ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮನ್ನಿಕೇರಿ ಹಾದಿಗೆ ಹೊಂದಿಕೊಂಡಿರುವ ಬೆಟಗೇರಿ ತೋಟದ ಮಡ್ಡಿ ಬೀರಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ, ಟಗರಿನ ಕಾಳಗ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆ.23ರಿಂದ ಆ.24ರವರೆಗೆ ಜರುಗಲಿವೆ.
ಆ.23ರಂದು ಮುಂಜಾನೆ 6 ಗಂಟೆಗೆ ಮಡ್ಡಿ ಬೀರಸಿದ್ಧೇಶ್ವರ ದೇವರ ದೇವಸ್ಥಾನದ ಗದ್ಗುಗೆ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು, ಸಾಯಂಕಾಲ 6 ಗಂಟೆಗೆ ಪುರ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವದು, ಅದೇ ದಿನ ಪರಸ್ಥಳದಿಂದ ವಾಲಗ ಕೂಡುವುದು. ರಾತ್ರಿ 9ಗಂಟೆಗೆ ನಾಡಿನ ಖ್ಯಾತ ಜಾನಪದ ಕಲಾವಿದ ಮತ್ತು ಗಾಯಕರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಜಾತ್ರಾ ಮಹೋತ್ಸವ ಉದ್ಘಾಟನೆ ನೆರವೇರಿಸಲಿದ್ದಾರೆ. ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ, ಕಡಕೋಳ ಅಭಿನವ ಸಿದ್ರಾಯ ಅಜ್ಜನವರು, ಮಮದಾಪೂರ ಮೌನಮಲ್ಲಿಕಾರ್ಜುನ ಸ್ವಾಮಿಜಿ ಸಾನಿಧ್ಯ ವಹಿಸಲಿದ್ದಾರೆ. ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಮುಖ್ಯ ಅತಿಥಿಗಳಾಗಿ, ತಾಪಂ, ಗ್ರಾಪಂ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ರಾಜಕೀಯ ಮುಖಂಡರು, ಗಣ್ಯರು, ಸಂತ-ಶರಣರು ಅತಿಥಿಗಳಾಗಿ ಜಾತ್ರಾ ಮಹೋತ್ಸವ ವಿವಿಧ ಕಾರ್ಯಕ್ರಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಆ.24ರಂದು ಮುಂಜಾನೆ 8ಗಂಟೆಗೆ ಶ್ರೀ ಬೀರಸಿದ್ಧೇಶ್ವರ ದೇವರ ಗದ್ಗುಗೆ ಅಭಿಷೇಕ, ಮಹಾಪೂಜೆ ನಡೆದ ಬಳಿಕ ಪಲ್ಲಕ್ಕಿ ಉತ್ಸವ, ಜಾತ್ರಾ ಮಹೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಹಾಪ್ರಸಾದ, ಮಧ್ಯಾಹ್ನ 12 ಗಂಟೆಗೆ ಓಪನ್ ಟಗರಿನ ಕಾಳಗ ಸ್ಪರ್ಧೆ, ಮಾಹಿತಿಗಾಗಿ ಮೊಬೈಲ್ ನಂ-8197488054,9611250446,6366698073, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಸಂಜೆ 6ಗಂಟೆಗೆ ಭಂಡಾರ ಒಡೆಯುವ ಕಾರ್ಯಕ್ರಮ ನಡೆದ ಬಳಿಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಸ್ಥಳೀಯ ಮಡ್ಡಿ ಬೀರಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ ಆಚರಣೆ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
