ಮೂಡಲಗಿಯ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ಶೀ ಮಹಾಲಕ್ಷ್ಮೀ ಅರ್ಬನ ಕೋ-ಆಪ ಕ್ರೆಡಿಟ್ ಸೊಸಾಯಿಟಿಗೆ 31-೦3-2023ಕ್ಕೆ ರೂ 3.51ಕೋಟಿ ನಿವ್ವಳ ಲಾಭವಾಗಿದೆ ಎಂದು ಸಂಘದ ಅಧ್ಯಕ್ಷರಾದ ಶೀ ಮಲ್ಲಪ್ಪ. ಗು. ಗಾಣಿಗೇರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ಆಡಳಿತ ಮಂಡಳಿಯ ಸುದ್ದಿಗೋಷ್ಠಿಯಲ್ಲಿ ಸಂಘವು ಮಾರ್ಚ ಅಂತ್ಯಕ್ಕೆ 2.69 ಕೋಟಿ ಶೇರು ಬಂಡವಾಳ, 92.96 ಕೋಟಿ ಠೇವುಗಳು, 14.೦8 ಕೋಟಿ ನಿಧಿಗಳನ್ನು, ಹೊಂದಿ ವಿವಿಧ ಬ್ಯಾಂಕುಗಳಲ್ಲಿ ಠೇವಣ ದಾರರ ಭದ್ರತೆಗಾಗಿ 3೦.62 ಕೋಟಿ ಗುಂತಾವಣ ಮಾಡಿ, 81.25 ಕೋಟಿ ರೂ ಸಾಲ ವಿತರಿಸಿದ್ದು ದುಡಿಯುವ ಬಂಡವಾಳ 116.35 ಕೋಟಿ ರೂ ಹೊಂದಿದೆ ಎಂದು ಹೇಳಿದರು.
ಸಂಘವು ಪ್ರಧಾನ ಕಛೇರಿ ಹಾಗೂ 10 ಶಾಖೆಗಳನ್ನು ಹೊಂದಿದ್ದು, ಪ್ರಧಾನಕಛೇರಿ, ಖಾನಟ್ಟಿ ಮತ್ತು ಸುಣಧೋಳಿ ಶಾಖೆಗಳು ಸಂಘದ ಸ್ವಂತ ಭ್ಯವವಾದ ಕಟ್ಟಡಗಳನ್ನು ಹೊಂದಿವೆ. ಕಟಕೋಳ ಶಾಖೆಗೆ ನಿವೇಶನ ಖರೀದಿಸಲಾಗಿದೆ.ಎಲ್ಲ ಶಾಖೆಗಳು ಗಣಕೀಕೃತವಾಗಿವೆ. ಪ್ರಾರಂಭದಿಂದಲೂ ಶೇ ೧೫ ಶೇರು ಲಾಭಾಂಶ ವಿತರಿಸುತ್ತಾ ಶೇರುದಾರರ ವಿಶ್ವಾಸವನ್ನು ಗಳಿಸಿರುತ್ತದೆ.
ಸಂಘವು 1992 ನೇ ಇಸ್ವಿಯಲ್ಲಿ ಪ್ರಾರಂಭವಾಗಿದ್ದು, 32 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಕಡಿಮೆ ಬಂಡವಾಳದಲ್ಲಿ ಅತೀ ಹೆಚ್ಚು ಲಾಭ ಗಳಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸಾಲ ವಸೂಲಾತಿ ಆಗಿದೆ. ಇದಕ್ಕೆಲ್ಲ ಸಂಘದ ಪ್ರಧಾನ ಕಛೇರಿಯ ಆಡಳಿತ ಮಂಡಳಿ ಸದಸ್ಯರು, ಸರ್ವ ಸಿಬ್ಬಂದಿ ವರ್ಗ ಹಾಗೂ ಶಾಖೆಗಳ ಸಲಹಾ ಸಮಿತಿ ಸದಸ್ಯರ ನಿಸ್ವಾರ್ಥ ಸೇವೆಯೇ ಪ್ರಮುಖ ಕಾರಣವಾಗಿದೆ. ಸಮಯಕ್ಕೆ ಸರಿಯಾಗಿ ಸಾಲ ಮತ್ತು ಬಡ್ಡಿಯನ್ನು ಮರುಪಾವತಿ ಮಾಡಿರುವ ಎಲ್ಲ ಸದಸ್ಯರಿಗೆ ಪ್ರಧಾನ ಕಛೇರಿಯ ಚೇರಮನ್ನರಾದ ಶ್ರೀ ಮಲ್ಲಪ್ಪ ಗಾಣಿಗೇರ ಇವರು ಅಭಿನಂದನೆ ಸಲ್ಲಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಶ್ರೀ ಡಾ.ಪ್ರಕಾಶ ಶಿವಪ್ಪ ನಿಡಗುಂದಿ, ಸಂಘದ ಸದಸ್ಯರಾದ ಶ್ರೀ ಮುತ್ತಪ್ಪ ಈರಪ್ಪನವರ, ಶ್ರೀ ಶಿವಬಸು ಖಾನಟ್ಟಿ, ಶ್ರೀ ಸಂತೋಷ ತ ಪಾರ್ಶಿ, ಶ್ರೀ ಮಹಾದೇವ ಗೋಕಾಕ, ಶ್ರೀ ಸಚೀನ ಮುನ್ಯಾಳ, ಶ್ರೀಮತಿ ಸಾಂವಕ್ಕ ಮು ಶೆಕ್ಕಿ, ಶ್ರೀಮತಿ ಭಾರತಿ ಪಾಟೀಲ, ಶ್ರೀಮತಿ ವಿದ್ಯಾಶ್ರೀ ಸು ಮುರಗೋಡ, ಶ್ರೀಮತಿ ಗೌರವ್ವ ಪಾಟೀಲ, ಶ್ರೀಮತಿ ಶೋಭಾ ಕದಂ, ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಚನ್ನಬಸಪ್ಪ ಬಗನಾಳ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.