Breaking News
Home / ಬೆಳಗಾವಿ / ಬೆಟಗೇರಿ ವಿಪ್ರಾಗ್ರಾಕೃಎಸ್ ಸಂಘದ ಆಡಳಿತ ಮಂಡಳಿ ಚುನಾವಣೆ

ಬೆಟಗೇರಿ ವಿಪ್ರಾಗ್ರಾಕೃಎಸ್ ಸಂಘದ ಆಡಳಿತ ಮಂಡಳಿ ಚುನಾವಣೆ

Spread the love

ಬೆಟಗೇರಿ ವಿಪ್ರಾಗ್ರಾಕೃಎಸ್ ಸಂಘದ ಆಡಳಿತ ಮಂಡಳಿ ಚುನಾವಣೆ

ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಐದು ವರ್ಷದ ಅವಧಿಗೆ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಎರಡು ಗುಂಪುಗಳ ಮಧ್ಯ ನೇರಾ ನೇರ ತುರುಸಿನಿಂದ ಡಿ.14ರಂದು ನಡೆದ ಚುನಾವಣೆಯಲ್ಲಿ ಎರಡು ಗುಂಪಿನ ಅಭ್ಯರ್ಥಿಗಳು ಸಮಬಲ ಸ್ಥಾನಗಳ ಜಯ ದಾಖಲಿಸಿದ್ದಾರೆ.
ಈ ಸಲ ಚುನಾವಣೆಯಲ್ಲಿ ಸ್ಥಳೀಯ ರಾಜಕೀಯ ಪ್ರಭಾವಿ ಮುಖಂಡರ ಬೆಂಬಲಿತ ಎರಡು ಗುಂಪುಗಳ ಮಧ್ಯ ನೇರಾನೇರ ತುರುಸಿನ ಪೈಪೋಟಿ ನಡೆದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿತ್ತು. 12 ಸ್ಥಾನಗಳ ಸದಸ್ಯರ ಆಯ್ಕೆಗಾಗಿ 24 ಜನ ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದರು. ಎರಡು ಗುಂಪು ಬಹುಮತ ಗಳಿಸುವಷ್ಟು 12ಸ್ಥಾನಗಳಲ್ಲಿ 7ಸ್ಥಾನವನ್ನಾದರೂ ಪಡೆಯದೇ ವಿಫಲವಾಗಿವೆ. ಹೀಗಾಗಿ ಸ್ಥಳೀಯ ವಿಪ್ರಾಗ್ರಾ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ನಡೆದ ಈ ಸಲದ ಚುನಾವಣೆ ಫಲಿಂತಾಶ ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ.
ಒಂದು ಗುಂಪಿನ 6 ಜನ ಅಭ್ಯರ್ಥಿಗಳು ಜಯ ಸಾಧಿಸಿದರೆ ಮತ್ತೊಂದು ಗುಂಪಿನ 6 ಜನ ಅಭ್ಯರ್ಥಿಗಳು ಜಯಸಾಧಿಸಿದ್ದಾರೆ. ಸ್ಥಳೀಯ ಎರಡು ಗುಂಪಿನ ರಾಜಕೀಯ ಮುಖಂಡರು, ಬೆಂಬಲಿಗರು, ಗ್ರಾಮಸ್ಥರು ಸಂಘದ ಮತ ಎಣಿಕೆ ಕಟ್ಟಡದ ತುಸು ದೂರದಲ್ಲಿ ಅಲ್ಲಲ್ಲಿ ನಿಂತುಕೊಂಡದ್ದು ಫಲಿಂತಾಶ ತಿಳಿಯಲು ಹಾತೊರೆಯುತ್ತಿರುವದು ವಿಶೇಷವಾಗಿತ್ತು. ಫಲಿತಾಂಶ ಘೋಷಣೆ ಬಳಿಕ ಗೆಲವು ಸಾಧಿಸಿದ ಎರಡು ಗುಂಪಿನ ಬೆಂಬಲಿಗರು, ಅಭಿಮಾನಿಗಳು ಒಬ್ಬರಿಗೊಬ್ಬರು ಗುಲಾಲು ಎರಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಈ ವೇಳೆ ವಿಜೇತ ಅಭ್ಯರ್ಥಿಗಳು ಸೇರಿದಂತೆ ರಾಜಕೀಯ ಮುಖಂಡರು, ಯುವಕರು, ಅಭಿಮಾನಿಗಳು, ಬೆಂಬಲಿಗರು, ಇತರರು ಇದ್ದರು.

ಜಯ ಸಾಧಿಸಿದ ಅಭ್ಯರ್ಥಿಗಳು: ಸಾಲಗಾರ ಸಾಮಾನ್ಯ ಮತಕ್ಷೇತ್ರದಿಂದ ಮಹಾಂತೇಶ ಸಿದ್ನಾಳ(531),ಬಸವರಾಜ ದೇಯಣ್ಣವರ(485), ಲಕ್ಷಪ್ಪ ಕೋಣಿ(483),ರೇವಣಸಿದ್ದ ಸವತಿಕಾಯಿ(478), ವಿಜಯ ಸೊಮಗೌಡ್ರ(475), ಅ ವರ್ಗದಿಂದ ಬಸವಂತ ಕೋಣಿ(470), ಬ ವರ್ಗದಿಂದ ಸಂಗಯ್ಯ ಹಿರೇಮಠ(453), ಮಹಿಳಾ ಮತಕ್ಷೇತ್ರದಿಂದ ಮಹಾದೇವಿ ದಂಡಿನ(482), ಮಲ್ಲವ್ವ ಚಂದರಗಿ(434), ಪರಿಶಿಷ್ಟ ಜಾತಿ ಮತಕ್ಷೇತ್ರದಿಂದ ಮಹಾಂತೇಶ ಭಜಂತ್ರಿ(510), ಪರಿಶಿಷ್ಟ ಪಂಗಡ ಮತಕ್ಷೇತ್ರದಿಂದ ಭೀಮಶೆಪ್ಪ ಆಶೆಪ್ಪಗೋಳ(470), ಬಿನ್ ಸಾಲಗಾರ ಮತಕ್ಷೇತ್ರದಿಂದ ರಮೇಶ ಮುಧೋಳ(144) ಮತಗಳನ್ನು ಪಡೆದು ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಬಿ. ಬಿರಾದಾರ ಪಾಟೀಲ ತಿಳಿಸಿದ್ದಾರೆ.

 


Spread the love

About inmudalgi

Check Also

ಬ್ಯಾಂಕಿನ ಆರ್ಥಿಕ ಸಾಕ್ಷರತೆ ಅರಿವು ವಿದ್ಯಾರ್ಥಿಗಳಿಗೆ ಅವಶ್ಯಕ -ಶಿವಪುತ್ರ ಚನ್ನಗೌಡರ

Spread the loveಬ್ಯಾಂಕಿನ ಆರ್ಥಿಕ ಸಾಕ್ಷರತೆ ಅರಿವು ವಿದ್ಯಾರ್ಥಿಗಳಿಗೆ ಅವಶ್ಯಕ -ಶಿವಪುತ್ರ ಚನ್ನಗೌಡರ. ಮೂಡಲಗಿ : ಬ್ಯಾಂಕಿನ ಆರ್ಥಿಕ ಸಾಕ್ಷರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ