ಮೂಡಲಗಿ ‘ಅಜ್ಞಾನವನ್ನು ದೂರಮಾಡಿ ಸುಜ್ಞಾನರನ್ನಾಗಿಸುವ ಗುರುವಿನ ಮಹಿಮೆಯು ಅಪಾರವಾಗಿದೆ’ ಎಂದು ಮುನ್ಯಾಳ-ರಂಗಾಪೂರ, ಭಾಗೋಜಿಕೊಪ್ಪದ ಡಾ.ಶಿವಲಿಂಗಮುರಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜ್ಞಾನದೀಪ್ತಿ ಸಾಹಿತ್ಯ ಪ್ರತಿμÁ್ಠನದಿಂದ ಆಯೋಜಿಸಿದ್ದ ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ ಮತ್ತು ಗುರುಪೂರ್ಣಿಮ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮತ್ತು ಸಂಘಟಕರು ನೀಡಿದ ಸನ್ಮಾನ ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವರು ಭಕ್ತರ ಮನಸ್ಸಿನ ಮಾಲೀನ್ಯದಿಂದ ಮುಕ್ತಗೊಳಿಸುವ ಗುರು ಶ್ರೇಷ್ಠನಾಗುತ್ತಾನೆ ಎಂದರು.
ಧರ್ಮಟ್ಟಿಯ ವೈದ್ಯ ಡಾ. ಶಿವಾನಂದ ವಾಘಲೆ ಶ್ರೀ ಗುರುಯ್ಯೋ ನಮ: ವಿಷಯ ಕುರಿತು ಉಪನ್ಯಾಸ ನೀಡಿ ‘ನಾನು ಎನ್ನುವ ಅಹಂಕಾರದಿಂದ ಮುಕ್ತಿಯಾದಾಗ ಮಾತ್ರ ಜೀವನ ಸಾರ್ಥಕವಾಗುವುದು ಮತ್ತು ಸಾಧನೆಗೆ ದಾರಿ ದೊರೆಯುವುದು ಎಂದರು.
ಮುಖ್ಯ ಅತಿಥಿ ನಿವೃತ್ತ ಉಪಪ್ರಾಚಾರ್ಯ ಆರ್.ಟಿ. ಲಂಕೆಪ್ಪನ್ನವರ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ವೈದ್ಯ ಡಾ. ಸಂಜಯ ಶಿಂಧಿಹಟ್ಟಿ ಅಧ್ಯಕ್ಷತೆವಹಿಸಿದ್ದರು.
ಕಸಾಪ ಖಜಾಂಚಿ ಬಿ.ವೈ.ಶಿವಾಪುರ ಪ್ರಾಸ್ತಾವಿಕ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಿರಂತರವಾಗಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿರುವ ಬಗ್ಗೆ ತಿಳಿಸಿದರು.
ಎಸ್.ಎಂ. ಕಮದಾಳ, ಬಾಲಶೇಖರ ಬಂದಿ, ಮಹಾದೇವ ಜಿಡ್ಡಿಮನಿ, ಎಸ್.ಡಿ. ತಳವಾರ, ಕಸಾಪ ಕಾರ್ಯದರ್ಶಿ ಎ.ಎಚ್. ಒಂಟಗೋಡಿ, ಬಸವಂತಪ್ಪ ತರಕಾರ, ಮುನ್ಯಾಳದ ವೈದ್ಯ ನಾಗರಾಳ, ಶಿವರಾಜ ಕಾಂಬಳ, ಸಲಬನ್ನವರ ಇದ್ದರು. ಸುರೇಶ ಲಂಕಪ್ಪನ್ನವರ ನಿರೂಪಿಸಿದರು.
