Breaking News
Home / ಬೆಳಗಾವಿ / “ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು ಆತನ ದುರಾಸೆಯನ್ನಲ್ಲ. – ಬಿ ಇ ಓ ಅಜೀತ್ ಮನಿಕೇರಿ

“ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು ಆತನ ದುರಾಸೆಯನ್ನಲ್ಲ. – ಬಿ ಇ ಓ ಅಜೀತ್ ಮನಿಕೇರಿ

Spread the love

ಮೂಡಲಗಿ : ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು ಆತನ ದುರಾಸೆಯನ್ನಲ್ಲ ಮಾನವ ತನ್ನ ಬದುಕಿಗೆ ಆಸರೆಯಾಗಿರುವ ಪರಿಸರ ವಿನಾಶಕ್ಕೆ ಇಂದಿನ ಜೀವನ ಶೈಲಿಗಳ ಮೂಲಕ ಕಾರಣವಾಗುತ್ತಿದ್ದು ಪರಿಸರ ಸಂರಕ್ಷಣೆ ನಮ್ಮ ಮುಖ್ಯವಾದ ಕರ್ತವ್ಯವಾಗಿರಬೇಕೆಂದು ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ್ ಮೆನ್ನಿಕೇರಿ ಹೇಳಿದರು.
ಅವರು ಪಟ್ಟಣದ ಆರ್ ಡಿ ಸೊಸೈಟಿಯ ಶ್ರೀ ವಿದ್ಯಾನಿಕೇತನ ಅಃSಇ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಆಯೋಜಿಸಿದ ಪರಿಸರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ ಪರಿಸರ ಸಕಲಜೀವಿಗಳ ಆಶ್ರಯತಾಣ ಸಸ್ಯ ಪ್ರಾಣಿ ಜಲ ಗಾಳಿ ಇವುಗಳ ಆಗರವಾಗಿದ್ದು ಅದರ ಅವನತಿಗೆ ನಾವು ಬಳಸುವ ಆಧುನಿಕ ಜೀವನ ಶೈಲಿಯ ಸಾಧನಗಳು ಕಾರಣವಾಗಿದ್ದು. ಸಾಧ್ಯವಾದಷ್ಟು ನಮ್ಮ ಮಕ್ಕಳ ಜೀವನಕ್ಕೆ ಆಧಾರವಾಗಿ ನಿಲ್ಲುವಂತಹ ಪರಿಸರವನ್ನು ಉಳಿಸಿ ಬೆಳಸಿಕೊಂಡು ಹೋಗುವುದರ ಕಡೆಗೆ ಆಧ್ಯತೆ ನೀಡಿ ಮಕ್ಕಳ ಮೂಲಕ ಜಗತ್ತಿಗೆ ಪರಿಸರದ ಮೌಲ್ಯ ತಿಳಿಸೋಣ ಎಂದರು.
ಶಾಲೆಯ ಪ್ರಾಂಶುಪಾಲರಾದ ದ್ರಾಕ್ಷಾಯಿಣಿ ಮಠಪತಿ ಮಾತನಾಡಿ”ಭೂಮಿಯು ಸುಂದರವಾದ ವಧುವಿನಂತೆ ಇದ್ದು ಅವಳ ಸೌಂದರ್ಯವನ್ನು ಹೆಚ್ಚಿಸಲು ಯಾವುದೇ ಮಾನವ ನಿರ್ಮಿತ ಆಭರಣಗಳ ಅಗತ್ಯವಿಲ್ಲ; ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು .ಇದೇ ಸಂಧರ್ಭದಲ್ಲಿ ಊರಿನ ಹಲವು ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಸಂತೋμï ತ ಪಾರ್ಶಿ ಪಟ್ಟಣದ ಪಿ ಎಸ್ ಐ, ಪುರಸಭೆಯ ಅಧ್ಯಕ್ಷರು ಸಿಡಿಪಿಓ ಹಾಗೂ ಮುಖ್ಯಾಧಿಕಾರಿಗೆ ಸಸಿಯನ್ನು ಕೊಡುವುದರ ಮುಖಾಂತರ ಅವರನ್ನು ಈ ಕಾರ್ಯಕ್ರಮಕ್ಕೆ ಸ್ವಾಗತಿಸಿ. ಪರಿಸರದ ಕಾಳಜಿಯಲ್ಲಿ ನಮ್ಮ ಸಮಾಜ ಹೆಚ್ಚಿನ ಆಧ್ಯತೆ ನೀಡಬೇಕೆಂದು ಹೇಳಿದರು.
ಶಾಲೆಯ ಮುದ್ದು ಮಕ್ಕಳಿಂದ ನಗರದ ಕಲ್ಮೇಶ್ವರ ಸರ್ಕಲ್ ದಲ್ಲಿ ಮಾನವ ಸರಪಳಿ ನಿರ್ಮಿಸಿ ಪರಿಸರ ಸಂರಕ್ಷಣೆಯ ಘೋಷವಾಕ್ಯ ಹೇಳಿ ಪರಿಸರ ಜಾಗೃತಿಯ ಅಗತ್ಯತೆಗಳನ್ನು ತಿಳಿಸಿದರು ಶಿಕ್ಷಕಿ ಸಾವಿತ್ರಿ ಸಿದ್ದಾಪುರ ಸ್ವಾಗತಿಸಿ ನಿರೂಪಿಸಿದರು ಕುಮಾರಿ ಲತಾ ಮೇಡಂ ಅವರು ವಂದಿಸಿದರು


Spread the love

About inmudalgi

Check Also

ಲಿಂಗಾಯತ ಸಮಾಜದವರನ್ನೇ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಜಾರಕಿಹೊಳಿ ಕುಟುಂಬದಿಂದ ಅಧ್ಯಕ್ಷರಾಗುವ ಮಾತೇ ಇಲ್ಲ – ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಬೆಳಗಾವಿ: ಈಗ ಬಹಳ ಜನರ ಬಯಕೆ ಬಿಡಿಸಿಸಿ ಬ್ಯಾಂಕ್‌ಗೆ ಬರುವುದು. ಆದರೆ, ನಾನು ಬಿಡಿಸಿಸಿ ಬ್ಯಾಂಕ್‌ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ