ಸನ್ಮಾನ

ಮೂಡಲಗಿ:-ಪಟ್ಟಣದ ಪ್ರತಿಷ್ಠಿತ ದಿ.ಮೂಡಲಗಿ ಕೋ-ಆಪ್ ಬ್ಯಾಂಕಿನ ಸಭಾ ಭವನದಲ್ಲಿ ವಿದೇಶ ಪ್ರಯಾಣ ಮಾಡಿ ಬಂದಿರುವ ಬೆಳಗಾವಿ. ಡಿ.ಸಿ.ಸಿ.ಬ್ಯಾಂಕಿನ ಉಪಾಧ್ಯಕ್ಷರಾದ ಸುಭಾಸ ಢವಳೇಶ್ವರ ಅವರಿಗೆ ಮೂಡಲಗಿ ತಾಲೂಕಾ ಪಂಚಮಸಾಲಿ ಘಟಕದವತಿಯಿಂದ ಸನ್ಮಾನ ಮಾಡಲಾಯಿತು.
ಡೆನ್ಮಾರ್ಕ್, ನಾರ್ವೆ, ಜರ್ಮನ್,ಐಸ್ ಲ್ಯಾಂಡ್, ಪ್ಯಾರಿಸ್ (ಪ್ರಾನ್ಸ್) ಮತ್ತು ದುಬೈ ಈ ಎಲ್ಲ ದೇಶಗಳನ್ನು ಸುಖಕರ ಪ್ರಯಾಣ ಮಾಡಿ ಬಂದಿರುವ ಸುಭಾಸ ಢವಳೇಶ್ವರ ಅವರಿಗೆ ಪಂಚಮಸಾಲಿ ಮುಖಂಡರು ಗೌರವದ ಸನ್ಮಾನ ಮಾಡಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಕಾರ್ಯಾಧ್ಯಕ್ಷರು ಪಂಚಮಸಾಲಿ ನಿಂಗಪ್ಪ ಪಿರೋಜಿ,ಮೂಡಲಗಿ ತಾಲೂಕಾ ಪಂಚಮಸಾಲಿ ಅಧ್ಯಕ್ಷರು ಬಸವರಾಜ ಪಾಟೀಲ, ಪಂಚಮಸಾಲಿ ಮುಖಂಡರು ಶಿವಬಸು ಖಾನಟ್ಟಿ, ಮೂಡಲಗಿ ಘಟಕದ ಪಂಚಮಸಾಲಿ ಅಧ್ಯಕ್ಷರು ಬಸವರಾಜ ರಂಗಾಪೂರ, ಯುವ ಘಟಕದ ಅಧ್ಯಕ್ಷರು ಸಂಗಮೇಶ ಕೌಜಲಗಿ, ಶಿವಾನಂದ ಢವಳೇಶ್ವರ, ಪುರಸಭೆ ಸದಸ್ಯರು ಶಿವಾನಂದ ಚಂಡಕಿ, ಶಿವಬಸು ನಿಪನಾಳ, ಶ್ರೀಶೈಲ ಬಳಿಗಾರ, ರೇವಪ್ಪ ಕೋರಿಶಟ್ಟಿ, ಸದಾಶಿವ ನಿಡಗುಂದಿ, ಮಹಾದೇವ ಗೋಕಾಕ, ಸುಭಾಸ ಕಡಾಡಿ, ಚಂದ್ರು ದರೂರ, ರವಿ ಬಾಗೋಜಿ ಇನ್ನು ಅನೇಕರು ಉಪಸ್ಥಿತರಿದ್ದರು.