Breaking News
Home / ಬೆಳಗಾವಿ / ವಾರ ಹಿಡಿದ ಪ್ರಯುಕ್ತ ಪಲ್ಲಕ್ಕಿ ಉತ್ಸವ

ವಾರ ಹಿಡಿದ ಪ್ರಯುಕ್ತ ಪಲ್ಲಕ್ಕಿ ಉತ್ಸವ

Spread the love

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಜನ- ಜಾನುವಾರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದ ಕಾರಣ ವಾರ ಹಿಡಿದ ಪ್ರಯುಕ್ತ ಜು.31ರಂದು ಮುಂಜಾನೆ 9 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಪುರ ದೇವರ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಯಿತು.
ಸ್ಥಳೀಯರಿಂದ ಪುರದೇವರ ದೇವಸ್ಥಾನಕ್ಕೆ ತೆರಳಿ ಪೂಜೆ,
ನೈವೇದ್ಯ ಸಮರ್ಪಿಸುವ, ದೇವಾಲಯ ಕಟ್ಟೆಗಳಿಗೆ ನೀರು
ಹಾಕುವದು ಸೇರಿದಂತೆ ವಿವಿಧ ಕಟ್ಟಾ ವಾರ ಆಚರಣೆಯ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಮದ ಪ್ರಮುಖ ಬೀದಿ, ಸ್ಥಳಗಳು ಜನರ ಓಡಾಟವಿಲ್ಲದೇ ಬಿಕೋ ಎನ್ನುತ್ತಿದ್ದವು. ಮಂಗಳವಾರ ಆಗಸ್ಟ್ .4 ಮತ್ತು ಆಗಸ್ಟ್ 11ರಂದು ಇನ್ನೂ ಎರಡು ದಿನÀವನ್ನು ಗ್ರಾಮದಲ್ಲಿ ಸಂಪ್ರದಾಯದಂತೆ ವಾರ ಹಿಡಿಯಲಾಗಿದೆ.
ಸಾರ್ವಜನಿಕರಲ್ಲಿ ಮನವಿ:ಇನ್ನೂ ಎರಡು ವಾರದ ದಿನ ಬೆಟಗೇರಿ ಗ್ರಾಮ ಸಂಪೂರ್ಣ ಬಂದ್ ಆಚರಿಸಿದಂತಿರುತ್ತದೆ. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಸಾರ್ವಜನಿಕರು ಸಹಕರಿಸಬೇಕೆಂದು ಸ್ಥಳೀಯ ವಾರ ಹಿಡಿದ ಆಯೋಜನೆ ಸಮಿತಿಯ ಹಿರಿಯ ನಾಗರಿಕ ಮಾಯಪ್ಪ ಬಾಣಸಿ ತಿಳಿಸಿದ್ದಾರೆ.
ಸಿದ್ಧಬೀರಪ್ಪ ಧರ್ಮಟ್ಟಿ, ಗುರಪ್ಪ ಮಾಕಾಳಿ, ಬಸು
ಕೆಂಪನಿಂಗಪ್ಪಗೋಳ, ಸುಭಾಷ ಕರೆಣ್ಣವರ, ಮುದಕಪ್ಪ
ಚಂದರಗಿ, ಮಾಯಪ್ಪ ನೀಲಜಗಿ, ಬಸು ಮಾಕಾಳಿ, ವಿನಾಯಕ ನಾಯ್ಕರ, ನಾಗರಾಜ ಕೋಣಿ, ಸ್ಥಳೀಯ ವಿವಿಧ ದೇವರ ಅರ್ಚಕರು, ಹಿರಿಯ ನಾಗರಿಕರು, ಸ್ಥಳೀಯ ವಾರ ಹಿಡಿದ ಆಯೋಜನೆ ಸಮಿತಿಯ ಸದಸ್ಯರು, ಸ್ಥಳೀಯರು ಇದ್ದರು.


Spread the love

About inmudalgi

Check Also

ಬೆಟಗೇರಿ ಗ್ರಾಮದ ಅಭಿವೃದ್ಧಿಗೆ ಸ್ಥಳೀಯರು ಸಹಕರಿಸಿ:ಶಿವಾನಂದ ಪತ್ತಾರ

Spread the loveಬೆಟಗೇರಿ:ಗ್ರಾಮದ ಅಭಿವೃದ್ಧಿಗೆ ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಪಿಡಿಒ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ