ಮೂಡಲಗಿ: ಪ್ರತಿಯೊಬ್ಬರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ : ಡಿ.ವೈ.ಎಸ್.ಪಿ. ಪ್ರಭು ಡಿ.ಟಿ
ಪ್ರತಿಯೊಬ್ಬರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಪೋಲೀಸ ಇಲಾಖೆ ವಿನೂತನ ಕಾರ್ಯಕ್ರಮ ಗೋಕಾಕದಿಂದ ಘಟಪ್ರಭಾವರೆಗೆ ಕಾಲ್ನಡಿಗೆ ಜಾಥಾ ಕಾಯ೯ಕ್ರಮವನ್ನು ದಿನಾಂಕ 5 ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗೋಕಾಕ ವಿಭಾಗದ ಡಿ.ವೈ.ಎಸ್.ಪಿ. ಪ್ರಭು ಡಿ.ಟಿ. ಅವರು ತಿಳಿಸಿದರು.
ಅವರು ಮೂಡಲಗಿ ನಗರದ ಪೋಲೀಸ ಠಾಣೆಯಲ್ಲಿ ವಿವಿಧ ಸಂಘ, ಸಂಸ್ಥೆಗಳ ಮುಖ್ಯಸ್ಥರನು ಕರೆಸಿ ಭಾಗವಹಿಸಬೇಕು ಎಂದು ಕರೆ ನಿಡಿ ಮಾತನಾಡಿದರು.
ದೇಶದಲ್ಲಿ ರಸ್ತೆ ಅಪಘಾತದಲ್ಲಿ ಎಲ್ಲಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪುತ್ತಿದ್ದು ಅದನ್ನು ತಡೆಯುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆದಿದ್ದು ಈ ಕಾಲ್ನಡಿಗೆ ಜಾಥಾ ಗೋಕಾಕ ಮತ್ತು ಘಟಪ್ರಭಾ ಮಧ್ಯದ ಗ್ರಾಮಗಳ ಜನರು ಪಾಲ್ಗೊಳ್ಳುತ್ತಾರೆಂದು ತಿಳಿಸಿದರು. ದಿ. 5ರಂದು ಮುಂಜಾನೆ 7 ಗಂಟೆಗೆ ನಗರದ ನಾಕಾ ನಂ. ರಿಂದ ಜಾಥಾ ಪ್ರಾರಂಭವಾಗಿ ಲೋಳಸೂರ, ಅರಭಾಂವಿ, ಅರಭಾಂವಿ ಮಠ, ಶಿಂದಿಕುರಬೇಟ ಮೂಲಕ ಘಟಪ್ರಭಾಗೆ ಆಗಮಿಸಿ ಪಟ್ಟಣದಲ್ಲಿ ಜಾಥಾ ನಡೆಸಿ ಪೋಲೀಸ ಠಾಣೆಗೆ ಬಂದು ಮುಕ್ತಾಯಗೊಳ್ಳುವದೆಂದು ತಿಳಿಸಿದರು.
ಈ ಕಾಲ್ನಡಿಗೆ ಜಾಥಾದಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.
ವರದಿ- ಈರಪ್ಪಾ ಢವಳೇಶ್ವರ