Breaking News
Home / Recent Posts / ಭಾರತ ಮಾತೆಯ ನೂತನ ಭವ್ಯ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಹಾಗೂ ಲೋಕಾರ್ಪನೆ

ಭಾರತ ಮಾತೆಯ ನೂತನ ಭವ್ಯ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಹಾಗೂ ಲೋಕಾರ್ಪನೆ

Spread the love

ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮಲೆನಾಡಗಾಂಧಿ ಎಚ್.ಜಿ.ಗೋವಿಂದೇಗೌಡ ರಾಜ್ಯ ಪ್ರಶಸ್ತಿ ಪುರಸ್ಕøತ ವಿವಿಡಿ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಬೆಟಗೇರಿ ಸೈನಿಕರ ಬಳಗದ ವತಿಯಿಂದ ನಿರ್ಮಿಸಲಾದ ಭಾರತ ಮಾತೆಯ ನೂತನ ಭವ್ಯ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಹಾಗೂ ಲೋಕಾರ್ಪನೆ, ನಿವೃತ್ತ ಸೈನಿಕರಿಗೆ ಗೌರವ ಸತ್ಕಾರ ಸಮಾರಂಭ ಕಾರ್ಗಿಲ್ ವಿಜಯ ದಿವಸ ಸಂಸ್ಮರಣೆ ಅಂಗವಾಗಿ ಸೋಮವಾರ ಜುಲೈ.26ರಂದು ಮುಂಜಾನೆ 9 ಗಂಟೆಗೆ ನಡೆಯಲಿದೆ.
ಕರೊನಾ ರೋಗ ನಿರ್ಮೂಲನಾರ್ಥ ಹಾಗೂ ಲೋಕ ಕಲ್ಯಾಣಾರ್ಥ ನವಗ್ರಹ ಹೋಮ, ವಿವಿಧ ಕಾರ್ಯಕ್ರಮಗಳು ಬೆಳಗ್ಗೆ 5 ಗಂಟೆಗೆ ಜರುಗಲಿವೆ. ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಸ್ವಾಮಿಜಿ ದಿವ್ಯ ಸಾನಿಧ್ಯ, ಕಟಕೋಳ ಸಿದ್ಧೇಶ್ವರ ಮಠದ ಅಭಿನವ ಸಿದ್ರಾಯಜ್ಜನವರು ನೇತೃತ್ವ, ಸ್ಥಳೀಯ ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಕುತುಬುದ್ದಿನ್ ಮಿರ್ಜಾನಾಯ್ಕ ಅಧ್ಯಕ್ಷತೆ ವಹಿಸಲಿದ್ದು, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಭಾರತ ಮಾತೆಯ ನೂತನ ಭವ್ಯ ವಿಗ್ರಹ ಲೋಕಾರ್ಪನೆ ಕಾರ್ಯಕ್ರಮ ನೆರವೇರಿಸಲಿದ್ದಾರೆ.
ಧಾರವಾಡ ಬಿಇಒ ಶ್ರೀಶೈಲ ಕರಿಕಟ್ಟಿ, ಮೂಡಲಗಿ ಬಿಇಒ ಅಜೀತ ಮನ್ನಿಕೇರಿ, ಗೋಕಾಕ ಬಿಇಒ ಜಿ.ಬಿ.ಬಳಿಗಾರ, ಕುಲಗೋಡ ಪಿಎಸ್‍ಐ ಹನಮಂತ ನರಳೆ ಮುಖ್ಯತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸ್ಥಳೀಯ ಸೈನಿಕರ ಬಳಗ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬಾಕ್ಸ್ ಐಟಮ್: ಸ್ಥಳೀಯ ಸೈನಿಕರಿಂದ ಕೊಡುಗೆ: ಕನ್ನಡ ಸಾರಸ್ವತ ಲೋಕದ ದಿಗ್ಗಜ ಡಾ.ಬೆಟಗೇರಿ ಕೃಷ್ಣಶರ್ಮರ ಹುಟ್ಟೂರು ಬೆಟಗೇರಿ ಗ್ರಾಮದ ಸೇವಾನಿರತ ಹಾಗೂ ನಿವೃತ್ತರು ಸೇರಿ ಒಟ್ಟು 58 ಜನ ಸೈನಿಕರಿಂದ ಮಾತ್ರ ವಂತಿಗೆಯನ್ನು ಇಲ್ಲಿಯ ಸೈನಿಕರ ಬಳಗದವರು ಸಂಗ್ರಹಿಸಿ, ಇಂದಿನ ಶಾಲಾ ಮಕ್ಕಳು, ಯುವಕರಲ್ಲಿ ದೇಶಪ್ರೇಮ ಬೆಳೆಸುವ ಉದ್ದೇಶದಿಂದ ಸುಮಾರು 5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸ್ಥಳೀಯ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಭಾರತಾಂಬೆಯ ನೂತನ ವಿಗ್ರಹ, ರಾಷ್ಟ್ರ ಲಾಂಛನಗಳನ್ನು ನಿರ್ಮಿಸಿ ಕೊಡುಗೆ ನೀಡಿದ್ದಾರೆ. ಗ್ರಾಮದ ಸೇವಾನಿರತ ಹಾಗೂ ನಿವೃತ್ತ ಸೈನಿಕ ಬಳಗದವರು ಕಾರ್ಗಿಲ್ ವಿಜಯ ದಿವಸದಂದು ಭಾರತಮಾತೆಯ ನೂತನ ಮೂರ್ತಿ, ರಾಷ್ಟ್ರ ಲಾಂಛನಗಳನ್ನು ಲೋಕಾರ್ಪನೆ ಮಾಡುತ್ತಿರುವ ಕಾರ್ಯ ದೇಶಭಕ್ತಿಯ ಪ್ರತೀಕಕ್ಕೆ ಸಾಕ್ಷಿಯ ಶ್ಲಾಘನೀಯ ಸಂಗತಿಯಾಗಿದೆ.

 


Spread the love

About inmudalgi

Check Also

ಆಹಾರ ಪದಾರ್ಥಗಳಲ್ಲಿ ಸತ್ವ ಹೆಚ್ಚಿಸಲು ಸಾವಯವ ಕೃಷಿಗೆ ಮಹತ್ವ ನೀಡಿ- ಸಂಸದ ಈರಣ್ಣ ಕಡಾಡಿ

Spread the loveಆಹಾರ ಪದಾರ್ಥಗಳಲ್ಲಿ ಸತ್ವ ಹೆಚ್ಚಿಸಲು ಸಾವಯವ ಕೃಷಿಗೆ ಮಹತ್ವ ನೀಡಿ- ಸಂಸದ ಈರಣ್ಣ ಕಡಾಡಿ ಮೂಡಲಗಿ: ಹೆಚ್ಚು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ