Breaking News
Home / Recent Posts / ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಚಿತ್ರಕಲಾ ಸ್ಪರ್ಧೆ

ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಚಿತ್ರಕಲಾ ಸ್ಪರ್ಧೆ

Spread the love

 ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಚಿತ್ರಕಲಾ ಸ್ಪರ್ಧೆ

‘ಚಿತ್ರಕಲೆ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುತ್ತದೆ’

ಮೂಡಲಗಿ: ‘ಚಿತ್ರಕಲೆಯು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತದೆ’ ಎಂದು ಶ್ರೀನಿವಾಸ ಶಾಲೆಯ ಪ್ರಾಚಾರ್ಯ ಶಂಕರ ಬಿ. ಮಠಪತಿ ಅವರು ಹೇಳಿದರು.
ಇಲ್ಲಿಯ ಶ್ರೀನಿವಾಶ ಶಾಲೆಯ ಆತಿಥ್ಯದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಶಾಂತಿ ಸಂದೇಶ ಕುರಿತಾದ ಅಂತರ್‍ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು ಮಕ್ಕಳಲ್ಲಿಯ ಕೌಶಲತೆಯನ್ನು ಹೊರಹಾಕುವಲ್ಲಿ ಚಿತ್ರಕಲೆಯು ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಅತಿಥಿ ಶ್ರೀಧರಬೋಧ ಸ್ವಾಮೀಜಿ ಮಾತನಾಡಿ ಚಿತ್ರಕಲೆ ಎನ್ನುವುದು ಧ್ಯಾನ ಇದ್ದಂತೆ. ಮಕ್ಕಳ ಮನಸ್ಸನ್ನು ಕೇಂದ್ರಿಕರಿಸುವ ಶಕ್ತಿ ಚಿತ್ರಕಲ್ಲಿ ಇದೆ. ಲಯನ್ಸ್ ಕ್ಲಬ್ ಪರಿವಾರದದವರು ಮಕ್ಕಳಲ್ಲಿ ಚಿತ್ರಕಲೆಯ ಬಗ್ಗೆ ಅಭಿರುಚಿ ಬೆಳೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀಶೈಲ್ ಲೋಕನ್ನವರ ಅಧ್ಯಕ್ಷತೆವಹಿಸಿದ್ದರು.
ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.
ಶ್ರೀನಿವಾಸ ಶಾಲೆಯ ಕಾರ್ಯದರ್ಶಿ ವೆಂಕಟೇಶ ಪಾಟೀಲ, ಕೃಷ್ಣಾ ಕೆಂಪಸತ್ತಿ, ಸಂಜಯ ಮೋಕಾಶಿ, ಶಿವಾನಂದ ಗಾಡವಿ, ಚಿತ್ರಕಲಾ ಶಿಕ್ಷಕ ಸಿದ್ದು ಹಾಗೂ ಶಾಲೆಯ ಸಿಬ್ಬಂದಿಯವರು ಭಾಗವಹಿಸಿದ್ದರು.
ವಿಜೇತರು: ಆದಿತಿ ಅ. ಸ್ವಾಮಿ (ಪ್ರಥಮ), ಶ್ರೀನಿಧಿ ಎಂ. ಕಂಕಣವಾಡಿ (ದ್ವಿತೀಯ), ರೋಹಿತ ಬಿ. ಸನದಿ ಮತ್ತು ಮೀತ ಎಚ್. ಪಟೇಲ (ತೃತೀಯ).


Spread the love

About inmudalgi

Check Also

ಹಣಮಂತ ಹುಚರಡ್ಡಿ ನಿಧನ

Spread the loveಮೂಡಲಗಿ : ತಾಲ್ಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿ ಹಣಮಂತ ರಾಮಪ್ಪ ಹುಚರಡ್ಡಿ (80) ಮಂಗಳವಾರ ನಿಧನರಾದರು. ಮೃತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ