Breaking News
Home / ಬೆಳಗಾವಿ / ಖಡ್ಗವಾಗಲಿ ಕಾವ್ಯ ಎಂದವರು ಬಸವರಾಜ ಕಟ್ಟೀಮನಿ: ಡಾ. ಆನಂದಕುಮಾರ

ಖಡ್ಗವಾಗಲಿ ಕಾವ್ಯ ಎಂದವರು ಬಸವರಾಜ ಕಟ್ಟೀಮನಿ: ಡಾ. ಆನಂದಕುಮಾರ

Spread the love

ಮೂಡಲಗಿ: ಖಡ್ಗವಾಗಲಿ ಕಾವ್ಯ ಎಂದು ಕನ್ನಡ ಸಾಹಿತ್ಯದಲ್ಲಿ ಬಂಡಾಯದ ದನಿ ಮೊಳಗುವುದಕ್ಕೂ ಮೊದಲೇ ಶೋಷಣೆ, ಅನ್ಯಾಯಗಳಿಗೆ ದನಿಯಾಗಬೇಕೆಂಬ ಬದ್ಧತೆಯಿಂದ ಸಾಮಾಜಿಕ ವಾಸ್ತವ ಮಾರ್ಗದಲ್ಲಿ ಕಥೆ-ಕಾದಂಬರಿಗಳನ್ನು ರಚಿಸಿದವರು ಬಸವರಾಜ ಕಟ್ಟೀಮನಿಯವರು ಎಂದು ಕಾಗವಾಡದ ಶಿವಾನಂದ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಆನಂದಕುಮಾರ ಜಕ್ಕನ್ನವರ ನುಡಿದರು.

ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜು ಹಾಗೂ ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿμÁ್ಠನದ ಸಹಯೋಗದಲ್ಲಿ ಬುಧವಾರದಂದು ಆಯೋಜಿಸಿದ್ದ ಬಸವರಾಜ ಕಟ್ಟೀಮನಿ ಪುಣ್ಯಸ್ಮರಣೆ ನಿಮಿತ್ತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಮುಚ್ಚುಮರೆಯಿಲ್ಲದೆ, ಬಿಚ್ಚುಮಾತಿನಿಂದ ಸಾಹಿತ್ಯ ಬರೆದವರು ಕಟ್ಟೀಮನಿಯವರು. ಅವರು ಅತ್ಯಂತ ಸ್ವಾಭಿಮಾನಿ ಮತ್ತು ರಾಷ್ಟ್ರಪ್ರೇಮಿ ಆಗಿದ್ದರು. ಅವರ ಸಾಹಿತ್ಯವನ್ನು ವಿದ್ಯಾರ್ಥಿಗಳು ಓದಿ ಅರ್ಥೈಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರತಿμÁ್ಠನದ ಸದಸ್ಯ ಸಂಚಾಲಕರಾದ ಪೆÇ್ರ. ಚಂದ್ರಶೇಖರ ಅಕ್ಕಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಟ್ಟೀಮನಿಯವರು ತುಂಬಾ ಸರಳ, ಸಜ್ಜನಿಕೆಯಿಂದ ಬಾಳಿ ಬದುಕಿದವರು. ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜು ವರ್ಷದುದ್ದಕ್ಕೂ ನೂರಾರು ಪಠ್ಯ ಪಠ್ಯೇತರ ಚಟುವಟಿಗಳನ್ನು ಆಯೋಜಿಸುವ ಮೂಲಕ ವಿಶ್ವವಿದ್ಯಾಲಯದ ಮಟ್ಟಕ್ಕೆ ಬೆಳೆಯುತ್ತಿರುವುದು ಸಂತೋಷದ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಚೇರಮನ್ನ ಬಸಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಕಥೆ, ಕವನ, ಕಾದಂಬರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಓದುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದರು.
ಕಟ್ಟಿಮನಿ ಪ್ರತಿμÁ್ಠನದ ಸದಸ್ಯರಾದ ಶಿವಕುಮಾರ್ ಕಟ್ಟಿಮನಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಾಪಕರುಗಳಾದ ಡಾ. ಎಂ.ಬಿ. ಕುಲಮೂರ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ, ಆರ್. ಎಸ್. ಪಂಡಿತ, ವಿಲಾಸ ಕೆಳಗಡೆ, ಎಸ್.ಎಂ. ಬಂಡಿ, ಸಂತೋಷ ಜೋಡಕುರಳಿ, ವಸುಂದರಾ ಕಾಳೆ, ರಾಜಶ್ರೀ ತೋಟಗಿ, ಮಲ್ಲಪ್ಪ ಕರಗಣ್ಣಿ, ಬಿ.ಸಿ. ಮಾಳಿ, ಸಾಗರ ಐದಮನಿ, ಎಂ.ಬಿ. ಜಾಲಗಾರ, ಗ್ರಂಥಪಾಲಕ ಬಿ.ಬಿ. ವಾಲಿ, ಬಿ.ಕೆ. ಸೊಂಟನವರ ಹಾಗೂ ಬೋಧಕೆತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಡಾ. ಕೆ.ಎಸ್. ಪರವ್ವಗೋಳ ನಿರೂಪಿಸಿದರು. ಪೆÇ್ರ. ಡಿ.ಎಸ್. ಹುಗ್ಗಿ ಸ್ವಾಗತಿಸಿದರು. ಕು. ರಾಧಿಕಾ ಕರೆಪ್ಪಗೋಳ ಪ್ರಾರ್ಥಿಸಿದರು. ಪೆÇ್ರ. ವಿಲಾಸ ಕೆಳಗಡೆ ವಂದಿಸಿದರು


Spread the love

About inmudalgi

Check Also

ನ.22 ರಂದು ಕನ್ನಡ ರಾಜ್ಯೋತ್ಸವ ಭವ್ಯ ಮೇರವಣಿಗೆ

Spread the love ಇಂದು ಕನ್ನಡ ರಾಜ್ಯೋತ್ಸವ ಭವ್ಯ ಮೇರವಣಿಗೆ ಮೂಡಲಗಿ: ಮೂಡಲಗಿ ತಾಲೂಕಾ ಕನ್ನಡ ರಾಜ್ಯೋತ್ಸ ಸಮಿತಿ ಆಶಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ