Breaking News
Home / ಬೆಳಗಾವಿ / “ಸತೀಶ ಶುಗರ್ಸ್ ಕಾರ್ಖಾನೆಯಲ್ಲಿ 79 ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ” ಸತೀಶ ಶುಗರ್ಸ 25 ವರ್ಷಗಳನ್ನು ಪೂರೈಸಿ ಯಶಸ್ಸಿನತ್ತ ಸಾಗುತ್ತಿದೆ- ತಳವಾರ

“ಸತೀಶ ಶುಗರ್ಸ್ ಕಾರ್ಖಾನೆಯಲ್ಲಿ 79 ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ” ಸತೀಶ ಶುಗರ್ಸ 25 ವರ್ಷಗಳನ್ನು ಪೂರೈಸಿ ಯಶಸ್ಸಿನತ್ತ ಸಾಗುತ್ತಿದೆ- ತಳವಾರ

Spread the love

ಮೂಡಲಗಿ: ರೈತಬಾಂಧವರ ನಿರಂತರ ಸಹಕಾರ ಮತ್ತು ಕಾರ್ಮಿಕರ ಮತ್ತು ಸಿಬ್ಬಂದಿಯವರ ಅವಿರತ ಸೇವೆಯಿಂದಾಗಿ ಸತೀಶ ಶುಗರ್ಸ ಕಾರ್ಖಾನೆಯು 25 ವರ್ಷಗಳನ್ನು ಪೂರೈಸಿ ಯಶಸ್ಸಿನತ್ತ ಸಾಗುತ್ತಿದೆ ಎಂದು ಸತೀಶ ಶುಗರ್ಸ ಕಾರ್ಖಾನೆಯ ತಾಂತ್ರಿಕ ವಿಭಾಗದ ಉಪಾಧ್ಯಕ್ಷ ವೀರು ತಳವಾರ ಹೇಳಿದರು.

ಅವರು ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ ಶುಗರ್ಸ್ ಕಾರ್ಖಾನೆಯ ಜರುಗಿದ 79ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಸಮಾರಂಭದಲ್ಲಿ ಮಾತನಾಡಿ, ಸ್ವಾತಂತ್ರಕ್ಕಾಗಿ ತ್ಯಾಗ-ಬಲಿದಾನಗಳನ್ನು ಮಾಡಿದ ಮಹಾನ್ ವ್ಯಕ್ತಿಗಳನ್ನು ಪ್ರತಿಯೋಬ್ಬರು ಸ್ಮರಿಸಬೇಕು, ದೇಶ ನಮಗೇನು ನೀಡಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾವೇನು ಮಾಡಿದೇವೆ ಎಂಬುದರ ಬಗ್ಗೆ ತಿಳಿದುಕೊಂಡು ಸ್ವಾತಂತ್ರ ಭಾರತದಲ್ಲಿ ನಾವೆಲ್ಲರೂ ಸಮಾನತೆಯಿಂದ ಬಾಳಬೇಕು. ಸತೀಶ ಶುಗರ್ಸ ಸಂಸ್ಥೆಯು 25 ವರ್ಷಗಳ ಪಯಣದಲ್ಲಿ ಹತ್ತು ಹಲವಾರು ಸಾಧನೆಗಳನ್ನು ಮಾಡುವ ಮೂಲಕ ಅನೇಕ ಸಂಸ್ಥೆಗಳು ಕೊಡಮಾಡುವ ಪ್ರಶಸ್ತಿಗಳನ್ನು ಪಡೆದು ತನ್ನ ಮುಡಿಗೇರಿಸಿಕೊಂಡಿದೆ .ಈ ಸಾಧನೆಯ ಹಿಂದೆ ನಿರಂತರವಾಗಿ ಶ್ರಮಿಸುತ್ತಿರುವ ಸಮೂಹ ಸಂಸ್ಥೆಯ ಚೇರಮನ್‍ರು ಮತ್ತು ಮುಖ್ಯ ಹಣಕಾಸಿನ ಅಧಿಕಾರಿ ಪ್ರದೀಪಕುಮಾರ ಇಂಡಿ ಇವರಿಗೆ ಸಕ್ಕರೆ ಉದ್ಯಮದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ದಿ. ಶುಗರ್ ಟೆಕ್ನೋಲಾಜಿಸ್ಟ್ ಅಸೋಷಿಯೇಶನ್ ಆಪ್ ಇಂಡಿಯಾ, ದೆಹಲಿ ಇವರು ತಮ್ಮ ಸಂಸ್ಥೆಯ ಘಟಿಕೋತ್ಸವ ಸಂದರ್ಭದಲ್ಲಿ ಸನ್2025 ನೇ ಸಾಲಿನ ರಾಷ್ಟ್ರಮಟ್ಟದ ಪ್ರತಿಷ್ಠಿತ“ಉದ್ಯಮ ಶ್ರೇಷ್ಠ” ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಹಾಗೂ ಕಾರ್ಖಾನೆಯ ಉನ್ನತಿಗೆ ತಮ್ಮೆಲ್ಲರ ಸಹಾಯ ಸಹಕಾರ ನಿರಂತರವಾಗಿರಲಿ ಎಂದು ಮನವಿ ಮಾಡಿದರು.
ಹಣಕಾಸು ವಿಭಾಗದ ಉಪಾಧ್ಯಕ್ಷರಾದ ಶಿದಿಲೀಪ ಪವಾರ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಮಹನಿಯರನ್ನು ಮರೆಯುತ್ತಿರುವುದು ದುರಾದೃಷ್ಟಕರ ಎಂದರು. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶವು ಹಲವಾರು ಪ್ರಾಂತ್ಯಗಳಾಗಿ ಅನೇಕ ರಾಜರುಗಳ ಆಡಳಿತದಲ್ಲಿತ್ತು. ನಂತರದಲ್ಲಿ ವ್ಯಾಪಾರಕ್ಕಾಗಿ ಬಂದ ಪರಕೀಯರು ತಮ್ಮ ಒಡೆದು ಆಳುವ ನೀತಿಯಿಂದ ರಾಜ-ರಾಜರುಗಳ ಮಧ್ಯ ದ್ವೇಷಭಾವನೆಯನ್ನು ಹುಟ್ಟಿಸಿ ಅವರುಗಳಿಂದ ನಮ್ಮ ದೇಶವನ್ನು ತಮ್ಮ ವಶಕ್ಕೆ ತೆಗದು ಕೊಂಡು ದೇಶದಲ್ಲಿನ ಸಂಪನ್ಮೂಲಗಳ ಬಳಕೆಗೆ ತೆರಿಗೆ ನೀತಿಗಳನ್ನು ಹೇರುವ ಮೂಲಕ ದೇಶದ ಪ್ರಜೆಗಳ ಮೇಲೆ ನಿರಂತರ ದಬ್ಬಾಳಿಕೆ ಮಾಡಲಾರಂಭಿಸಿದರು, ದಬ್ಬಾಳಿಕೆಯನ್ನು ಕಂಡು ಕ್ರಾಂತಿಕಾರಿ ವ್ಯಕ್ತಿಗಳಾದ ಭಗತಸಿಂಗ್, ಜಾನ್ಸಿರಾಣಿ ಲಕ್ಷೀಬಾಯಿ, ವೀರರಾಣಿ ಕಿತ್ತೂರು ಚನ್ನಮ್ಮಾ, ಸಂಗೊಳ್ಳಿ ರಾಯಣ್ಣ, ಸುಭಾಷಚಂದ್ರ ಬೋಸ್, ಮಹಾತ್ಮಾಗಾಂಧೀಜಿ ಇನ್ನು ಅನೇಕ ಹೋರಾಟಗಾರರು ಪರಕೀಯರ ವಿರುದ್ಧವಾಗಿ 1857 ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಸಿಪಾಯಿದಂಗೆ, 1930ರಲ್ಲಿ ಉಪ್ಪಿನ ಸತ್ಯಾಗ್ರಹ ಮತ್ತು 1942ರಲ್ಲಿ ಕ್ವೀಟ್ ಇಂಡಿಯಾದಂತಹ ಹೋರಾಟಗಳನ್ನು ಮಾಡಿ ನಾವು ಭಾರತೀಯರೆಲ್ಲರು ಒಂದೇ ಎನ್ನುವ ಒಗ್ಗಟ್ಟನ್ನು ತೋರುವ ಮೂಲಕ ಸ್ವಾತಂತ್ರ್ಯ ಪಡೆಯುವಲ್ಲಿ ಯಶಸ್ವಿಯಾದರು. ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆಯನ್ನು ಬೆಳೆಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದ ಅವರು ಸಂಸ್ಥೆಯ ಕಾರ್ಮಿಕ ಸಿಬ್ಬಂದಿಯವರ ಪ್ರತಿಭಾನ್ವಿತ ಮಕ್ಕಳು ಶೈಕ್ಷಣಿಕ ಪರೀಕ್ಷೆಗಳಲ್ಲಿ ಮಾಡಿದ ಸಾಧನೆಗಳ ಕುರಿತು ಹರ್ಷ ವ್ಯಕ್ತಪಡಿಸುತ್ತಾ ಎಲ್ಲ ಮಕ್ಕಳು ಇನ್ನು ಹೆಚ್ಚಿನ ಸಾಧನೆ ಮಾಡಿ ದೇಶಕ್ಕೆ ಮಾದರಿ ಪ್ರಜೆಗಳಾಗಬೇಕೆಂದು ಶುಭ ಹಾರೈಸಿದರು
ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಮತ್ತು ಸನ್ 2024-25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಮತ್ತು ಪಿ.ಯು.ಸಿ ಹಾಗೂ ಪದವಿ ತರಗತಿಗಳಲ್ಲಿ ಹೆಚ್ಚಿನ ಅಂಕಗಳೊಂದಿಗೆ ತೆರ್ಗಡೆಯಾದ ಕಾರ್ಖಾನೆಯ ಕಾರ್ಮಿಕ ಸಿಬ್ಬಂದಿಯವರ ಪ್ರತಿಭಾನ್ವಿತ ಮಕ್ಕಳಿಗೆ ನಗದು ಪ್ರಶಸ್ತಿ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಸತ್ಕರಿಸಿ ಗೌರವಿಸಿದರು.
ಅತಿಥಿಗಳಾಗಿ ಆಗಮಿಸಿದ ಪ್ರಗತಿ ಪರ ರೈತರಾದ ಆಲಕನೂರ ನಿಂಗಪ್ಪಾ ಪುಂಡಲೀಕ ಧರ್ಮಟ್ಟಿ, ಮುನ್ಯಾಳದ ಮಹಾದೇವ ರಾಮಪ್ಪಾ ತುಕ್ಕನ್ನವರ ಮತ್ತು ಸ್ಥಳೀಯ ಸಾರಿಗೆ ಮುಕ್ತೆದಾರ ನಿಪನಾಳದ ಯಂಕಪ್ಪಾ ಭೀಮಪ್ಪಾ ಮರ್ದಿ, ಗೋಕಾಕದ ರಾಮಪಾ ್ಪರಂಗಪ್ಪಾ ಚಂದರಗಿ ಅವರು ಸ್ವತಂತ್ರ್ಯೋತ್ಸವದ 79ನೇ ಧ್ವಜಾರೋಹಣ ನೆರವೇರಿಸಿದರು
ಕಾರ್ಯಕ್ರಮದಲ್ಲಿ ಕಬ್ಬು ಅಭಿವೃದ್ದಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ಸಸಾಲಟ್ಟಿ, ಮಧ್ಯಸಾರ ಘಟಕದ ಪ್ರಧಾನ ವ್ಯವಸ್ಥಾಪಕ ಮಹೇಶ ಜಿ.ಆರ್, ಹಿರಿಯ ವ್ಯವಸ್ಥಾಪಕರುಗಳು, ಅಧಿಕಾರಿ ವರ್ಗದವರು, ಕಾರ್ಮಿಕ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

 

ಫೋಟೋ ಕಾಪ್ಸನ್& ಫೈಲ್ ನಂ-18ಎಂಡಿಎಲ್‍ಜಿ3>ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ ಶುಗರ್ಸ್ ಕಾರ್ಖಾನೆಯ ಜರುಗಿದ 79ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಕಾರ್ಖಾನೆಯ ಕಾರ್ಮಿಕ ಸಿಬ್ಬಂದಿಯವರ ಪ್ರತಿಭಾನ್ವಿತ ಮಕ್ಕಳಿಗೆ ನಗದು ಪ್ರಶಸ್ತಿ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಸತ್ಕರಿಸಿ ಗೌರವಿಸಿದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ