Breaking News
Home / ಬೆಳಗಾವಿ / *ಮೂಡಲಗಿ:ಕೋರ್ಟ್ ರೋಡ್ ಅಗಲೀಕರಣಕ್ಕೆ ಆಗ್ರಹ.

*ಮೂಡಲಗಿ:ಕೋರ್ಟ್ ರೋಡ್ ಅಗಲೀಕರಣಕ್ಕೆ ಆಗ್ರಹ.

Spread the love

ಮೂಡಲಗಿ : ನೂತನ ನ್ಯಾಯಾಲಯದ ಮುಂದಿನ ಪ್ರಮುಖ ರಸ್ತೆ ಅತೀ ಚಿಕ್ಕದಾಗಿದ್ದು ವಾಹನ ಸವಾರರು ಹಾಗೂ ಪಾದಾಚಾರಿಗಳು ನಿತ್ಯ ಪರದಾಡುವಂತಾಗಿದೆ ಆದ್ದರಿಂದ ರಸ್ತೆಯನ್ನು ಅಗಲೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುಕೂಲು ಮಾಡಿಕೊಡಬೇಕೆಂದು ಆಗ್ರಹಿಸಿ ಪಟ್ಟಣದ ಹೋರಾಟಗಾರರು ಹಾಗೂ ನ್ಯಾಯವಾದಿಗಳ ಪರವಾಗಿ ಸಮಾಜ ಸೇವಕ ಮಹಾಲಿಂಗಯ್ಯ ನಂದಗಾಂವಮಠ ಅವರು ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಂಗಳವಾರದಂದು ಸಲ್ಲಿಸಿದ ಮನವಿಯಲ್ಲಿ ಪಟ್ಟಣದ ಚನ್ನಮ್ಮ ವೃತ್ತದಿಂದ ಗುರ್ಲಾಪೂರ ರಸ್ತೆ (ಟಿಪ್ಪು ಸುಲ್ತಾನ್ ವೃತ್ತದ ವರೆಗೆ) ಸಂಚರಿಸಲು ರಸ್ತೆ ಅಸ್ತವ್ಯಸ್ತವಾಗಿದ್ದು ಇದನ್ನು ಅಗಲೀಕರಣ ಮಾಡುವುದರ ಜೊತೆಗೆ ಡಬಲ್ ರಸ್ತೆ ಮಾಡಿ ಒನ್ ವೇ ಸಂಚಾರ ಮಾರ್ಗ ಮಾಡಿ ಸುರಕ್ಷಿತ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಮತ್ತು ಶೀಘ್ರ ಕಾಮಗಾರಿಯನ್ನು ಕೈಗೊಂಡು ರಸ್ತೆಯ ಸೌಂದರೀಕರಣ ಹೆಚ್ಚಿಸಬೇಕು ಎಂದು ಮನವಿ ಮೂಲಕ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಹೊಳೆಪ್ಪ ಶಿವಾಪೂರ ಇದ್ದರು.


Spread the love

About inmudalgi

Check Also

ರಂಗಭೂಮಿ ಮತ್ತು ಜಾನಪದ ಕಲೆ ನಿತ್ಯ ನೂತನವಾಗಿದೆ : ಶಿವಪುತ್ರ ಪರಮಾನಟ್ಟಿ

Spread the love ಬೆಟಗೇರಿ:ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮಾತ್ರ ರಂಗಭೂಮಿ ಮತ್ತು ಬೈಲಾಟದ ಕಲೆಗಳನ್ನು ಕಾಣಬಹುದಾಗಿದೆ. ಜಾನಪದ ನಮ್ಮ ಸಂಸ್ಕøತಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ