Breaking News
Home / Recent Posts / ಮೂರು ವರ್ಷದ ಭಜನಾ ಕಲಾವಿದ ಬಾಲಕನಿಗೆ ಸತ್ಕಾರ

ಮೂರು ವರ್ಷದ ಭಜನಾ ಕಲಾವಿದ ಬಾಲಕನಿಗೆ ಸತ್ಕಾರ

Spread the love

ಮೂರು ವರ್ಷದ ಭಜನಾ ಕಲಾವಿದ ಬಾಲಕನಿಗೆ ಸತ್ಕಾರ

ಮೂಡಲಗಿ: ತಾಲೂಕಿನ ಮುನ್ಯಾಳ ಗ್ರಾಮದಲ್ಲಿ ಒಂದು ತಿಂಗಳ ಕಾಲ ಶ್ರಾವಣ ಮಾಸದಲ್ಲಿ ಜರುಗಿದ ಭಜನಾ ಕಾರ್ಯಕ್ರಮದಲ್ಲಿ ಪ್ರತಿದಿನ ಪಾಲ್ಗೊಂಡ ಮೂರು ವರ್ಷದ ಅಮೀತ್ ಶಿವಾನಂದ ಮಡಿವಾಳರ ಎಂಬ ಬಾಲಕನ್ನು ಭಜನಾ ಮಂಡಳಿಯವರು ಸತ್ಕರಿಸಿ ಗೌರವಿಸಿದರು.

ಮುನ್ಯಾಳ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾದಲ್ಲಿ ಶ್ರಾವಣ ಮಾಸದಲ್ಲಿ ಪ್ರತಿ ದಿವಸ ಮುಂಜಾನೆ ಮತ್ತು ರಾತ್ರಿ ಭಜನಾ ಕಾರ್ಯಕ್ರಮ ಜರುಗುವುದು. ಪ್ರತಿದಿನ ಬೆಳಗಿನ ಜಾವ ಶ್ರೀ ಮಲ್ಲಿಕಾರ್ಜುನ ದೇವಸ್ಥಾದಿಂದ ಗ್ರಾಮದ ವಿವಿಧ ಗಲ್ಲಿಯ ಮುಖಾಂತ ಮರಳಿ ದೇವಸ್ಥಾನಕ್ಕೆ ತಲುಪುವ ಓಂಕಾರ ಭಜನೆಯಲ್ಲಿ ಮೂರು ವರ್ಷದ ಬಾಲಕ ಅಮೀತ್ ಶಿವಾನಂದ ಮಡಿವಾಳರ ಪ್ರತಿ ದಿನ ಭಜನಾ ಮಂಡಳಿಯವರೊಂದಿಗೆ ಕೂಡಿ ದಮಡಿ ನುಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಭಜನಾ ಮಂಡಳಿಯವರು ಮೂರು ವರ್ಷದ ಬಾಲಕ ಅಮೀತನ್ನು ಭಜನಾ ಸಮಾರೋಪ ದಿನದಂದು ಸತ್ಕರಿಸಿ ಗೌರವಿಸಿದರು.
ಈ ಸಮಯದಲ್ಲಿ ಭಜನಾ ಕಲಾವಿದರಾದ ಅರ್ಜುನ್ ಚಿವಟಗುಂಡಿ, ಸಂಗಪ್ಪ ಮುರಗೋಡ, ಹಣಮಂತ ಸನದಿ, ಪಾಂಡಪ್ಪ ಢವಳೇಶ್ವರ, ಸದಾಶಿವ ಗೋಡಿಗೌಡ್ರ, ವಿಠ್ಠಲ ಮಡಿವಾಳರ, ಬಾಳಪ್ಪ ನಾಯಿಕ, ಸಿದ್ದಾರೂಢ ಬಡಿಗೇರ, ಉಮೇಶ ಕೌಜಲಗಿ, ಲಕ್ಷ್ಮೀ ಮಡಿವಾಳರ, ಕಾಳವ್ವ ಮಡಿವಾಳರ, ಮಹಾದೇವಿ ಬಾಲಾಮಸಿ, ವಿನಾಯಕ ಮಡಿವಾಳರ ಮತ್ತಿತರರು ಇದ್ದರು.


Spread the love

About inmudalgi

Check Also

ಹಣಮಂತ ಹುಚರಡ್ಡಿ ನಿಧನ

Spread the loveಮೂಡಲಗಿ : ತಾಲ್ಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿ ಹಣಮಂತ ರಾಮಪ್ಪ ಹುಚರಡ್ಡಿ (80) ಮಂಗಳವಾರ ನಿಧನರಾದರು. ಮೃತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ