Breaking News
Home / ರಾಜ್ಯ / ಬೆಟಗೇರಿ ಗ್ರಾಪಂಗೆ ನೂತನ ಅಧ್ಯಕ್ಷೆಯಾಗಿ ಯಲ್ಲವ್ವ ಚಂದರಗಿ ಆಯ್ಕೆ

ಬೆಟಗೇರಿ ಗ್ರಾಪಂಗೆ ನೂತನ ಅಧ್ಯಕ್ಷೆಯಾಗಿ ಯಲ್ಲವ್ವ ಚಂದರಗಿ ಆಯ್ಕೆ

Spread the love

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಅ.10ರಂದು ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ಯಲ್ಲವ್ವ ಲಕ್ಷ್ಮಣ ಚಂದರಗಿ ಆಯ್ಕೆಗೊಂಡಿದ್ದಾರೆ.

ಒಟ್ಟು 13 ಸದಸ್ಯರ ಬಲ ಹೊಂದಿದ ಬೆಟಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ನಡೆದು ಪ್ರತಿಸ್ಪರ್ದಿ ಅಭ್ಯರ್ಥಿಯಾಗಿ ಸದಾಶಿವ ಕುರಿ 6 ಮತಗಳನ್ನು ಪಡೆದು ಪರಾಭವಗೊಂಡರು. ಯಲ್ಲವ್ವ ಲಕ್ಷ್ಮಣ ಚಂದರಗಿ 7 ಮತಗಳನ್ನು ಪಡೆದು ನೂತನ ಅಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಗೋಕಾಕ ಜಲಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಘುರಾಮ ಎಸ್.ಬಿ ಅವರು ಘೋಷಿಸಿದರು.
ಈ ವೇಳೆ ಗ್ರಾಪಂ ಪಿಡಿಒ ಎಚ್.ಎನ್.ಭಾವಿಕಟ್ಟಿ, ಕುಲಿಗೋಡ ಪೊಲೀಸ್ ಠಾಣೆಯ ಎಎಸ್‍ಐ ಎ.ಡಿ.ಕೊಪ್ಪದ, ಪೊಲೀಸ್ ಬೀಟ್ ಪೇದೆ ಮಹೇಶ ಲದ್ದಿ, ಗ್ರಾಪಂ ಸರ್ವ ಸದಸ್ಯರು, ಸಿಬ್ಬಂದಿ, ಹಿರಿಯ ನಾಗರಿಕರು, ರಾಜಕೀಯ ಮುಖಂಡರು, ಎರಡು ಗುಂಪುಗಳ ಅಭಿಮಾನಿಗಳು, ಗ್ರಾಮಸ್ಥರು ಇದ್ದರು.

 


Spread the love

About inmudalgi

Check Also

*ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ಧತೆ * ಮಕ್ಕಳಿಗೆ ಮತ್ತು ಪಾಲಕರಿಗೆ ವಿಶೇಷ ಊಟದ ವ್ಯವಸ್ಥೆ

Spread the loveಬೆಟಗೇರಿ ಸಿಆರ್‍ಸಿ ವಲಯದ ಶಾಲೆಗಳಲ್ಲಿ  ಸ್ವಚ್ಛತಾ  ಕಾರ್ಯ.! *ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಹೂ ನೀಡಿ, ಸಿಹಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ