Breaking News
Home / ಬೆಳಗಾವಿ / ನುಲಿಯ ಚಂದಯ್ಯನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು:ರಮೇಶ ಅಳಗುಂಡಿ

ನುಲಿಯ ಚಂದಯ್ಯನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು:ರಮೇಶ ಅಳಗುಂಡಿ

Spread the love

ಬೆಟಗೇರಿ:ವಿಶ್ವಗುರು ಬಸವಣ್ಣನವರ ಮಾತನ್ನು ಚಾಚು ತಪ್ಪದೇ ಪಾಲಿಸಿ ನಡೆದ ನುಲಿ ಚಂದಯ್ಯ ಸಮಾಜ ಸುಧಾರಣೆಗೆಗಾಗಿ ದುಡಿದವರು ಎಂದು ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಆ.9ರಂದು ನಡೆದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೆ ಆದ ಅನುಭವದ ಮುಂದೆ ಯಾವ ಪದವಿಯೂ ದೊಡ್ಡದಲ್ಲ, ನುಲಿಯ ಚಂದಯ್ಯನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.
ಶಾಲೆಯಲ್ಲಿ ರಾಖಿ ಹಬ್ಬ ಆಚರಣೆ:ಸ್ಥಳೀಯ ಪ್ರೌಢ ಶಾಲೆಯಲ್ಲಿ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪುಪ್ಷಾರ್ಪನೆ ಸಮರ್ಪಿಸಿ, ಸಿಹಿ ವಿತರಿಸಿದ ಬಳಿಕ ರಕ್ಷಾ ಬಂಧನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯರು 10ನೇ ತರಗತಿ ವಿದ್ಯಾರ್ಥಿಗಳಿಗೆ, 9 ನೇ ತರಗತಿ ವಿದ್ಯಾರ್ಥಿನಿಯರು 8 ನೇ ತರಗತಿ ವಿದ್ಯಾರ್ಥಿಗಳಿಗೆ, 10 ನೇ ತರಗತಿ ವಿದ್ಯಾರ್ಥಿನಿಯರು 9 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕರಿಗೆ ಶಿಕ್ಷಕಿಯರು, ಮಹಿಳಾ ಸಿಬ್ಬಂದಿ, ವಿದ್ಯಾರ್ಥಿನಿಯರು ವಿದ್ಯಾರ್ಥಿ ಅಣ್ಣ-ತಮ್ಮಂದಿರಿಗೆ ಹಣೆಗೆ ವಿಭೂತಿ, ಕುಂಕುಮದ ತಿಲಕವಿಟ್ಟು, ಆರತಿ ಬೆಳಗಿ, ರಾಖಿ ಕಟ್ಟಿದ ಬಳಿಕ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರಿಗೆ, ಶಿಕ್ಷಕರು ಶಿಕ್ಷಕರು ಶಿಕ್ಷಕಿಯರ ಕಾಲಿಗೆ ನಮಸ್ಕರಿಸುವ ದೃಶ್ಯ ಸಹೋದರತ್ವ ಭಾವನೆಗೆ ಸಾಕ್ಷಿಯಾಯಿತು. ಈ ಮಹತ್ವಪೂರ್ಣ ರಕ್ಷಾ ಬಂಧನ ಹಬ್ಬ ಆಚರಿಸಿ ಸಂಭ್ರಮಿಸಿದರು.
ನುಲಿಯ ಚಂದಯ್ಯ ಮತ್ತು ರಕ್ಷಾ ಬಂಧನ ಹಬ್ಬದ ಕುರಿತು ಶಾಲೆಯ ಅತಿಥಿ ಶಿಕ್ಷಕಿ ಸೌಮ್ಯಾಶ್ರೀ ಗಂಗಾ ಮಾತನಾಡಿ, ರಕ್ಷಾ ಬಂಧನವು ಒಡಹುಟ್ಟಿದವರ ನಡುವಿನ ವಾತ್ಸಲ್ಯವನ್ನು ಬಿಂಬಿಸುವ ಹಬ್ಬವೇ ರಾಖಿ ಕಟ್ಟುವ ರಕ್ಷಾ ಬಂಧನ ಹಬ್ಬವಾಗಿದೆ. ಅಲ್ಲದೇ ಸಹೋದರ-ಸಹೋದರಿಯರ ಪ್ರೀತಿ, ವಾತ್ಸಲ್ಯ, ಭಾತೃತ್ವದ ಬಿಂಬಿಸುವ ಮಹತ್ವಪೂರ್ಣ ಹಬ್ಬವಾಗಿದೆ ಎಂದರು.
ಈ ವೇಳೆ ಪ್ರಕಾಶ ಕುರಬೇಟ, ಈರಣ್ಣ ಪಟಗುಂದಿ, ರಮೇಶ ಬುದ್ನಿ, ರಾಕೇಶ ನಡೋಣೆ, ವೈ.ಎಂ.ವಗ್ಗರ, ಗಣಪತಿ ಭಾಗೋಜಿ, ಸಿರಾಜ ಅಹಮ್ಮದ ಜಿಡ್ಡಿಮನಿ, ಈಶ್ವರ ಮುನವಳ್ಳಿ, ಶುಭಾ ಬಿ., ಭಾಗ್ಯಶ್ರೀ ನಾಯ್ಕ, ಮಂಜುನಾಥ ಸವತಿಕಾಯಿ, ನಾಗರಾಜ ಅರಳಿಮಟ್ಟಿ, ಸಿದ್ರಾಮೇಶ ಕಮತ, ಮುಸ್ಕಾನ್ ರಾಜೆಖಾನ, ಮಲ್ಹಾರಿ ಪೋಳ, ಆನಂದ ಬಡಿಗೇರ, ಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಣಪ್ರೇಮಿಗಳು, ಇತರರು ಇದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ