ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಕುಲಗೋಡೆ ಸತ್ಕಾರ
ಕುಲಗೋಡ: ಜನರ ಆರ್ಥಿಕ ಅಭಿವೃದ್ದಿ ರೈತರ ಹಿತರಕ್ಷಣೆ ಮಡುತ್ತಿರುವ ಡಿಸಿಸಿ ಬ್ಯಾಂಕ್ ಇದರ ಅಧ್ಯಕ್ಷನಾಗಿರುವುದು ನನ್ನ ಭಾಗ್ಯ ಎಂದು ಡಿಸಿಸಿ ಬ್ಯಾಂಕ ಅಧ್ಯಕ್ಷ ಅಪ್ಪಾಸಾಬ ಕುಲಗೋಡೆ ಹೇಳಿದರು.
ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಆರಾಧ್ಯ ದೈವ ಬಲಭೀಮ ದೇವಸ್ಥಾನಕ್ಕೆ ಬೇಟ್ಟಿ ನೀಡಿ ನಂತರ ಗ್ರಾಪಂ ಕಾರ್ಯಲಯದಲ್ಲಿ ನಾಗರೀಕ ಸನ್ಮಾನ ಸ್ವೀಕರಿಸಿ ಮಾತನಾಡಿ ಕುಲಗೋಡದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಸನ್ ೨೩-೨೪ ನೇ ಸಾಲಿನ ಆರ್ಥಿಕ ಸ್ಥಿತಿ ಮತ್ತು ಪ್ರಗತಿಗೆ ತಾಲೂಕ ಮಟ್ಟದ ಅತ್ಯುತ್ತಮ ಸಹಕಾರಿ ಸಂಘ ಎಂಬ ಪ್ರಶಸ್ತಿ ಪಡೆದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬರುವ ದಿನಗಳಲ್ಲಿ ಕುಲಗೋಡ ಡಿಸಿಸಿ ಬ್ಯಾಂಕಿಗೆ ಹೆಚ್ಚಿನ ಸಹಾಯ ಸಹಕಾರ ಮಾಡುವದಾಗಿ ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಕುಲಗೋಡೆ ಇವರನ್ನು ಪಿ.ಕೆ.ಪಿ.ಎಸ್ ಮತ್ತು ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರು ಹಾಗೂ ಮಾಳಿ ಸಮಾಜ ಬಾಂದವರು, ಡಿ.ಎಸ್.ಎಸ್ ಸಂಘಟನೆ ಪದಾಧಿಕಾರಿಗಳು. ಕರೆಮ್ಮಾದೇವಿ ಜಾತ್ರಾ ಕಮಿಟಿ ಹಿರಿಯರು ಸತ್ಕಾರಿಸಿದರು.
ಬಲಭೀಮ ದೇವಸ್ಥಾನ. ಗ್ರಾಪಂ ಹಾಗೂ ಪಿ.ಕೆ.ಪಿ.ಎಸ್ ಕಛೇರಿ. ಶ್ರೀ ಕರೆಮ್ಮಾದೇವಿ ದೇವಸ್ಥಾನಕ್ಕೆ ಬೇಟಿ ನೀಡಿದರು.
ಈ ಸಂದರ್ಭದಲ್ಲಿ ಟಿ.ಎ.ಪಿ.ಸಿ.ಎಮ್.ಎಸ್ ಅಧ್ಯಕ್ಷ ಅಶೋಕ ನಾಯಿಕ.ಮಾಜಿ ತಾಪಂ ಸದಸ್ಯ ಸುಭಾಸ ವಂಟಗೋಡಿ. ಗ್ರಾಪಂ ಅಧ್ಯಕ್ಷ ತಮ್ಮಣ್ಣಾ ದೇವರು. ಭೀಮಶಿ ಪೂಜೇರಿ. ಮುರಿಗೆಪ್ಪ ಯಕ್ಸಂಬಿ. ದತ್ತು ಕುಲಕರ್ಣಿ. ಈರಣ್ಣ ಸಸಾಲಟ್ಟಿ. ಗ್ರಾಪಂ ಸದಸ್ಯರಾದ ಗೋಪಾಲ ತಿಪ್ಪಿಮನಿ. ಬಸು ಯರಗಟ್ಟಿ. ಸತೀಶ ವಂಟಗೋಡಿ. ನಾಗೇಶ ಬಂಡಿವಡ್ಡರ.ಪಿ.ಡಿ.ಓ ಸದಾಶಿವ ದೇವರ. ಪಿಕೆಪಿಎಸ್ ಸದಸ್ಯರಾದ ಹಣಮಂತ ಚನ್ನಾಳ. ಸೊಮಲಿಂಗ ಮಿಕಲಿ. ಬಸವಣ್ಣೆಪ್ಪ ತಿಪ್ಪಿಮನಿ. ರಾಮಕೃಷ್ಣ ಮ್ಯಾಗೋಟಿ. ಲಕ್ಷö್ಮಣ ತಿಪ್ಪಿಮನಿ. ರಾಜು ಕೊಪ್ಪದ. ಜಗದೀಶ ಬೆಳಗಲಿ. ಲಕ್ಷ್ಮಣ ನಂದಿ. ವಿಶ್ವನಾಥ ಯಕ್ಸಂಬಿ.
ಗ್ರಾಮಸ್ಥರು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.