ಮೂಡಲಗಿ: ಕೂಸಿನ ಮನೆ ಆರೈಕೆದಾರರು ತರಬೇತಿ ಪಡೆದುಕೊಂಡು ಕೂಸಿನ ಮನೆಗಳನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳ ತಿಳಿಸಿದ ವಿಷಯಗಳನ್ನು ಸರಿ ಅರ್ಥಸಿಕೊಂಡು ತರಬೇತಿಯನ್ನು ಸದುಪಯೋಗ ಪಡಿಸಿಕೊಂಡು ಹೊಗಲು ಇಂತಹ ತರಬೇತಿಗಳು ಕೂಸಿನ ಮನೆಗಳ ನಿರ್ವಹಣೆಗೆ ಅವಶ್ಯಕವಾಗಿವೆ ಎಂದು ಮೂಡಲಗಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ.ಚಿನ್ನನವರ ಹೇಳಿದರು.
ಅವರು ಪಟ್ಟದ ಕೃಷ್ಣಪ್ಪ ಎಚ್.ಸೋವಾಲಕರ ಸರಕಾರಿ ಪ್ರೌಢ ಶಾಲೆಯ ಸಭಾ ಭವನದಲ್ಲಿ ಜರುಗಿದ ಪಂಚಾಯತ್ ರಾಜ್ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಜಿಲ್ಲಾ ಪಂಚಾಯತ್ ಬೆಳಗಾವಿ ಹಾಗೂ ತಾಲೂಕು ಪಂಚಾಯತ್ ಮೂಡಲಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೂಸಿನ ಮನೆ ಆರೈಕೆದಾರರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಪಂ ಸಹಾಯಕ ನಿರ್ದೇಶಕ (ಗ್ರಾಉ) ಸಂಗಮೇಶ ರೊಡ್ಡನವರ ಮಾತನಾಡಿ, ಮನರೇಗಾ ಯೋಜನೆಯಡಿ ಕೆಲಸ ಪಡೆದುಕೊಳ್ಳುವ ಕೂಲಿಕಾರರ ಮಕ್ಕಳ ಆರೈಕೆಗಾಗಿ ಕೂಸಿನ ಮನೆ ಪ್ರಾರಂಭಿಸಲಾಗಿದೆ. ತರಬೇತಿ ಪಡೆದುಕೊಂಡು ಕೂಸಿನ ಮನೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಬೇಕು. ಪ್ರವೇಶ ಪಡೆದಿರುವ ಮಕ್ಕಳ ಆರೈಕೆಯನ್ನು ಜವಾಬ್ದಾರಿಯಿಂದ ಮಾಡಬೇಕು ಎಂದರು.
ತಾಪಂ ಸಹಾಯಕ ನಿರ್ದೇಶಕರು (ಪಂರಾ) ಚಂದ್ರಶೇಖರ ಬಾರ್ಕಿ ಅವರು ಮಾತನಾಡಿ, ಮನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ತಾಯಿಂದಿರ ಮಕ್ಕಳ ಆರೈಕೆಗಾಗಿ ಕೂಸಿನ ಮನೆ ಪ್ರಾರಂಭಿಸಲಾಗಿದೆ. ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುವ ಉದ್ದೇಶದಿಂದ ಆರೈಕೆದಾರರನ್ನು ನೇಮಿಸಲಾಗಿದೆ. ಅಂತಹ ತರಬೇತಿ ಪಡೆದುಕೊಂಡ ಆರೈಕೆದಾರರು ಮಕ್ಕಳನ್ನು ಉತ್ತಮ ರೀತಿಯಲ್ಲಿ ಪೆÇೀಷಣೆ ಮಾಡಬೇಕು. ಜತೆಗೆ ಕಾಳಜಿಯಿಂದ ಮಕ್ಕಳನ್ನು ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತರಬೇತಿದಾರರಾದ ರೇಣುಕಾ ಗುಡದೇರಿ, ಸವಿತಾ ನಂದಗಾಂವಿ, ಗ್ರಾಮ ಕಾಯಕ ಮಿತ್ರರು, ಕೂಸಿನ ಮನೆಗಳ ಆರೈಕೆದಾರರು ಉಪಸ್ಥಿತರಿದ್ದರು.