರು.
ಹಿಂದು ಮುಸ್ಲಿಂ ಸೌಹಾರ್ದತೆಯ ಸುಕ್ಷೇತ್ರ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಸಿದ್ಧ ಸಂಸ್ಥಾನ ಪೀಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಹಿತ್ಯ, ಸಂಸ್ಕøತಿ ಸೌರಭ ಕಾರ್ಯಕ್ರಮದಲ್ಲಿ ‘ಎಂಥಾ ಚೆಂದಿತ್ತ ಹಿಂದೂಸ್ತಾನ’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು ಎಲ್ಲಿ ಮಹಿಳೆಯರು ಜಾಗೃತರಾಗಿರುತ್ತಾರೆ ಅಲ್ಲಿ ಸಮಾಜದ ಸ್ವಾಸ್ಥ್ಯವಿರುತ್ತದೆ ಎಂದರು.
ಸತ್ಯ, ಪ್ರಾಮಾಣಿಕತೆಗಳೆಲ್ಲ ದೂರವಾಗುತ್ತಲಿವೆ. ಹಣ, ಅಧಿಕಾರ, ವ್ಯಸನ ಹೀಗೆ ಹತ್ತು ಹಲವಾರು ದುರಾಲೋಚನೆಗಳಿಂದ ದೇಶವು ಜರ್ಜರಿತವಾಗುತ್ತಲಿದೆ. ಸಾಧು, ಸಂತರು, ಸತ್ಪುರುಷರು ಬಾಳಿ, ಬೆಳಗಿದ ಸುಂದರ ಮೂಲ ಭಾರತವನ್ನು ಉಳಿಸಿಕೊಳ್ಳುವುದು ಇಂದಿನ ಅವಶ್ಯಕತೆ ಇದೆ ಎಂದರು.
ಬಿ.ಆರ್. ಪೊಲೀಸ್‍ಪಾಟೀಲ ಅವರು ಲಾವಣಿ, ತತ್ವಪದಗಳನ್ನು ಸುಶ್ರಾವ್ಯವಾಗಿ ಹಾಡಿ ಒಂದು ಗಂಟೆಯ ಕಾಲ ಸೇರಿದ ಸಹಸ್ರಾರು ಜನರನ್ನು ಮಂತ್ರಮುಗ್ದರನ್ನಾಗಿಸಿದರು.
ಸಾನ್ನಿಧ್ಯವಹಿಸಿದ್ದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿ ಅವರು ಮಾತನಾಡಿದರು.
ಚಿತ್ರದುರ್ಗದ ವಿಶಾಲಾಕ್ಷಿ ಶಾಂಬಶಿವಯ್ಯ ಕಿತ್ತೂರ ಚನ್ನಮಳ ಕುರತು ಕವಿತೆ ವಾಚನ ಮಾಡಿದರು.

ಗದಗದ ವೆ ಚನ್ನವೀರಸ್ವಾಮಿ ಶ್ರೀ ಶಿವಲಿಂಗೇಶ್ವರ ಪುರಾಣವನ್ನು ಹೇಳಿದರು ಗದಗದ ವೀರೇಶ ಕಿತ್ತೂರ ಅವರ ಗಾಯನವು ಎಲ್ಲರ ಗಮನಸೆಳೆಯಿತು. ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.
ರೋಹಿಣಿ ಹಾಗೂ ಶಿಕ್ಷಕ ಎಂ.ಎಸ್. ತೋಡಕರ ನಿರೂಪಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ