ಮೂಡಲಗಿ: ಸದೃಢ ಭಾರತ ನಿರ್ಮಾಣ ಮಾಡುವಲ್ಲಿ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಿ ಸುಶಿಕ್ಷುತ ಸಮಾಜ ನಿರ್ಮಾಣ ಮಾಡಿದಾಗ ಮಾತ್ರ ಸಾಧ್ಯ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಿ.ಆರ್ ಪತ್ತಾರ ಹೇಳಿದರು.
ಅವರು ಸಮೀಪದ ಪಟಗುಂದಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ನವಭಾರತ ಸಾಕ್ಷರತಾ ಕಾರ್ಯಕ್ರಮದಡಿ ಸಾಮಾಜಿಕ ಚೇತನಾ ಕೇಂದ್ರದಲ್ಲಿ ಮಾತನಾಡಿ, ಭಾರತ ದೇಶವು ಜನಸಂಖ್ಯಾಧರಿತವಾಗಿ ವಿಶ್ವದ ಗಮನ ಸೆಳೆಯುತ್ತಿದೆ ಅದರ ಜೊತೆಯಲ್ಲಿ ಸುಶಿಕ್ಷಿತ ಶಿಕ್ಷಣದ ಪ್ರಾಮುಖ್ಯತೆಯಿದೆ. ಅನಕ್ಷರಸ್ಥರನ್ನು ಸಹ ಶಿಕ್ಷಿತರನ್ನಾಗಿಸಿ ಸಾಮಾಜಿಕ ಪೀಡುಗಾಗಿರುವ ಅನಕ್ಷರತೆಯನ್ನು ಹೊರಹಾಕಿ ಉತ್ತಮ ಅಕ್ಷರದ ಜ್ಞಾನದ ಜೊತೆಯಲ್ಲಿ ಸಾಗುವದು ಉತ್ತಮವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ನವಭಾರತ ಸಾಕ್ಷರತಾ ಕಾರ್ಯಕ್ರಗಳನ್ನು ಯಶಸ್ವಿಗೋಳಿಸಬೇಕು ಎಂದು ನುಡಿದರು.
ಪ್ರಧಾನ ಗುರುಗಳಾದ ಸಂಜೀವ ದಡ್ಡಿಮನಿ, ರಾಜೀವ ಕೊಳದೂರ ಮಾತನಾಡಿ, ಅತೀ ಹೆಚ್ಚು ಗ್ರಾಮೀಣ ಪ್ರದೇಶಗಳನ್ನು ಹೊಂದಿರುವ ಭಾರತ ದೇಶವು ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಸಾಮಾನ್ಯ ಜನರ ಜೊತೆಯಾಗಿ ಸಹಕಾರಯುತ ಸಹಬಾಳ್ವೆ ನಡೆಸುವಂತೆ ಪ್ರೇರೆಪಿಸುವ ಕಾರ್ಯವಾಗಿದೆ. ಸಾಕ್ಷರ ಭಾರತ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಜೊತೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನಿಯೋಜನೆಯ ಮೇರೆಗೆ ಆಗಮಿಸಿ ಶೈಕ್ಷಣಿಕವಾಗಿ ಯಶಸ್ಸಿನ ಜೊತೆಗೆ ಆರ್ಥಿಕವಾಗಿ ಕಲಿಕೋಪಕರಣಗಳನ್ನು ನೀಡಿದ ಶಿಕ್ಷಕರಾದ ಶಿವರಾಜ ಕಾಂಬಳೆ ಹಾಗೂ ನೂತನವಾಗಿ ಆಯ್ಕೆಯಾಗಿ ಶಾಲೆಗೆ ಸಹ ಶಿಕ್ಷಕಿಯಾಗಿ ಹಾಜರಾದ ಸ್ವರ್ಣಾಂಭ ಇವರನ್ನು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಜಾಯಿದಾಬಿ ಪೀರಜಾದೆ, ಎಸ್.ಡಿ.ಎಮ್.ಸಿ ಅಧ್ಯಕ್ಷ ಯಲ್ಲಪ್ಪ ಪೂಜೇರ, ಬಿಆರ್‍ಪಿ ಎಸ್.ಕೆ ಭಜಂತ್ರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಕೆ.ಎಲ್ ಮೀಶಿ, ಪ್ರಧಾನ ಗುರುಗಳಾದ ಪ್ರಕಾಶ ಕಾಂಬಳೆ, ಮಹಾವೀರ ಸಲ್ಲಾಗೋಳ. ಪೆಂಡಾರಿ, ಗ್ರಾ.ಪಂ ಕಾರ್ಯದರ್ಶಿ ಚಂದನ ಬನಸೂಡೆ, ಮಹಾಂತೇಶ ಭಜಂತ್ರಿ, ನದಾಫ್, ಲಕ್ಷ್ಮೀ ಕೇಳಗೇರಿ, ಜಯಶ್ರೀ ಸರ್ವಿ ಹಾಗೂ ಮತ್ತಿತರರು ಇದ್ದರು.