ಬಸವರಾಜ ಹಿರೇಮಠ ಅವರು ಬೆಳಗಾವಿಯ ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜನಾ ಸದಸ್ಯ ಹುದ್ದೆಯ ಅಧಿಕಾರವನ್ನು ಬುಡಾದ ಕಾರ್ಯನಿರ್ವಾಹಕ ಎಂಜಿನೀಯರ್ ಎಸ್.ಸಿ. ನಾಯಿಕ ಅವರಿಂದ ಬುಧವಾರ ಪಡೆದರು.
ಬೆಳಗಾವಿ ನಗರ ಯೋಜನಾ ಸದಸ್ಯರಾಗಿ ಹಿರೇಮಠ
ಮೂಡಲಗಿ: ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ನಗರ ಯೋಜನಾಧಿಕಾರಿಯಾಗಿದ್ದ ಕಲ್ಲೋಳಿಯ ಬಸವರಾಜ ಹಿರೇಮಠ ಅವರು ಬೆಳಗಾವಿಯ ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜನಾ ಸದಸ್ಯ (ಟಿಪಿಎಂ) ಹುದ್ದೆಗೆ ಸರ್ಕಾರವು ವರ್ಗಾವಣೆ ಮಾಡಿರುವರು.
ಬುಧವಾರ ಬುಡಾದ ಕಾರ್ಯನಿರ್ವಾಹಕ ಎಂಜಿನೀಯರ್ ಎಸ್.ಸಿ. ನಾಯಿಕ ಅವರು ಬಸವರಾಜ ಹಿರೇಮಠ ಅವರಿಗೆ ನಗರ ಯೋಜನಾ ಸದಸ್ಯ (ಟಿಪಿಎಂ) ಎಂದು ಅಧಿಕಾರವನ್ನು ಅಧಿಕಾರವನ್ನು ಹಸ್ತಾಂತರಿಸಿದರು.