ಮೂಡಲಗಿ: ನಾಡಿನ ಹಬ್ಬಗಳು ಸಂಸ್ಕøತಿಯ ಪ್ರತೀಕವಾಗಿವೆ, ನಾಡಿನ ಪ್ರತಿಯೊಂದು ಹಬ್ಬ ಹರಿದಿನಗಳಲ್ಲಿ ಆಚಾರ ವಿಚಾರಗಳು ಆಹಾರ ವಿಹಾರಗಳು ಸಂಸ್ಕಾರ, ಸಂಸ್ಕøತಿ ಮತ್ತು ಆರೋಗ್ಯದ ಬಗ್ಗೆ ಕಾಳಜಿ ಮತ್ತು ಮನುಷ್ಯನ ನಡೆ ನುಡಿಯ ಬಗ್ಗೆ ಒಳ್ಳೆಯ ವಿಚಾರಗಳನ್ನು ಪ್ರತಿಬಿಂಬಿಸುತ್ತವೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು
ಅವರು ತಾಲೂಕಿನ ತುಕ್ಕಾನಟ್ಟಿಯ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಮಕರ ಸಂಕ್ರಾಂತಿ ನಿಮಿತ್ಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಹಬ್ಬದ ಊಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಮ್ಮ ಪೂರ್ವಿಕರು ಆಚರಿಸುತ್ತಿದ್ದ ಪ್ರತಿಯೊಂದು ಹಬ್ಬಗಳಲ್ಲೂ ಸಂಸ್ಕಾರದಲ್ಲಿ ವಿಜ್ಞಾನವಿದೆ. ಮತ್ತು ಋತುಮಾನಕ್ಕೆ ತಕ್ಕಂತೆ ಹಬ್ಬಗಳಲ್ಲಿ ಆಹಾರ ಪದ್ಧತಿಯೂ ಕೂಡ ಇದೆ. ತುಕ್ಕಾನಟ್ಟಿ ಶಾಲೆಯಯವರು ಪ್ರತಿಯೊಂದು ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಾರೆ. ಇದರಿಂದ ಗುಣಮಟ್ಟದ ಶಿಕ್ಷಣವೂ ಕೂಡ ಸಿಗುತ್ತದೆ ಎಂದರು.
ಗೋಕಾಕ ಅಕ್ಷರದಾಸೋಹÀ ತಾಲೂಕಾ ನಿರ್ದೇಶಕ ಆಶೋಕ ಮಲಬಣ್ಣವರ ಮಾತನಾಡಿ, ತುಕ್ಕಾನಟ್ಟಿ ಸರಕಾರಿ ಶಾಲೆಯಲ್ಲಿ ಅಕ್ಷರದಾಸೋಹ ಬಿಸಿಯೂಟ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿರುವದರಿಂದ ವಿದ್ಯಾರ್ಥಿಗಳಿಗೆ ಸಂಪೂರ್ಣ ಪೋಷಕಾಂಶದ ಆಹಾರ ಸಿಗುತ್ತಿರುವದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯದೊಂದಿಗೆ ಶಾಲೆಯ ಹಾಜರಾತಿ ಕೂಡ ಸುಧಾರಿಸುತ್ತಿದೆ, ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಉತ್ತಮ ಗುಣಮಟ್ಟದ ಆಹಾರ ಹಾಗೂ ಶಿಕ್ಷಣ ಎರಡೂ ಪರಿಣಾಮ ಬೀರುತ್ತವೆ ಎಂದರು.
ಶಾಲೆಯ ಮುಖ್ಯೋಪಾದ್ಯಾಯ ಎ.ವ್ಹಿ. ಗಿರೆಣ್ಣವರ ಮಾತನಾಡಿ, ಸಂಕ್ರಾಂತಿ ಹಬ್ಬ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವ ಪರಸ್ಪರ ವಿದ್ಯಾರ್ಥಿಗಳ ನಡುವೆ ಸಂಬಂಧÀಗಳು ಎಳ್ಳು ಬೆಲ್ಲದಂತೆ ಸಿಹಿಯಾಗಿರಲಿ ಎಂಬ ಉದ್ದೇಶದಿಂದ ಹಾಗೂ ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಊಟ ಮತ್ತು ಹಾಜರಾತಿ ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು ನಮ್ಮ ಉದ್ಧೇಶವಾಗಿದೆ.
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸುಮಾರು 700 ವಿದ್ಯಾರ್ಥಿಗಳಿಗೆ ಸಜ್ಜೆ ರೊಟ್ಟಿ, ಗೊಂಜಾಳ ರೊಟ್ಟಿ, ಮಡಿಕೆಕಾಳು ಪಲ್ಯ, ಜುಣಕದ ವಡೆ, ಬಳ್ಳೊಳ್ಳಿ ಕಾರ, ಅಗಸಿ ಚಟ್ನಿ, ಶೇಂಗಾ ಚಟ್ನಿ, ಶೇಂಗಾ ಹೋಳಿಗೆ, ಗೋದಿ ಮಾದಲಿ, ತುಪ್ಪ, ಮಸಾಲೆ ಅನ್ನ ಸಾರು, ಮೊಸರನ್ನ, ಬಾಳೆಹಣ್ಣು ನೀಡಲಾಯಿತು.
ಕಾರ್ಯಕ್ರದಲ್ಲಿ ಶಿಕ್ಷಕರಾದ ವಿಮಲಾಕ್ಷಿ ತೋರಗಲ್, ಲಕ್ಷ್ಮೀ ಹೆಬ್ಬಾಳ, ಪುಷ್ಪಾ ಭರಮಧೆ, ರೂಪಾ ಹೂಲಿಕಟ್ಟಿ, ಪ್ರ್ರಿಯಾಂಕಾ.ಡಿ.ಕೆ. ಸುಜಾತ ಕೋಳಿ, ಭಾಗೀರಥಿ ಕಳ್ಳಿಗುದ್ದಿ, ವಾಸಂತಿ ಬೋರಗುಂಡಿ, ಎಮ್.ಡಿ.ಗೋಮಾಡಿ. ಬಿ.ಎನ್.ನಾಯ್ಕ, ಸೋವಶೇಖರ ವಾಯ್ ಆರ್, ಸಿ.ಎಸ್. ಸೀರಿ, ಹೊಳೆಪ್ಪಾ ಗದಾಡಿ, ಯಮುನಾ ಹಮ್ಮನವರ, ಶಿವಲೀಲಾ ಹಣಮನ್ನವರ, ಅನ್ನಪೂರ್ಣಾ ಹುಲಕುಂದ, ಖಾತೂನಬಿ ನದಾಫ ಮತ್ತಿತರರು ಉಪಸ್ಥಿತರಿದ್ದರು.
