Breaking News
Home / ಬೆಳಗಾವಿ / ಸುಣಧೋಳಿಯ ಜಡಿಸಿದ್ದೇಶ್ವರ ಮಠದ ಮಹಾದ್ವಾರ ನಿರ್ಮಾಣಕ್ಕೆ ಶಿವಾನಂದ ಸ್ವಾಮೀಜಿ ಮತ್ತು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಇವರಿಂದ ಭೂಮಿ ಪೂಜೆ

ಸುಣಧೋಳಿಯ ಜಡಿಸಿದ್ದೇಶ್ವರ ಮಠದ ಮಹಾದ್ವಾರ ನಿರ್ಮಾಣಕ್ಕೆ ಶಿವಾನಂದ ಸ್ವಾಮೀಜಿ ಮತ್ತು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಇವರಿಂದ ಭೂಮಿ ಪೂಜೆ

Spread the love

ಸುಣಧೋಳಿ: ₹35 ಲಕ್ಷ ವೆಚ್ಚದ ದ್ವಾರ ಬಾಗಿಲ ನಿರ್ಮಾಣಕ್ಕೆ ಭೂಮಿ ಪೂಜೆ

ಮೂಡಲಗಿ: ತಾಲ್ಲೂಕಿನ ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಮಹಾದ್ವಾರ ನಿರ್ಮಾಣಕ್ಕೆ ಶನಿವಾರ ಪೀಠಾಧಿಪತಿ ಶಿವಾನಂದ ಸ್ವಾಮಿಗಳ ಸಾನ್ನಿಧ್ಯದಲ್ಲಿ ಭೂಮಿ ಪೂಜೆ ಜರುಗಿತು.
ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ’ನಾಡಿನ ಮಠಮಾನ್ಯಗಳು ಭಕ್ತರಿಗೆ ಶಾಂತಿ, ನೆಮ್ಮದಿಯನ್ನು ನೀಡುವ ತಾಣಗಳಾಗಿವೆ. ಮಠಮಾನ್ಯಗಳು ಬೆಳೆಯಲು ಭಕ್ತರ ಭಕ್ತಿ ಮುಖ್ಯವಾಗಿದೆ’ ಎಂದರು.
ಮಠದ ಪೀಠಾಧಿಪತಿ ಶಿವಾನಂದ ಸ್ವಾಮಿಗಳು ಮಾತನಾಡಿ ‘ಅಂದಾಜು ₹35 ಲಕ್ಷ ವೆಚ್ಚದಲ್ಲಿ ಮಠದ ಮುಖ್ಯ ಮಹಾದ್ವಾರ ನಿರ್ಮಿಸುವ ಸಂಕಲ್ಪ ಮಾಡಲಾಗಿದೆ’ ಎಂದರು.
ರಾಜು ವಾಲಿ, ಬಸವರಾಜ ಪಾಟೀಲ, ಹಣಮಂತ ಪಾರ್ಶಿ, ಸಿದ್ಧಾರೂಢ ಕಮತಿ, ಮಹಾದೇವ ಪಾಟೀಲ, ಸಿದ್ದಪ್ಪ ದೇವರಮನಿ, ರುದ್ರಪ್ಪ ಹಲಸಗಿ, ಉದಯ ಜಿಡ್ಡಿಮನಿ, ಸಿದ್ದಗಿರೆಪ್ಪ ಪಾಟೀಲ, ರಾಮಣ್ಣ ಬೆಣ್ಣಿ, ಸೋಮಪ್ಪ ಹೊರಟ್ಟಿ, ಲಿಂಗಪ್ಪ ಅಡಿಬಿಟ್ಟಿ, ಶಿವಲಿಂಗಯ್ಯ ಹಿರೇಮಠ, ಮಹಾಲಿಂಗಯ್ಯ ಹಿರೇಮಠ ಮತ್ತಿತರರು ಇದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ