ಮೂಡಲಗಿಯ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಬುಧವಾರ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಪತ್ರಿಕಾ ವಿತರಕರನ್ನು ಸನ್ಮಾನಿಸಿದರು.
-ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ
ಮೂಡಲಗಿ: ‘ದಿನಪತ್ರಿಕೆಗಳನ್ನು ಓದುಗರ ಕೈಗೆ ತಲುಪಿಸುವಲ್ಲಿ ಪತ್ರಿಕೆ ವಿತರಕರ ಪಾತ್ರ ಮಹತ್ವದಾಗಿದೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.
ಇಲ್ಲಿಯ ಕರ್ನಾಟಕ ರಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಲಂiÀiನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಆಚರಿಸಿದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಪತ್ರಿಕಾ ವಿತರಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪತ್ರಿಕೋದ್ಯಮದಲ್ಲಿ ಪ್ರಕಾಶಕರು ಮತ್ತು ಸಂಪಾದಕ ಮಂಡಳಿ ಎಷ್ಟು ಮಹತ್ವವೋ ಅಷ್ಟೇ ಪತ್ರಿಕೆಯ ವಿತರಣೆಯ ಕೊನೇ ಕೊಂಡಿಯಾಗಿರುವ ಪತ್ರಿಕಾ ವಿತರಕರು ಮಹತ್ವ ಎನಿಸುತ್ತಾರೆ, ಸಮಾಜ ಮತ್ತು ಸರ್ಕಾರವು ಅವರನ್ನು ನಿರ್ಲಕ್ಷಿಸಬಾರದು ಎಂದರು.
ಪತ್ರಿಕಾ ವಿತರಕರು ಚಳಿ, ಮಳೆ, ಬಿಸಿಲು ಲೆಕ್ಕಿಸದೆ ರಜೆ ಇಲ್ಲದೆ ಪ್ರತಿ ದಿನ ಓದುಗರಿಗೆ ದಿನಪತ್ರಿಕೆ ಮುಟ್ಟಿಸುವಲ್ಲಿ ಪ್ರಾಮಾಣಿಕ ಕಾರ್ಯವನ್ನು ಮಾಡುತ್ತಿದ್ದಾರೆ. ಸರ್ಕಾರವು ಪತ್ರಿಕಾ ವಿತರಕರಿಗೂ ಕಾರ್ಮಿಕರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ನೀಡುವ ಬಗ್ಗೆ ಆಶ್ವಾಸನೆಯನ್ನು ಕಳೆದ ವರ್ಷ ನೀಡಿತ್ತು ಆದರೆ ಇನ್ನುವರೆಗೆ ಅದು ಅನುಷ್ಠಾನಗೊಂಡಿರುವುದಿಲ್ಲ. ಪತ್ರಿಕಾ ವಿತರಕರನ್ನು ಕಾರ್ಮಿಕರೆಂದು ಪರಿಗಣಿಸಿ ವಿವಿಧ ಸೌಲಭ್ಯಗಳನ್ನು ನೀಡಬೇಕು ಎಂದರು.
ಹಿರಿಯ ಪತ್ರಕರ್ತ ಉಮೇಶ ಬೆಳಕೂಡ, ಲಯನ್ಸ ಕ್ಲಬ್ ಅಧ್ಯಕ್ಷ ಸಂಜಯ ಮೋಕಾಶಿ ಮಾತನಾಡಿದರು.
ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ವಿತರಕರಿಗೆ ಸಿಹಿ, ಕರುನಾಡು ಸೈನಿಕ ಕೇಂದ್ರದಿಂದ ಟೀಶರ್ಟ್ ನೀಡಿ ಗೌರವಿಸಿದರು.
ಸಂಘದ ಅಧ್ಯಕ್ಷ ಕೃಷ್ಣಾ ಗಿರೆಣ್ಣವರ ಅಧ್ಯಕ್ಷತೆವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬೋಳನ್ನವರ ಪ್ರಾಸ್ತಾವಿಕ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಲಿಂಗಪ್ಪ ಗಾಡವಿ, ಶಿವಾನಂದ ಗಾಡವಿ, ಅಲ್ತಾಫ ಹವಾಲ್ದಾರ, ಸುಭಾಷ ಕಡಾಡಿ, ಶಿವಬಸು ಗಾಡವಿ, ಈಶ್ವರ ಢವಳೇಶ್ವರ, ಸಿದ್ದಪ್ಪ ಕಪ್ಪಲಗುದ್ದಿ, ಸುನಿಲ ಗಸ್ತಿ ಭಾಗವಹಿಸಿದ್ದರು.
ಚಂದ್ರಶೇಖರ ಪತ್ತಾರ ವಂದಿಸಿದರು.