ಗೋಸಬಾಳ ಗ್ರಾಪಂಗೆ ಅಧ್ಯಕ್ಷರಾಗಿ ಬಸವರಾಜ ಸವದತ್ತಿ, ಉಪಾಧ್ಯಕ್ಷೆಯಾಗಿ ಹೇಮಾ ಹಾವಾಡಿ ಆಯ್ಕೆ
ಬೆಟಗೇರಿ:ಗೋಕಾಕ ತಾಲೂಕಿನ ಗೋಸಬಾಳ ಗ್ರಾಮ ಪಂಚಾಯಿತಿ ಎರಡನೇಯ ಅವಧಿಗೆ ಈಚೆಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಸವರಾಜ ವಿಠಲ ಸವದತ್ತಿ, ಉಪಾಧ್ಯಕ್ಷೆಯಾಗಿ ಹೇಮಾ ಯಮನಪ್ಪ ಹಾವಾಡಿ ಆಯ್ಕೆಗೊಂಡಿದ್ದಾರೆ.
ಒಟ್ಟು 16 ಸದಸ್ಯರ ಬಲ ಹೊಂದಿದ ಗೋಸಬಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳಾದ ಬಸವರಾಜ ಸವದತ್ತಿ ಅವರು 9ಮತ ಪಡೆದು ಗೆಲವು ಸಾಧಿಸಿದರು. ಪ್ರತಿಸ್ಪರ್ದಿ ಅಭ್ಯರ್ಥಿ ಮಹಾಲಿಂಗಯ್ಯ ಹಿರೇಮಠ ಕೇವಲ 7 ಮತ ಪಡೆದು ಸೋಲು ಅನುಭವಿಸಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿ ಹೇಮಾ ಹಾವಾಡಿ 9ಮತ ಪಡೆದು ಗೆಲವು ಸಾಧಿಸಿದರು. ಪ್ರತಿಸ್ಪರ್ದಿ ಅಭ್ಯರ್ಥಿ ಬಸವ್ವ ಹಿರೇಮಠ 7 ಮತ ಪಡೆದು ಸೋಲು ಅನುಭವಿಸಿದರು ಎಂದು ಚುನಾವಣಾಧಿಕಾರಿ ಗೋಕಾಕ ಜಲಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಘುರಾಮ ಎಸ್.ಬಿ ಅವರು ಘೋಷಿಸಿದರು.
ಈ ವೇಳೆ ಗ್ರಾಪಂ ಪಿಡಿಒ ಸಂಜೀವಕುಮಾರ ಜೋತಾವರ, ಜಿಪಂ ಮಾಜಿ ಸದಸ್ಯರಾದ ಡಾ.ರಾಜೇಂದ್ರ ಸಣ್ಣಕ್ಕಿ, ವಿಠಲ ಸವದತ್ತಿ, ಬಾಳಪ್ಪ ಬುಳ್ಳಿ, ಸಿದ್ಧಾರೂಢ ಮೆಳ್ಳಿಕೇರಿ, ಸುಭಾಷ ಹಾವಾಡಿ, ರಮೇಶ ಓಬ್ಬಿ, ರಮೇಶ ಇಟ್ನಾಳ, ಹನುಮಂತ ಹಾವಾಡಿ, ಗ್ರಾಪಂ ಸರ್ವ ಸದಸ್ಯರು, ಸಿಬ್ಬಂದಿ, ಹಿರಿಯ ನಾಗರಿಕರು, ರಾಜಕೀಯ ಮುಖಂಡರು, ಗ್ರಾಮಸ್ಥರು ಇದ್ದರು.