ತಾಲೂಕಾಡಳಿತದಿಂದ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ
ಮೂಡಲಗಿ: ವೀರಶೈವ ಧರ್ಮ ಸಂಸ್ಥಾಪಕರಾದ ಶ್ರೀ ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ಶಾಂತಿ ಎಂದು ಸಾರಿದ ಶ್ರೇಷ್ಠ ಜಗದ್ಗುರು ಎಂದು ಬೇಡ ಜಂಗಮ ಸಮಾಜದ ಹಿರಿಯರಾದ ಚನಮಲ್ಲಯ್ಯ ನಿರ್ವಾಣಿ ಹೇಳಿದರು.
ಅವರು ತಾಲೂಕಾಡಳಿತದಿಂದ ಬುಧವಾರ ಜರುಗಿದ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಹಶೀಲ್ದಾರ ಶಿವಾನಂದ ಬಬಲಿ, ಬಿಇಒ ಅಜಿತ ಮನ್ನಿಕೇರಿ ಅವರು ಶ್ರೀ ರೇಣುಕಾಚಾರ್ಯರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.
ತಾಪಂ ಇಒ ಎಫ್.ಜಿ.ಚಿನ್ನಪ್ಪನವರ, ಶಂಕ್ರಯ್ಯಾ ಹಿರೇಮಠ, ಶಿವಬಸು ಹಂದಿಗುಂದ, ಪ್ರಕಾಶ ಮಾದರ, ಕಲ್ಮೇಶ ಗೋಕಾಕ, ಮಹಾಲಿಂಗಯ್ಯ ಹಿರೇಮಠ, ಈರಣ್ಣ ಬನ್ನೂರ, ಜಗದೀಶ ಗಾಣಿಗೇರ, ಶಿವಬಸು ಸುಣಧೋಳಿ, ಶಿವಾನಂದ ಹಿರೇಮಠ, ಮಹಾಲಿಂಗಯ್ಯಾ ನಂದಗಾಂವಮಠ, ಚೇತನ ನಿಶಾನಿಮಠ, ಸಿದ್ದಯ್ಯಾ ಮಠಪತಿ ಮತ್ತಿತರರು ಉಪಸ್ಥಿತರಿದ್ದರು.