Breaking News
Home / Recent Posts / ಭಗೀರಥ ಶಾಲೆಯ ಆವರಣದಲ್ಲಿ ಗಿಡ ನಾಟಿ ಮಾಡಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ

ಭಗೀರಥ ಶಾಲೆಯ ಆವರಣದಲ್ಲಿ ಗಿಡ ನಾಟಿ ಮಾಡಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ

Spread the love

ಮೂಡಲಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಡಲಗಿ ವಲಯದ ನಾಗನೂರ ಗ್ರಾಮದ ಭಗೀರಥ ಶಾಲೆಯ ಆವರಣದಲ್ಲಿ ಗಿಡ ನಾಟಿ ಮಾಡಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಜರುಗಿತು.
ಮುಖ್ಯ ಅತಿಥಿ ಭಗೀರಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪರಸಪ್ಪ ಎಲ್.ಬಬಲಿ ಮಾತನಾಡಿ ಸರ್ಕಾರವು ಜನರಿಗೆ ಗ್ಯಾಸ್ ಸಿಲೆಂಡರ್ ನೀಡುವುದರ ಮುಖಾಂತರ ಪರಿಸರದ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಿದೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೂಡ ಗ್ರಾಮಗಳಲ್ಲಿ ಸಾರ್ವಜನಿಕ ಸ್ಥಳ ಹಾಗೂ ಶಾಲೆಯ ಆವರಣದಲ್ಲಿ ಗಿಡ ನಾಟಿ ಮಾಡುವುದರ ಮುಖಾಂತರ ಜನರಿಗೆ ಪರಿಸರದ ಕುರಿತು ಜಾಗೃತಿ ಮೂಡಿಸಿ ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನಿವಾದದು ಎಂದರು.

ಯೋಜನೆಯ ಕೃಷಿ ಮೇಲ್ವಿಚಾರಕ ಈರಣ್ಣ ಅಂಗಡಿ ಪ್ರಾಸ್ತಾವಿಕ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕರ್ನಾಟಕದ ಪ್ರತಿಯೊಂದು ಗ್ರಾಮದಲ್ಲಿ ಗಿಡ ನಾಟಿ ಮಾಡಿ ಪರಿಸರದ ಕುರಿತು ಜಾಗೃತಿ ಮೂಡಿಸುತ್ತಿದೆ ಉತ್ತಮವಾದ ಗಾಳಿ ಮತ್ತು ಮಳೆಯನ್ನು ಪಡೆಯಲು ಹೆಚ್ಚು ಗಿಡಮರಗಳನ್ನು ನಾಟಿಮಾಡಿ ಮಾಡಬೇಕೆಂದು ತಿಳಿಸಿದರು.
ಮೂಡಲಗಿ ವಲಯದ ಮೇಲ್ವಿಚಾರಕರಾದ ಪರವಿನ ಮುಜಾವರ್ ಸ್ವಾಗತಿಸಿದರು, ಸೇವಾ ಪ್ರತಿನಿಧಿಯಾದ ಮದೀನಾ ನಾಯಕವಾಡಿ ವಂದಿಸಿದರು,
ಸಮಾರಂಭದಲ್ಲಿ ಭಗೀರಥ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಮಾಂತೇಶ್ ಕರಿಹೋಳಿ, ಶಿಕ್ಷಕರಾದ ಸುಭಾμï ಖಾತೆನವರ್, ಪಾಂಡುರಂಗ ಕಾಳನವರ ಹಾಗೂ ಒಕ್ಕೂಟದ ಉಪಾಧ್ಯಕ್ಷೆ ಲಕ್ಷ್ಮಿ ಸಬರದ, ಸೇವಾ ಪ್ರತಿನಿಧಿ ಕವಿತಾ ದಿನ್ನಿಮನಿ, ಪ್ರಗತಿಬಂಧು ಮತ್ತು ಸ್ವಸಹಾಯ ತಂಡದ ಸದಸ್ಯರು ಉಪಸ್ಥಿತರಿದ್ದರು.


Spread the love

About inmudalgi

Check Also

ಘಟಪ್ರಭಾ ನದಿಗೆ 1.36 ಲಕ್ಷ ಕ್ಯೂಸೆಕ್ಸ್ ನೀರು, ಸುರಕ್ಷತೆಯಿಂದಿರಲು ಸಂತ್ರಸ್ತರಿಗೆ ಶಾಸಕರ ಮನವಿ ನೆರೆಪೀಡಿತ 12 ಕಡೆಗಳಲ್ಲಿ ಗಂಜಿಕೇಂದ್ರಗಳು ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಘಟಪ್ರಭಾ ನದಿಗೆ 1.36 ಲಕ್ಷ ಕ್ಯೂಸೆಕ್ಸ್ ನೀರು, ಸುರಕ್ಷತೆಯಿಂದಿರಲು ಸಂತ್ರಸ್ತರಿಗೆ ಶಾಸಕರ ಮನವಿ ನೆರೆಪೀಡಿತ 12 ಕಡೆಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ