*ಮೂಡಲಗಿಯಲ್ಲಿ ಸಂಭ್ರಮದ ರಂಜಾನ್ ಆಚರಣೆ*
ಮೂಡಲಗಿ:ಸಹೋದರತ್ವ,ಸಾಮರಸ್ಯ, ಶಾಂತಿ, ಸೌಹಾರ್ದತೆ, ಸಹಬಾಳ್ವೆಯ ಪ್ರತೀಕವಾಗಿರುವ ಈದ್ ಉಲ್ ಫಿತ್ರ ಪವಿತ್ರ ರಂಜಾನ್ ಹಬ್ಬವು ನಾಡಿನ ಎಲ್ಲ ಜನತೆಗೆ ಸುಖ, ಶಾಂತಿ ಸಂತೋಷ, ನೆಮ್ಮದಿ, ಆರೋಗ್ಯ ಹಾಗೂ ಸಮೃದ್ಧಿಯನ್ನು ನೀಡುವುದರ ಜೊತೆಗೆ ಎಲ್ಲರಿಗೂ ಒಳಿತು ಮಾಡಲಿ ಎಂದು ಮೌಲಾನಾ ಕೌಸರ್ ರಝಾ ಹೇಳಿದರು.
ಸೋಮವಾರ ಜಾಮೀಯಾ ಮಸೀದಿಯಲ್ಲಿ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಗೆ ಸೇರಿದ ಬಾಂಧವರನ್ನುದ್ದೇಶಿಸಿ ಮಾತನಾಡಿದ ಅವರು, ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸಿ ಸಹಾಯ ಹಸ್ತ ನೀಡಿ ಪರಸ್ಪರರು ಸಹೋದರರಂತೆ ಬಾಳಿ ಸರ್ವಶಕ್ತ ಅಲ್ಲಾಹನ ಪ್ರೀತಿಗೆ ಪಾತ್ರರಾಗಬೇಕು ಎಂದರು . ಸಾಮೂಹಿಕ ಪ್ರಾರ್ಥನೆ ನಂತರ ಪರಸ್ಪರರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮದಿಂದ ರಂಜಾನ್ ಆಚರಿಸಿದರು. ಈ ಸಂದರ್ಭದಲ್ಲಿ ಹಾಫೀಜ ನಿಜಾಮುದ್ದೀನ್, ಫಯಾಜ್ ರಾಜವಿ ಬಿ ಟಿ ಟಿ ಕಮಿಟಿ ಪ್ರಭಾರಿ ಅಧ್ಯಕ್ಷ ಮಲೀಕ ಕಳ್ಳಿಮನಿ, ಕಾರ್ಯದರ್ಶಿ ಮದಾರ ಮುಗುಟಖಾನ, ಹಸನಸಾಬ ಮುಗುಟಖಾನ, ಇಮಾಮ್ ಹುಸೇನ್ ತಾಂಬೋಳಿ, ಅಮೀರಸಾಬ ಥರಥರಿ, ಹುಸೇನ್ ಥರಥರಿ, ಸಲೀಂ ಇನಾಮದಾರ,ಮೀರಾಸಾಬ ಝಾರೆ, ಅಧ್ಯಕ್ಷ ಶರೀಫ ಪಟೇಲ್, ಅನ್ವರ್ ನದಾಫ್ ಅಜೀಜ್ ಡಾಂಗೆ, ಗಫಾರ ಡಾಂಗೆ,ಸೇರಿದಂತೆ ಅನೇಕ ಮುಖಂಡರು ಯುವಕರು ಮಕ್ಕಳು ಸಮಸ್ತ ಮುಸ್ಲಿಂ ಬಾಂಧವರು ಇದ್ದರು.