Breaking News
Home / ಬೆಳಗಾವಿ / ಮೂಡಲಗಿಗೆ ಪಾದಯಾತ್ರೆಯಲ್ಲಿ ಆಗಮಿಸಿದ ಧಾರವಾಡದ ಮುರಘಾಮಠದ ಪ್ರಸಾದ ನಿಲಯದ ವಿದ್ಯಾರ್ಥಿಗಳು

ಮೂಡಲಗಿಗೆ ಪಾದಯಾತ್ರೆಯಲ್ಲಿ ಆಗಮಿಸಿದ ಧಾರವಾಡದ ಮುರಘಾಮಠದ ಪ್ರಸಾದ ನಿಲಯದ ವಿದ್ಯಾರ್ಥಿಗಳು

Spread the love

ಮೂಡಲಗಿ: ಧಾರವಾಡದ ಮುರಘಾಮಠದ ಪ್ರಸಾದ ನಿಲಯದ ವಿದ್ಯಾರ್ಥಿಗಳ ಪಾದಯಾತ್ರೆಯು ಮೂಡಲಗಿಗೆ ಆಗಮಿಸಿತು.

ಸ್ಥಳೀಯ ಎಂಇಎಸ್ ಕಾಲೇಜು ಬಳಿಯಲ್ಲಿ ಪಾದಯಾತ್ರಿ ವಿದ್ಯಾರ್ಥಿಗಳನ್ನು ಸ್ವಾಗತಿಸಿಕೊಂಡರು.
ಈ ಸಂದರ್ಭದಲ್ಲಿ ಪಿ.ಕೆ. ರಡ್ಡೇರ ಮಾತನಾಡಿ ‘ಅನ್ನ ಮತ್ತು ಜ್ಞಾನ ದಾಸೋಹಕ್ಕೆ ಹೆಸರಾಗಿರುವ ಧಾರವಾಡದ ಮುರಘಾಮಠವು ಅನೇಕ ಗ್ರಾಮೀಣ ಮತ್ತು ಬಡ ಮಕ್ಕಳಿಗೆ ಆಸರೆಯಾಗಿ ಬೆಳೆಸಿದೆ’ ಎಂದರು.
ಮೃತ್ಯುಂಜಯಪ್ಪಗಳು ನೂರು ವರ್ಷಗಳ ಪೂರ್ವದಲ್ಲಿ ಸ್ಥಾಪಿಸಿರುವ ಪ್ರಸಾದ ನಿಲಯವು ನಿರಂತರವಾಗಿ ನಡೆದುಕೊಂಡು ಬಂದಿರುವುದು ಮಠದ ದಾಸೋಹ ಪರಂಪರೆಯು ವಿಶೇಷವಾಗಿದೆ ಎಂದರು.
ಪಾದಯಾತ್ರೆಯಲ್ಲಿ ಆಗಮಿಸಿ 40ಕ್ಕೂ ಅಧಿಕ ವಿದ್ಯಾರ್ಥಿಗಳ ಪಾದಸೇವೆ ಮತ್ತು ಪ್ರಸಾದ ಸೇವೆ ಜರುಗಿತು. ಮೂಡಲಗಿಯಿಂದ ಪಾದಯಾತ್ರೆಯ ಮೂಲಕ ಅಥಣಿಯ ಮುರಘಾಮಠಕ್ಕೆ ಸಾಗಿದರು.


Spread the love

About inmudalgi

Check Also

ಬ್ಯಾಂಕಿನ ಆರ್ಥಿಕ ಸಾಕ್ಷರತೆ ಅರಿವು ವಿದ್ಯಾರ್ಥಿಗಳಿಗೆ ಅವಶ್ಯಕ -ಶಿವಪುತ್ರ ಚನ್ನಗೌಡರ

Spread the loveಬ್ಯಾಂಕಿನ ಆರ್ಥಿಕ ಸಾಕ್ಷರತೆ ಅರಿವು ವಿದ್ಯಾರ್ಥಿಗಳಿಗೆ ಅವಶ್ಯಕ -ಶಿವಪುತ್ರ ಚನ್ನಗೌಡರ. ಮೂಡಲಗಿ : ಬ್ಯಾಂಕಿನ ಆರ್ಥಿಕ ಸಾಕ್ಷರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ