Breaking News
Home / ರಾಜ್ಯ / ಅಗಲಿದ ರತನ್ ಟಾಟಾ

ಅಗಲಿದ ರತನ್ ಟಾಟಾ

Spread the love

 

ಬೆಳಗಾವಿ- ಭಾರತಾಂಬೆಯ ಹೆಮ್ಮೆಯ ಸುಪುತ್ರ, ಪ್ರಸಿದ್ಧ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಅಗಲಿಕೆಗೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಟಾಟಾ ಅವರು ಅಪ್ಪಟ ರಾಷ್ಟ್ರಭಕ್ತ, ದೂರದೃಷ್ಟಿಯ ನಾಯಕ, ಭಾರತೀಯ ಕೈಗಾರಿಕೆ ಉದ್ಯಮದಲ್ಲಿ ಅಪ್ರತಿಮ ಸಾಧಕರಾಗಿದ್ದರು. ಟಾಟಾ ಅವರು ಕೇವಲ ಉದ್ಯಮಿಯಾಗಿರಲಿಲ್ಲ. ಸಮಗ್ರತೆ, ಅಚಲವಾದ ಬದ್ಧತೆ, ಭಾರತದ ಆತ್ಮವನ್ನು ಸಾಕಾರಗೊಳಿಸಿದ
ದಂತಕತೆಯಾಗಿದ್ದರು. ಸಮಾಜದ ಒಳತಿಗಾಗಿ ಶ್ರಮಿಸಿದ ಮಹಾನ್ ಚೇತನ. ಟಾಟಾ ಸಮೂಹವನ್ನು ಜಾಗತೀಕವಾಗಿ ಉದ್ಯಮವನ್ನು ಮಾಡಿರುವ ಶ್ರೇಯಸ್ಸು ಟಾಟಾ ಅವರಿಗೆ ಸಲ್ಲುತ್ತದೆ. ಟಾಟಾ ಅವರ ದಿವ್ಯ ಆತ್ಮಕ್ಕೆ ಪರಮಾತ್ಮನು ಚಿರಶಾಂತಿಯನ್ನು ನೀಡಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ.


Spread the love

About inmudalgi

Check Also

*ಅರಭಾವಿಯಲ್ಲಿ ಎಆರ್ಟಿಓ ಕಚೇರಿ ಮತ್ತು ಚಾಲನಾ ಪಥ ಉದ್ಘಾಟಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ*

Spread the love ಮೂಡಲಗಿ: ಚಾಲನಾ ಪರವಾನಗಿ ಪಾಸಾಗಲು ಇನ್ನು ಮುಂದೆ ಮ್ಯಾನುಯೆಲ್‌ ಇರುವುದಿಲ್ಲ. ಬದಲಾಗಿ ಎಲ್ಲ ಚಾಲನಾ ಪಥಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ