Breaking News
Home / ಬೆಳಗಾವಿ / ಕುರುಹಿನಶೆಟ್ಟಿ ಸೊಸಾಯಿಟಿಗೆ ಅಧ್ಯಕ್ಷರಾಗಿ ಬೆಳಕೂಡ, ಉಪಾಧ್ಯಕ್ಷರಾಗಿ ಕಳ್ಳಿಮನಿ ಅವಿರೋಧ ಆಯ್ಕೆ

ಕುರುಹಿನಶೆಟ್ಟಿ ಸೊಸಾಯಿಟಿಗೆ ಅಧ್ಯಕ್ಷರಾಗಿ ಬೆಳಕೂಡ, ಉಪಾಧ್ಯಕ್ಷರಾಗಿ ಕಳ್ಳಿಮನಿ ಅವಿರೋಧ ಆಯ್ಕೆ

Spread the love

ಕುರುಹಿನಶೆಟ್ಟಿ ಸೊಸಾಯಿಟಿಗೆ ಅಧ್ಯಕ್ಷರಾಗಿ ಬೆಳಕೂಡ, ಉಪಾಧ್ಯಕ್ಷರಾಗಿ ಕಳ್ಳಿಮನಿ ಅವಿರೋಧ ಆಯ್ಕೆ

ಮೂಡಲಗಿ: ಪಟ್ಟಣದ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ಮುಂದಿನ ಐದು ವರ್ಷಗಳ ಅವಧಿಗೆ ರವಿವಾರ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಸೊಸಾಟಿಯ ಅಧ್ಯಕ್ಷರಾಗಿ ಸುಭಾಸ ಗಂಗಪ್ಪ ಬೆಳಕೂಡ ಮತ್ತು ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಮಹ್ಮದಸಾಹೇಬ ಕಳ್ಳಿಮನಿ ಅವರು ಅವಿರೋಧವಾಗಿ ಆಯ್ಕೆಗೊಂಡರು.

ಚುನಾವಣಾಧಿಕಾರಿ ಗೋಕಾಕ ಸಹಕಾರಿ ಅಭಿವೃದ್ಧಿ ಅಧಿಕಾರಿ ಸುರೇಶ ಬಿರಾದಾರಪಾಟೀಲ, ಸಹಾಯಕ ಚುನಾವಣಾಧಿಕಾರಿಯಾಗಿ ಸೊಸಾಯಿಟಿಯ ಪ್ರಧಾನ ಕಾರ್ಯದರ್ಶಿ ರಮೇಶ ವಂಟಗುಡಿ ಕಾರ್ಯ ನಿರ್ವಹಿಸಿದ್ದರು.

ಈ ಸಮಯದಲ್ಲಿ ಸೊಸಾಯಿಟಿಯ ನಿರ್ದೇಶಕರಾದ ಬಸಪ್ಪ ಚಿನ್ನಪ್ಪ ಮುಗಳಕೋಡ, ಗೊಡಚಪ್ಪ ಕಲ್ಲಪ್ಪ ಮುರುಗೋಡ, ಲಕ್ಕಪ್ಪ ಲಕ್ಷ್ಮಣ ಪೂಜೇರಿ, ಬಸವರಾಜ ಬಸಲಿಂಗಪ್ಪ ಬೆಳಕೂಡ, ವಿಶಾಲ ಸದಾಶಿವ ಶೀಲವಂತ, ರಾಮಪ್ಪ ಧೂಳಪ್ಪ ಬಳೆಗಾರ, ಶ್ರೀಮತಿ ಮಾಲಾ ಮೋಹನ ಬೆಳಕೂಡ, ಶ್ರೀಮತಿ ಶಾಂತವ್ವ ಬಾಳಗೊಂಡ ಬೋರ್ಗಲ್, ಶ್ರೀಮತಿ ಉಮಾ ಬಸವರಾಜ ಬೆಳಕೂಡ, ಶ್ರೀಮತಿ ರುಕ್ಕವ್ವ ಲಕ್ಕಪ್ಪ ಪೂಜೇರಿ, ಶ್ರೀಮತಿ ಶ್ಯಾಲನ್ ಶ್ರೀಕಾಂತ್ ಕೊಡತೆ ಹಾಗೂ ಕಾನೂನು ಸಲಹೆಗಾರರಾದ ಅಶೋಕ ಬಿ ಭಾಗೋಜಿ ಊರಿನ ಪ್ರಮುಖರಾದ ಭೀಮಪ್ಪ ಯ ಶಿವಾಪೂರ, ಪರಪ್ಪ ಚಿ ಮುಗಳಕೋಡ, ಸಮೃದ್ಧ ಸು ಬೆಳಕೂಡ, ಸಾಗರ ಶಿ ಬೆಳಕೂಡ, ಅಲೀಮ ಇ ಕಳ್ಳಿಮನಿ,  ಶೇಖರಯ್ಯ ಕ ಹಿರೇಮಠ, ಚಂದ್ರಕಾಂತ ಕ ಕೊಡತೆ, ಬಸನಗೌಡ ಮ ಬೋರಗಲ್, ರವೀಂದ್ರ ಹುದ್ದಾರ್ ಮತ್ತಿತರರು ಉಪಸ್ಥಿತರಿದ್ದರು.


ಸೊಸಾಯಿಟಿಗೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರನ್ನು  ಮತ್ತು ನಿರ್ದೇಶಕರನ್ನು  ಸಿಬ್ಬಂದಿ ವರ್ಗದವರು ಸತ್ಕರಿಸಿ ಗೌರವಿಸಿದರು.


Spread the love

About inmudalgi

Check Also

ಬಸವಣ್ಣನವರು ಸಕಲ ಜೀವಿಗಳಿಗೆ ಶ್ರೇಯಸ್ಸು ಬಯಸಿದ್ದರು: ಬಸವಂತ ಕೋಣಿ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ:ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಬಸವಣ್ಣನವರು ವಿಶ್ವದ ಬಹುದೊಡ್ಡ ಸಮಾಜ ಸುಧಾರಕರಾಗಿದ್ದಾರೆ. ಬಸವಣ್ಣನವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ