Breaking News
Home / ಬೆಳಗಾವಿ / ದೇಶಕ್ಕಾಗಿ ಬದುಕುವುದು ಇಂದಿನ ತುರ್ತು ಅಗತ್ಯವಾಗಿದೆ – ವಿಶುಕುಮಾರ ಮಾಳಿ

ದೇಶಕ್ಕಾಗಿ ಬದುಕುವುದು ಇಂದಿನ ತುರ್ತು ಅಗತ್ಯವಾಗಿದೆ – ವಿಶುಕುಮಾರ ಮಾಳಿ

Spread the love

ದೇಶಕ್ಕಾಗಿ ಬದುಕುವುದು ಇಂದಿನ ತುರ್ತು ಅಗತ್ಯವಾಗಿದೆ – ವಿಶುಕುಮಾರ ಮಾಳಿ

ಗೋಕಾಕ: ದೇಶಕ್ಕಾಗಿ ಬದುಕುವುದು ಇಂದಿನ ಇಂದಿನ ಅಗತ್ಯವಾಗಿದೆ ಎಂದು ಇತಿಹಾಸ ಚಿಂತಕ ವಿಶುಕುಮಾರ ಮಾಳಿ ಹೇಳಿದರು. ಅವರು ಗೋಕಾಕ ಶಿಕ್ಷಣ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಇತಿಹಾಸ ಮತ್ತು ಪೌರನೀತಿ ಸಂಘದ ಉದ್ಘಾಟನೆ ಹಾಗೂ ಬಲಿದಾನ ದಿವಸ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಭಾರತವೆಂದರೆ ಅದು ಬರಿ ಮಣ್ಣಲ್ಲ. ಅದು ಭಾವ ರಾಗ ತಾಳಗಳ ಸಮ್ಮಿಳನವಾಗಿದೆ. ಇಲ್ಲಿನ ಬಾಲಕರಾದಿಯಾಗಿ ವಯೋವೃದ್ಧರವರೆಗೂ ಈ ದೇಶಕ್ಕಾಗಿ ಸಮರ್ಪಿಸಿಕೊಂಡವರಷ್ಟು ಬೇರೆ ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಹಾಗಾಗಿ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗಿ ಮಾಡಿದ ಭಗತ್, ಸಿಂಗ ರಾಜಗುರು, ಸುಖದೇವರಂಥ ರಾಷ್ಟ್ರಭಕ್ತರ ಕುರಿತ ನೈಜ ಇತಿಹಾಸವನ್ನು ನಮ್ಮ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳದಿರುವುದು ನಮ್ಮ ದುರದೃಷ್ಟಕರವಾದುದು ಅದರಿಂದ ಇಂದಿನ ನಮ್ಮ ಯುವಕರು ಭಾರತದ ನೈಜ ಇತಿಹಾಸ ತಿಳಿದುಕೊಳ್ಳುವುದು ಕಷ್ಟವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮೂಡಲಗಿಯ ನೃಿವೃತ್ತ ಗ್ರಂಥಪಾಲಕರಾದ ಬಾಲಶೇಖರ ಬಂದಿಯವರು ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ಶಿಕ್ಷಕರಿಂದಲೇ ದೇಶವನ್ನು ಗಟ್ಟಿಯಾಗಿ ಕಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಅತಿಥಿಗಳಾಗಿ ಆಗಮಿಸಿದ್ದ ಸಂಪನ್ಮೂಲ ಶಿಕ್ಷಕರಾದ ಕಲ್ಲೊಳ್ಳಿಯ ಗಣೇಶ ಉಪ್ಪಾರ ಅವರು, ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ವಿವಿಧ ಸಂಘಗಳನ್ನು ರಚಿಸಿ ಇಂಥ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಪೂರ್ಣ ತರಬೇತಿ ನೀಡುವಲ್ಲಿ ಗೋಕಾಕ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಕಾರ್ಯ ಅತ್ಯಂತ ಶ್ಲಾಘನೀಯವಾದುದು ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ವಿರಾಜ ಮೋದಿಯವರು ಮಾತನಾಡಿ, ಶಿಕ್ಷಕರಾಗುವ ನೀವೆಲ್ಲ ನಮ್ಮ ಭಾರತದ ನೈಜ ಇತಿಹಾಸವನ್ನು ಅರಿಯಲು ಸತತ ಅಧ್ಯಯನಗೈಯುವ ಪ್ರವೃತ್ತಿ ಬೆಳಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ನಿಮಿತ್ಯ ಹಮ್ಮಿಕೊಂಡಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಣ ಮಹಾವಿದ್ಯಾಲಯ ಪ್ರಾಧ್ಯಾಪಕರು ಮತ್ತು ಇತಿಹಾಸ ಮತ್ತು ಪೌರನೀತಿ ಸಂಘದ ಮುಖ್ಯಸ್ಥರಾದ ಪ್ರೊ.ದೇವೀಂದ್ರ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಸುರೇಶ ಮುದ್ದಾರ ಕಾವ್ಯವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಮಹಾವಿದ್ಯಾಲಯ ಪ್ರಾಧ್ಯಾಪಕರಾದ ಪ್ರೊ. ವಾಯ್ ಬಿ ಕೊಪ್ಪದ, ಪ್ರೊ ಎಸ್ ಎಸ್ ಗಾಣಿಗೇರ, ಪ್ರೊ ಕೆ ಜಿ ಜಾಲಿಹಾಳ, ಸಂಘದ ಕಾರ್ಯದರ್ಶಿಗಳಾದ ಕುಮಾರ ಸಂಪತಕುಮಾರ ಮಾಳ್ಯಾಗೋಳ, ಕುಮಾರಿ ಶ್ರೀದೇವಿ ಪಾಟೀಲ ಹಾಗೂ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿನಿ ತ್ರಿವೇಣಿ ಕವಟಕೊಪ್ಪ ಹಾಗೂ ಪ್ರಶಿಕ್ಷಣಾರ್ಥಿ ಸಂಜು ಕನಮಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಶಿಕ್ಷಣಾರ್ಥಿನಿ ಲಕ್ಷ್ಮೀ ತಳವಾರ ದೇಶಭಕ್ತಿ ಗೀತೆಯನ್ನು ಹಾಡಿದರು. ಪ್ರಶಿಕ್ಷಣಾರ್ಥಿನಿ ಶೃತಿ ಶಿಂಧಿಮರದ ಪ್ರಾರ್ಥಿಸಿದರು. ಪ್ರಶಿಕ್ಷಣಾರ್ಥಿನಿ ಪೂಜಾ ಪಾಟೀಲ ಹಾಗೂ ಸುಖದ ಕಲ್ಲೊಳ್ಳಿ ಅತಿಥಿಗಳನ್ನು ಪರಿಚಯಿಸಿದರು. ಪ್ರಶಿಕ್ಷಣಾರ್ಥಿನಿ ಸುಜಾತಾ ಅರಮನಿ ಸ್ವಾಗತಿಸಿದರು ಮತ್ತು ದೀಪಾ ದಾಸಂಗಳಿ ಸ್ವಾಗತ ಗೀತೆ ಪ್ರಸ್ತುತಪಡಿಸಿದರು.ಸೌಮ್ಯಾ ಹಿರೇಮಠ ಪುಷ್ಪಾರ್ಪನೆ ನಡೆಸಿದರು. ಸವಿತಾ ಜಾವಲಿ ವಂದಿಸಿದರು.


Spread the love

About inmudalgi

Check Also

ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

Spread the loveಮೂಡಲಗಿ: ಮೂಡಲಗಿಯ ಪುರಸಭೆ ವಾರ್ಡ ಸಂಖ್ಯೆ 15ರಲ್ಲಿ ಚರಂಡಿ ನಿರ್ಮಾಣಕ್ಕೆ ಬುಧವಾರ ಪುರಸಭೆ ಸದಸ್ಯ ಸಂತೋಷ ಸೋನವಾಲಕರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ