Breaking News
Home / Recent Posts / ಬಿಜೆಪಿ ಅರಭಾವಿ ಮಂಡಲದಿಂದ ಸೇವಾ ಪಾಕ್ಷಿಕ ಅಭಿಯಾನಕ್ಕೆ ಚಾಲನೆ

ಬಿಜೆಪಿ ಅರಭಾವಿ ಮಂಡಲದಿಂದ ಸೇವಾ ಪಾಕ್ಷಿಕ ಅಭಿಯಾನಕ್ಕೆ ಚಾಲನೆ

Spread the love

ಬಿಜೆಪಿ ಅರಭಾವಿ ಮಂಡಲದಿಂದ ಸೇವಾ ಪಾಕ್ಷಿಕ ಅಭಿಯಾನಕ್ಕೆ ಚಾಲನೆ

ಮೂಡಲಗಿ ಸೆ.17 : ನರೇಂದ್ರ ಮೋದಿಯವರ ಜನುಮದಿನದ ಅಂಗವಾಗಿ ವಿಶೇಷ ಗೌರವ ಅರ್ಪಿಸುವ ಪ್ರಯುಕ್ತ ದೇಶಾದ್ಯಂತ ಭಾರತೀಯ ಜನತಾ ಪಕ್ಷದ ವತಿಯಿಂದ “ಸೇವಾ ಪಾಕ್ಷಿಕ” ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಹೇಳಿದರು

ರವಿವಾರದಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಬಿಜೆಪಿ ಅರಭಾವಿ ಮಂಡಲವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿಯಾನಕ್ಕೆ, ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೇಕ್ಕಿ ಹಾಗೂ ಅಭಿಯಾನದ ಸಂಚಾಲಕ ಹಾಗೂ ಜಿಲ್ಲಾ ಯುವಮೋರ್ಚಾ ಪ್ರ.ಕಾರ್ಯದರ್ಶಿ ಗುರು ಹಿರೇಮಠ, ಸಹ ಸಂಚಾಲಕ ಹಾಗೂ ಬಿಜೆಪಿ ಅರಭಾವಿ ಮಂಡಲ ಕಾರ್ಯದರ್ಶಿ ಪಾಂಡು ಮಹೇಂದ್ರಕರಯವರ ಜೊತೆಗೂಡಿ, ಚಾಲನೆ ನೀಡಿ ಮಾತನಾಡಿದ ಅವರು, ಅರಭಾವಿ ಶಾಸಕ ಹಾಗೂ ಕೆ.ಎಮ್.ಎಫ್ ನಿರ್ದೇಶಕರಾದ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನಲ್ಲಿ, ಅರಭಾವಿಯ ಕ್ಷೇತ್ರದಲ್ಲಿ ವಿವಿಧ ರೀತಿಯ ಸೇವೆಯನ್ನು ಒದಗಿಸುವ ಸಂಕಲ್ಪ ಮಾಡಲಾಗಿದೆ ಎಂದರು.

ಅಭಿಯಾನದ ಅಂಗವಾಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.


ಈ ಸಂಧರ್ಭದಲ್ಲಿ ಬಿಜೆಪಿ ಅರಭಾವಿ ಮಂಡಲ ಪ್ರಧಾನ ಕಾರ್ಯದರ್ಶಿ ಪರಸಪ್ಪ ಬಬಲಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ ನುಗ್ಗಾನಟ್ಟಿ, ಡಾ.ಬಸವರಾಜ ಪಾಲಭಾವಿ, ಸಿದ್ದು ಗುಡ್ಡೆಕಾರ, ಆನಂದ ಟಪಾಲದಾರ, ಶ್ರೀಧರ ಸಲಬನ್ನವರ, ಜಗದೀಶ ತೇಲಿ, ಮದನ ದಾನನ್ನವರ, ಹನಮಂತ ಸತರಡ್ಡಿ, ಶಂಕರ ದೊಡ್ಡಮನಿ, ಓಂಪ್ರಕಾಶ ಕುಳ್ಳೂರ, ಚಂದ್ರಶೇಖರ ಪತ್ತಾರ, ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಭಾರತಿ ಕೋಣಿ, ಆರೋಗ್ಯ ಕೇಂದ್ರದ ಸಿಬ್ಬಂದಿ ಸೇರಿದಂತೆ ಬಿಜೆಪಿಯ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.

 


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ