ಸಮಾಜ ಸೇವಕ ಪ್ರಶಸ್ತಿ ಪುರಸ್ಕೃತ ಮರಿಯಪ್ಪಗೋಳಗೆ ಸತ್ಕಾರ
ಮೂಡಲಗಿ : ಬೆಂಗಳೂರಿನ ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದಿಂದ ಪಟ್ಟಣದ ಮರಿಯಪ್ಪ ಮರಿಯಪ್ಪಗೋಳ ಅವರು ಸಮಾಜ ಸೇವಕ ಪ್ರಶಸ್ತಿ ಸ್ವೀಕರಿಸಿದ ಪ್ರಯುಕ್ತ ಇಲ್ಲಿಯ ಸೆಂಟ್ ಮೇರಿ ಶಾಲೆ ಹಾಗೂ ಡಿ. ಎಸ್. ಎಸ್ ಮುಖಂಡರು ಸತ್ಕರಿಸಿ ಗೌರವಿಸಿದರು
ಡಿ.ಎಸ್.ಎಸ್ ಮುಖಂಡರಾದ ಎಬಿನೇಜರ ಕರಬರನವರ್ ಮತ್ತು ಸತ್ತೇಪ್ಪ ಕರವಾಡಿ ಹಾಗೂ ರಮೇಶ ಮಾದರ ಮಾತನಾಡಿ, ಮೂಡಲಗಿ ಹಾಗೂ ಅರಭಾವಿ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಿರುವ ಮೂಡಲಗಿ ಪಟ್ಟಣ ಮರೇಪ್ಪಾ ಮರಿಯಪ್ಪಗೋಳ ಅವರ ಸಾಧನೆಗಳನ್ನು ಗುರುತಿಸಿ ಪ್ರಶಸ್ತಿ ನೀಡಿರಿವುದು ಸಂತದ ವಿಷಯ ಎಂದ ಅವರು ಮರಿಯಪ್ಪಗೋಳ ಅವರಿಗೆ ದೇವರು ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡಲು ಶಕ್ತಿ ನೀಡಲಿ ಎಂದು ಹಾರೈಸಿದರು. ಈ ಸಮಯದಲ್ಲಿ ಸೆಂಟ್ ಮೇರಿಸ್ ಶಾಲೆಯ ಅಧ್ಯಕ್ಷ ಡ್ಯಾನಿಲ್ ಸರ್ವಿ, ಕಿರಣ್ ಮದರ್, ಯಾಕೋಬ ಮತ್ತಿತರು ಉಪಸ್ಥಿತರಿದ್ದರು