ವರದಿ-ಸುಧೀರ ನಾಯರ್
ಬನವಾಸಿ: ಪಟ್ಟಣದ ಬಹಳಷ್ಟು ಕಡೆ ರಸ್ತೆಗಳ ಬದಿಯಲ್ಲಿ ಹಾಕಿರುವ ಕಸದ ರಾಶಿ ರಸ್ತೆಯ ತುಂಬೆಲ್ಲ ಹರಡಿಕೊಂಡಿದ್ದು ಕಸ ತೆರವಿಗೆ ಮುಂದಾಗದಿರುವ ಬನವಾಸಿ ಗ್ರಾಮ ಪಂಚಾಯಿತಿಯ ವಿರುದ್ದ ಸಾರ್ವಜನಿಕರು ಅಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ರಸ್ತೆಯ ಅಕ್ಕ ಪಕ್ಕದಲ್ಲಿರುವ ನಿವಾಸಿಗಳು ಮನೆಯ ತ್ಯಾಜ್ಯಗಳನ್ನು ರಸ್ತೆಗೆ ತಂದು ಹಾಕುತ್ತಿರುವುದರಿಂದ ಪರಿಸರ ತುಂಬೆಲ್ಲ ಕಸ ತುಂಬಿ ಸುತ್ತಲಿನ ವಾತವಾರಣ ಗಬ್ಬೆದ್ದು ನಾರುತ್ತಿದೆ. ಗ್ರಾಮ ಪಂಚಾಯಿತಿ ಕಸವನ್ನು ಹಾಕಲು ಸ್ಥಳದ ಜೊತೆ ಸೂಕ್ತ ವ್ಯವಸ್ಥೆ ಕಲ್ಪಿಸದೇ ಇರುವುದು ಇದಕ್ಕೆ ಕಾರಣವೆಂದು ಸಾರ್ವಜನಿಕರ ಆರೋಪವಾಗಿದೆ.
ಇಲ್ಲಿನ ವಾರ್ಡ್‍ನಂ 5ರ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ರೈತ ಸಂಪರ್ಕ ಕೇಂದ್ರದ ಪಕ್ಕದಲ್ಲಿರುವ ಹಾಕಿರುವ ಕಸದ ರಾಶಿಯ ದೃಶ್ಯ ಪ್ರತಿದಿನ ನೂರಾರು ಜನ ಸಾಗುವ ಈ ರಸ್ತೆಯ ಬದಿಯಲ್ಲಿ ಏರಡು ಮೂರು ತಿಂಗಳಿನಿಂದ ಬಿದ್ದಿರುವ ಕಸದ ರಾಶಿ ರಸ್ತೆಯ ತುಂಬೆಲ್ಲಾ ಹರಡಿದ್ದು ವಾತವಾರಣ ದುರ್ವಾಸನೆಯಿಂದ ಕೂಡಿದೆ. ಅಲ್ಲಿನ ನಿವಾಸಿಗಳಿಗೆ ಮನೆಯ ತ್ಯಾಜ್ಯವನ್ನು ಹಾಕಲು ಸ್ಥಳ ಮತ್ತು ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ತ್ಯಾಜ್ಯವನ್ನು ರಸ್ತೆಯ ಪಕ್ಕದಲ್ಲೆ ಹಾಕುತ್ತಿದ್ದು ಇದನ್ನು ಗ್ರಾಮ ಪಂಚಾಯಿತಿಯವರು ತೆಗೆದುಕೊಂಡು ಹೋಗದೇ ಅಲ್ಲೇ ಬಿಟ್ಟಿರುವುದರಿಂದ ಅದು ರಸ್ತೆಯ ತುಂಬೆಲ್ಲ ಹರಡಿಕೊಂಡಿದೆ. ರೈತ ಸಂಪರ್ಕ ಕೇಂದ್ರದ ಕಛೇರಿಯೂ ಇದರ ಪಕ್ಕದಲ್ಲಿಯೇ ಇರುವುದರಿಂದ ರೈತರು ಮೂಗು ಮುಚ್ಚಿಕೊಂಡು ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ಸಮೀಪದಲ್ಲಿಯೇ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು ವೈದ್ಯಧಿಕಾರಿಗಳು ಈ ಬಗ್ಗೆ ಗಮನ ಹರಿಸದೇ ಇರುವುದು ವಿಪರ್ಯಸ ಇದೊಂದೇ ಕಡೆಯಲ್ಲದೇ ಪಟ್ಟಣದ ಸಾಕಷ್ಟು ಕಡೆಗಳಲ್ಲಿ ಇಂತಹ ಸಮಸ್ಯೆಯಿದ್ದು ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ತ್ಯಾಜ್ಯ ನಿರ್ವಹಣೆಯ ಸಮಸ್ಯೆಯನ್ನು ಪರಿಹಾರ ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ದೇಶದಲ್ಲೆಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಚ್ಛ ಭಾರತದ ಕನಸು ನನಸು ಮಾಡಲು ಹಲವಾರು ಯೋಚನೆಗಳನ್ನು ಯೋಜನೆಗಳ ಮುಖಾಂತರ ಕಾರ್ಯ ರೂಪಕ್ಕೆ ತರುತ್ತಿದ್ದಾರೆ. ಅದಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆಯು ದೊರೆಯುತ್ತಾ ಇದೆ. ಸ್ವಚ್ಛತಾ ಅಭಿಯಾನದ ವಿವಿಧ ಕಾರ್ಯಕ್ರಮಗಳ ಮುಖಾಂತರ ಶಾಲಾ ಕಾಲೇಜುಗಳಿಂದ ಹಿಡಿದು ಸಾರ್ವಜನಿಕರಲ್ಲಿ ಸ್ವಚ್ಛತೆ ಮೂಡಿಸುವ ಕಾರ್ಯ ಸಮರೋಪಾದಿಯಲ್ಲಿ ಜರುಗುತ್ತಿದೆ. ಸ್ಥಳೀಯಾಡಳಿತಗಳು ತ್ಯಾಜ್ಯ ನಿರ್ವಹಣೆಯ ಸಮಸ್ಯೆಗಳ ಪರಿಹಾರಕ್ಕಾಗಿ ಸಮಗ್ರ ಹಾಗೂ ಪರಿಣಾಮಕಾರಿ ಕಾರ್ಯ ಯೋಜನೆಗಳನ್ನು ಜಾರಿಗೆ ತರದೇ ಇರುವುದರಿಂದ ಹಾಗೂ ಜನರ ಅಸಹಕಾರದಿಂದಾಗಿ ಸ್ವಚ್ಛತಾ ಅಭಿಯಾನ ನಿರೀಕ್ಷಿತ ವೇಗ ಪಡೆಯದೇ ಕುಂಟುತ್ತಾ ಸಾಗುತ್ತಿದೆ. ಇನ್ನಾದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತು ಕೊಳ್ಳುವರೇ ಎಂದು ಕಾದು ನೋಡಬೇಕಾಗಿದೆ.
ವಾರ್ಡ್ ನಂ 5ರಲ್ಲಿ ಕಸ ಹಾಕಲು ಸೂಕ್ತ ವ್ಯವಸ್ಥೆಯಿಲ್ಲವಾಗಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರದಲ್ಲಿ ಹಲವಾರು ಬಾರಿ ಕಸ ವಿಲೇವಾರಿ ಮಾಡಿಸಿದ್ದೆವೆ. ಸಾರ್ವಜನಿಕರು ಮತ್ತೆ ಅಲ್ಲೇ ಕಸ ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಸಾರ್ವಜನಿಕರು ಗ್ರಾಮ ಪಂಚಾಯಿತಿಯೊಂದಿಗೆ ಸಹಕರಿಸಿದ್ದಲ್ಲಿ ಮಾತ್ರ ಸಮಸ್ಯೆ ಬಗೆಹರಿಯುತ್ತದೆ.
ಪೂರ್ಣಿಮ ಎಸ್. ಪಿಳ್ಳೆ
ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ