ಮಹಾಲಕ್ಷ್ಮೀ ಅರ್ಬನ್ ಸೊಸಾಯಿಟಿಗೆ ರೂ 4.02 ಕೋಟಿ ಲಾಭ-ಗಾಣಿಗೇರ
ಮೂಡಲಗಿ: ಪಟ್ಟಣದ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ಶೀ ಮಹಾಲಕ್ಷ್ಮೀ ಅರ್ಬನ ಕೋ-ಆಪ ಕ್ರೆಡಿಟ್ ಸೊಸೈಟಿಯು ಕಳೆದ ಮಾರ್ಚ ಅಂತ್ಯಕ್ಕೆ 4.02 ಕೋಟಿ ರೂ ನಿವ್ವಳ ಲಾಭ ಹೊಂದಿ ಪ್ರಗತಿ ಪತಥದತ್ತ ಸಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಮಲ್ಲಪ್ಪ ಗುರಪ್ಪ ಗಾಣಿಗೇರ ಹೇಳಿದರು.
ಅವರು ಪಟ್ಟಣದ ಶ್ರೀ ಮಹಾಲಕ್ಷ್ಮೀ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಸಭಾ ಭವನದಲ್ಲಿ ಸೊಸೈಟಿಯ ಕಛೇರಿಯಲ್ಲಿ ಜರುಗಿದ ಸೊಸೈಟಿಯ ಕಳೆದ ಮಾರ್ಚ ಅಂತ್ಯದ ಪ್ರಗತಿಯ ಕುರಿತು ಸಭೆಯಲ್ಲಿ ಮಾತಡಿ, ಸೊಸೈಟಿಯು ಮಾರ್ಚ ಅಂತ್ಯಕ್ಕೆ 3.01 ಕೋಟಿ ರೂ ಶೇರು ಬಂಡವಾಳ, 120.67 ರೂ ಕೋಟಿ ಠೇವುಗಳು, 19.80 ಕೋಟಿ ರೂ ನಿಧಿಗಳನ್ನು, ಹೊಂದಿ ವಿವಿಧ ಬ್ಯಾಂಕುಗಳಲ್ಲಿ ಠೇವಣಿದಾರರ ಭದ್ರತೆಗಾಗಿ 33.92 ಕೋಟಿ ರೂ ಗುಂತಾವಣಿ ಮಾಡಿ, 106.41. ಕೋಟಿ ರೂ ಸಾಲ ವಿತರಿಸಿದ್ದು, ಒಟ್ಟು ದುಡಿಯುವ ಬಂಡವಾಳ 151.54 ಕೋಟಿ ರೂ ಹೊಂದಿದೆ ಎಂದು ಹೇಳಿದರು.
ಸೊಸೈಟಿಯು 10 ಶಾಖೆಗಳನ್ನು ಹೊಂದಿದ್ದು, ಪ್ರಧಾನ ಕಛೇರಿ, ಖಾನಟ್ಟಿ ಮತ್ತು ಸುಣಧೋಳಿ ಶಾಖೆಗಳು ಸಂಘದ ಸ್ವಂತ ಭ್ಯವವಾದ ಕಟ್ಟಡಗಳನ್ನು ಹೊಂದಿವೆ. ಕಟಕೋಳ ಶಾಖೆಗೆ ನಿವೇಶನ ಖರೀದಿಸಲಾಗಿದೆ. ಎಲ್ಲ ಶಾಖೆಗಳು ಗಣಕೀಕೃತ ಹೊಂದಿದ್ದು. ಪ್ರಾರಂಭದಿಂದಲೂ ಶೇಕಡಾ 15 ಶೇರು ಲಾಭಾಂಶ ವಿತರಿಸುತ್ತಾ ಶೇರುದಾರರ ವಿಶ್ವಾಸವನ್ನು ಗಳಿಸಿರುತ್ತದೆ.
ಸಂಘವು 1992 ನೇ ಇಸ್ವಿಯಲ್ಲಿ ಪ್ರಾರಂಭವಾಗಿದ್ದು, 33ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಕಡಿಮೆ ಬಂಡವಾಳದಲ್ಲಿ ಅತೀ ಹೆಚ್ಚು ಲಾಭ ಗಳಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸಾಲ ವಸೂಲಾತಿ ಆಗಿದೆ. ಇದಕ್ಕೆಲ್ಲ ಸಂಘದ ಪ್ರಧಾನ ಕಛೇರಿಯ ಆಡಳಿತ ಮಂಡಳಿ ಸದಸ್ಯರು, ಸರ್ವ ಸಿಬ್ಬಂದಿ ವರ್ಗ ಹಾಗೂ ಶಾಖೆಗಳ ಸಲಹಾ ಸಮಿತಿ ಸದಸ್ಯರ ನಿಸ್ವಾರ್ಥ ಸೇವೆ ಹಾಗೂ ಗ್ರಾಹಕರು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುತ್ತಿರುವದರಿಂದ ಪ್ರಮುಖ ಕಾರಣವಾಗಿದೆ ಎಂದರು.
ಸಭೆಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಡಾ. ಪ್ರಕಾಶ ಶಿವಪ್ಪ ನಿಡಗುಂದಿ, ನಿರ್ದೇಶಕರಾದ ಮುತ್ತಪ್ಪ ಈರಪ್ಪನವರ, ಶಿವಬಸು ಖಾನಟ್ಟಿ, ಸಂತೋಷ ಪಾರ್ಶಿ, ಮಹಾದೇವ ಗೋಕಾಕ, ಸಚೀನ ಮುನ್ಯಾಳ, ಸಾಂವಕ್ಕ ಶೆಕ್ಕಿ, ಭಾರತಿ ಪಾಟೀಲ, ವಿದ್ಯಾಶ್ರೀ ಮುರಗೋಡ, ಗೌರವ್ವ ಪಾಟೀಲ, ಶೋಭಾ ಕದಂ, ಸಂಘದ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ ಬಗನಾಳ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.