Breaking News
Home / Recent Posts / ಲಕ್ಷ್ಮೀ ದೇವಿ ದರ್ಶನ ಪಡೆದ ನಂತರ ಸಾರ್ವಜನಿಕರನ್ನು ಭೇಟಿ ಮಾಡಿದ ಬಾಲಚಂದ್ರ ಜಾರಕಿಹೊಳಿ

ಲಕ್ಷ್ಮೀ ದೇವಿ ದರ್ಶನ ಪಡೆದ ನಂತರ ಸಾರ್ವಜನಿಕರನ್ನು ಭೇಟಿ ಮಾಡಿದ ಬಾಲಚಂದ್ರ ಜಾರಕಿಹೊಳಿ

Spread the love

ಹಲವು ವಿಶೇಷತೆಗಳಿಂದ ಕೂಡಿದ ತುಕ್ಕಾನಟ್ಟಿ ಹಸರಬ್ಬ- ಶಾಸಕ ಬಾಲಚಂದ್ರ ಜಾರಕಿಹೊಳಿ ಮೆಚ್ಚುಗೆ

ಲಕ್ಷ್ಮೀ ದೇವಿ ದರ್ಶನ ಪಡೆದ ನಂತರ ಸಾರ್ವಜನಿಕರನ್ನು ಭೇಟಿ ಮಾಡಿದ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ತುಕ್ಕಾನಟ್ಟಿ ಲಕ್ಷ್ಮೀ ದೇವಿಯ ಜಾತ್ರೆಯ ನಿಮಿತ್ಯವಾಗಿ ನಡೆಯುವ ಹಸರಬ್ಬವು ತನ್ನದೇಯಾದ ಪ್ರಸಿದ್ಧಿಯನ್ನು ಪಡೆದಿದ್ದು, ಹಲವು ವಿಶೇಷತೆಗಳಿಂದ ಕೂಡಿರುವ ತುಕ್ಕಾನಟ್ಟಿ ಹಸರಬ್ಬ ಎಂದು ಶಾಸಕ, ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಲಕ್ಷ್ಮೀದೇವಿಯ ದರ್ಶನ ಪಡೆದು ಮಾತನಾಡಿದ ಅವರು, ಗ್ರಾಮದ ಎಲ್ಲ ಸಮಾಜ ಬಾಂಧವರು ದೇವಿಗೆ ವಿಶೇಷವಾದ ನೈವೇದ್ಯಯನ್ನು ಅರ್ಪಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಎಂದು ಹೇಳಿದರು.


ಕಳೆದ ತಿಂಗಳು ೨೬ ರಂದು ಹಸರಬ್ಬ ಕಾರ್ಯಕ್ರಮದಲ್ಲಿ ಅನೀವಾರ್ಯ ಕಾರಣದಿಂದ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ನನ್ನ ಆಗಮನಕ್ಕೆ ಸದಾಕಾಲವೂ ಕಾಯುವ ನಿಮ್ಮ ಮನಸ್ಸಿಗೆ ನೋವಾಗಬಾರದು ಎಂದು ತಿಳಿದು ಇಂದು ಗ್ರಾಮಕ್ಕೆ ಬಂದಿರುವುದಾಗಿ ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಅಭೂತಪೂರ್ವ ಜಯಕ್ಕೆ ಇಲ್ಲಿನ ಎಲ್ಲ ಕಾರ್ಯಕರ್ತರು ಕಾರಣರಾಗಿದ್ದಾರೆ. ಇದು ತಮ್ಮ ಚುನಾವಣೆ ಅಂತಾ ತಿಳಿದುಕೊಂಡು ನನ್ನ ಗೆಲುವಿಗೆ ಶಕ್ತಿ ನೀಡಿದ್ದಾರೆ. ಕುಟುಂಬದ ಸದಸ್ಯನೆಂದು ಭಾವಿಸಿಕೊಂಡು ನಾನು ಪ್ರಚಾರಕ್ಕೆ ಬಾರದಿದ್ದರೂ ಪ್ರೀತಿ, ವಿಶ್ವಾಸದಿಂದ ಮತಗಳನ್ನು ನೀಡಿದ್ದೀರಿ. ತುಂಬಾ ಆಭಾರಿಯಾಗಿರುವುದಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಸಾಕಷ್ಟು ಕೆಲಸಗಳನ್ನು ಮಾಡಿದ್ದರೂ ಮತದಾರ ಪ್ರಭುಗಳು ನಮ್ಮ ಪಕ್ಷವನ್ನು ಕೈ ಹಿಡಿಯಲಿಲ್ಲ. ಈಗಿರುವ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ಸಹ ನೀಡುತ್ತಿಲ್ಲ. ಇದರಿಂದ ಹೊಸ ಹೊಸ ಕಾಮಗಾರಿಗಳಿಗೆ ಸರ್ಕಾರ ಅನುಮೋದನೆಯನ್ನು ಸಹ ವಿಳಂಬವಾಗಿ ನೀಡುತ್ತಿದೆ ಎಂದು ಹೇಳಿದರು.
ಮುಂದಿನ ತಿಂಗಳು ನಡೆಯುವ ಪಂಚ ರಾಜ್ಯ ಚುನಾವಣೆಗಳಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಜೊತೆಗೆ ೨೦೨೪ ರಲ್ಲಿ ಜರುಗುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಸ್ಪಷ್ಟ ಬಹುಮತದಿಂದ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ವಿಶ್ವದ ಪ್ರಚಂಡ ನಾಯಕ ನರೇಂದ್ರ ಮೋದಿಯವರು ಮತ್ತೊಂದು ಅವಧಿಗೆ ಭಾರತವನ್ನು ಮುನ್ನಡೆಸಲಿದ್ದಾರೆ ಎಂದು ಆಶಾ ಭಾವನೆ ವ್ಯಕ್ತಪಡಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಲಕ್ಷ್ಮೀ ದೇವಿ ಟ್ರಸ್ಟ್ ಕಮೀಟಿ, ಸಾರ್ವಜನಿಕರು, ವಿವಿಧ ಸಂಸ್ಥೆಗಳ ಪರವಾಗಿ ಸತ್ಕರಿಸಲಾಯಿತು.
ನಂತರ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರನ್ನು ಭೇಟಿ ಮಾಡಿ ಅವರ ಕುಂದು- ಕೊರತೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದಪ್ಪ ಹಮ್ಮನವರ, ಶಿವಪ್ಪ ಮರ್ದಿ, ಪರಸಪ್ಪ ಗದಾಡಿ, ಜಿ.ಎಲ್. ಕಂಕಣವಾಡಿ, ಗಂಗಾರಾಮ ಗುಡಗುಡಿ, ಸೋಮು ಹುಲಕುಂದ, ಕುಮಾರ ಮರ್ದಿ, ಡಾ. ವಸಂತ ನಾಯಿಕವಾಡಿ, ಭೀಮಶಿ ಗದಾಡಿ, ಆಶೀರ್ವಾದ ಹುಲಕುಂದ, ಯನನಪ್ಪ ಗದಾಡಿ, ಬಸು ಮರ್ದಿ, ಮುತ್ತೆಪ್ಪ ತುರನೂರ ( ಪೂಜೇರಿ), ಸಿದ್ದಪ್ಪ ಮರ್ದಿ, ಬಾಪು ಹುಲಕುಂದ, ತಮ್ಮಣ್ಷಾ ಬಾಗೇವಾಡಿ, ಭರಮಪ್ಪ ಹರಿಜನ, ಸತ್ತೆಪ್ಪ ಮಲ್ಲಾಪೂರ, ಗಂಗಾರಾಮ ಹಮ್ಮನವರ,ಯಲ್ಲಪ್ಪ ಹುಲಕುಂದ, ಭೀಮಶಿ ಅರಭಾವಿ, ರಾಮಪ್ಪ ಬಾಗೇವಾಡಿ, ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ