Breaking News
Home / ಬೆಳಗಾವಿ / ಜ.24ರಂದು ಮೂಡಲಗಿಯಲ್ಲಿ ಬೃಹತ್ ಹಿಂದೂ ಸಮ್ಮೇಳನ

ಜ.24ರಂದು ಮೂಡಲಗಿಯಲ್ಲಿ ಬೃಹತ್ ಹಿಂದೂ ಸಮ್ಮೇಳನ

Spread the love

 

ಮೂಡಲಗಿ: ಪಟ್ಟಣದ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ಜ.24ರಂದು ಹಿಂದೂ ಸಮ್ಮೇಳನ ಕಾರ್ಯಕ್ರಮದ ಅಂಗವಾಗಿ ಮದ್ಯಾಹ್ನ 2ಗಂಟೆಗೆ ಶ್ರೀ ಶಿವಬೋಧರಂಗ ಮಠದಿಂದ ಶ್ರೀ ಬಸವ ಮಂಟಪದವರೆಗೆ ಶೋಭಾ ಯಾತ್ರೆ ನಡೆಯುವದು. ಸಂಜೆ 4ಗಂಟೆಗೆ ಬಸವ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ನಡೆಯುವದು ಎಂದು ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳು ಹೇಳಿದರು.
ಅವರು ಶನಿವಾರ ಸಂಜೆ ಶ್ರೀ ಶಿವಬೋಧರಂಗ ಮಠದಲ್ಲಿ ಹಿಂದೂ ಸಮ್ಮೇಳನದ ಕುರಿತು ನಡೆದ ಪೂರ್ವಬಾವಿ ಸಭೆಯಲ್ಲಿ ಹಿಂದೂ ಸಮ್ಮೇಳನದ ಪ್ರಚಾರ ಪತ್ರ ಬಿಡುಗಡೆ ಮಾಡಿ ಮಾತನಾಡಿ,
ಈ ಸಮ್ಮೇಳನದಲ್ಲಿ ಮೂಡಲಗಿ ಹೋಬಳಿ ಮಟ್ಟದ 12 ಹಳ್ಳಿಗಳಿಂದ ಹಿಂದೂ ಬಾಂಧವರು ಭಾಗವಹಿಸುವರು.
ಪಟ್ಟಣದ ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳು, ಶ್ರೀ ಶ್ರೀಧರಬೋಧ ಸ್ವಾಮಿಗಳು, ಮುನ್ಯಾಳ-ರಂಗಾಪೂರದ ಡಾ. ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು, ಸುಣಧೋಳಿಯ ಶ್ರೀ ಶಿವಾನಂದ ಸ್ವಾಮಿಗಳು, ಶಿವಾಪೂರದ ಶ್ರೀ ಅಡವಿಸಿದ್ದರಾಮ ಸ್ವಾಮಿಗಳು, ಜೋಕಾನಟ್ಟಿಯ ಶ್ರೀ ಬಿಳಿಯಾನಸಿದ್ದ ಸ್ವಾಮಿಗಳು ಸಾನಿಧ್ಯವಹಿಸುವರು.
ಯುವಾ ಬ್ರಿಗೇಡ್‍ದಿಂದ ಶ್ರೀ ಕಿರಣ ರಾಮ, ಆರ್.ಎಸ್.ಎಸ್.ದಿಂದ ಸಂಜಯ ನಾಯಕ ಅವರು ದಿಕ್ಸೂಚಿ ಭಾಷಣ ಮಾಡುವರು. ವೇದಿಕೆ ಕಾರ್ಯಕ್ರಮ ಮುಗಿದ ನಂತರ ಪ್ರಸಾದ ವ್ಯವಸ್ಥೆ ಇರುವದು ಎಂದು ಶ್ರೀಗಳು ತಿಲಿಸಿದರು.
ನಿಂಗಪ್ಪ ಪಿರೋಜಿ, ಶಿವಬಸು ಹಂದಿಗುಂದ, ಕೃಷ್ಣಾ ನಾಶಿ, ಈರಣ್ಣ ಕೊಣ್ಣೂರ, ಮಹಾದೇವ ಶೆಕ್ಕಿ, ಶಿವಪ್ಪ ಭುಜನ್ನವರ, ಸಂಜಯ ಮೊಕಾಶಿ, ಈರಣ್ಣ ಬನ್ನೂರ, ಹನುಮಂತ ಸತರಡ್ಡಿ, ಈರಪ್ಪ ಢವಳೇಶ್ವರ, ಮಲ್ಲಪ್ಪ ಮದಗುಣಕಿ, ಈಶ್ವರ ಮುರಗೋಡ, ರವೀಂದ್ರ ದಂತಿ, ಮೋನೇಶ ಪತ್ತಾರ, ರಾಜು ಪೂಜೇರಿ, ಅಣ್ಣಪ್ಪ ಅಕ್ಕನವರ ಇತರರು ಇದ್ದರು


Spread the love

About inmudalgi

Check Also

*ಡಾ. ಅಂಬೇಡ್ಕರ್ ಎಲ್ಲ ಸಮುದಾಯಗಳ ಆಸ್ತಿ- ಲಕ್ಕಪ್ಪ ಲೋಕುರಿ* *ಅರಭಾವಿ ಬಿಜೆಪಿ ಮಂಡಲದಿಂದ ಅಂಬೇಡ್ಕರ್ ಜಯಂತಿ ಆಚರಣೆ*

Spread the loveಗೋಕಾಕ: ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್.‌ಅಂಬೇಡ್ಕರ್ ಜಯಂತಿಯನ್ನು ಅರಭಾವಿ ಬಿಜೆಪಿ ಮಂಡಲದಿಂದ ಇಲ್ಲಿನ ಎನ್ಎಸ್ಎಫ್ ಕಚೇರಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ