Breaking News
Home / ಬೆಳಗಾವಿ / ಆ.24ರಿಂದ ಬೆಟಗೇರಿಯಲ್ಲಿ 41ನೇ ಸತ್ಸಂಗ ಸಮ್ಮೇಳನ *ಐದು ದಿನ ಸಂಜೆ 7:30ಗಂಟೆಗೆ ಸಕಲ ಮಹಾತ್ಮರಿಂದ ಪ್ರವಚನ* ದಾನಿಗಳಿಗೆ ಸತ್ಕಾರ* ಮಹಾಪ್ರಸಾದ

ಆ.24ರಿಂದ ಬೆಟಗೇರಿಯಲ್ಲಿ 41ನೇ ಸತ್ಸಂಗ ಸಮ್ಮೇಳನ *ಐದು ದಿನ ಸಂಜೆ 7:30ಗಂಟೆಗೆ ಸಕಲ ಮಹಾತ್ಮರಿಂದ ಪ್ರವಚನ* ದಾನಿಗಳಿಗೆ ಸತ್ಕಾರ* ಮಹಾಪ್ರಸಾದ

Spread the love

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ 41ನೇ ಸತ್ಸಂಗ ಸಮ್ಮೇಳನ ಆ.24ರಿಂದ ಆ.28ತನಕ ನಡೆಯಲಿದ್ದು, ಇಲ್ಲಿಯ ಈಶ್ವರ ದೇವರ ದೇವಸ್ಥಾನದಲ್ಲಿರುವ ಈಶ್ವರ ದೇವರ ಗದ್ದುಗೆ ಐದು ದಿನ ಮುಂಜಾನೆ 6 ಗಂಟೆಗೆ ಮಹಾಪೂಜೆ, ನೈವೇದ್ಯ ಸಮರ್ಪನೆ ಜರುಗಲಿದೆ.

ಆ.24ರಂದು ಸ್ಥಳೀಯ ಶ್ರೀ ಗಜಾನನ ವೇದಿಕೆ ಮೇಲೆ ಸಾಯಂಕಾಲ 7:30ಗಂಟೆಗೆ ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ, ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ, ಇಟ್ನಾಳದ ಸಿದ್ದೇಶ್ವರ ಸ್ವಾಮಿಜಿ, ಬಿಲಕುಂದಿ ಶಾಂತಮ್ಮ ತಾಯಿಯವರಿಂದ ಬೇಡುವೆನಭವ ನಿಮ್ಮನು ಭವ ಭವದೊಳು ಎಂಬ ವಿಷಯದ ಮೇಲೆ ಪ್ರವಚನ, ಆ.25ರಂದು ಸಂಜೆ 7:30 ಗಂಟೆಗೆ ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮಿಜಿ, ತುಂಗಳದ ಮಾತೋಶ್ರೀ ಅನುಸೂಯಾ ತಾಯಿಯವರು, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ಇಟ್ನಾಳದ ಸಿದ್ದೇಶ್ವರ ಸ್ವಾಮಿಜಿ, ಘಟ ಸರ್ಪದ ಭಾಯೊಳಗೆ ಕೈ ಹಾಕಿದರೆ ಅದು ಕಚ್ಚದೆ ಮಾಂಬುದೆ ಎಂಬ ವಿಷಯದ ಮೇಲೆ ಪ್ರವಚನ ಜರುಗಲಿದೆ.
ಆ.26ರಂದು ಸಾಯಂಕಾಲ 7:30ಗಂಟೆಗೆ ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಡಾ. ನೀಲಮ್ಮಾತಾಯಿ(ಅಸುಂಡಿ), ತುಂಗಳದ ಮಾತೋಶ್ರೀ ಅನುಸೂಯಾ ತಾಯಿಯವರು, ಜೋಡಕುರುಳಿ ಚಿದ್ಘನಾನಂದ ಭಾರತಿ ಸ್ವಾಮೀಜಿ, ಶೇಗುಣಶಿ ಡಾ.ಮಹಾಂತಪ್ರಭು ಸ್ವಾಮೀಜಿ, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ಹಿಪ್ಪರಗಿ ಸಿದ್ಧಾರೂಢ ಶರಣರು, ಗದಗದ ಶರಣೆ ಮೈತ್ರಾ ತಾಯಿಯವÀರಿಂದ ಸುಜ್ಞಾನಂಗಳಿರ ಲವನೆ ಸೇವ್ಯ ಗುರವಕ್ಕು ಎಂಬ ವಿಷಯದ ಮೇಲೆ ಪ್ರವಚನ ನಡೆಯಲಿದೆ.
ಆ.27ರಂದು ಪ್ರಾತ: ಕಾಲ ಬ್ರಾಹ್ಮೀ ಮೂಹೂರ್ತದಲ್ಲಿ ಶಿವನಾಮ ಸ್ಮರಣೆ ಬಳಿಕ ಇಂಚಲದ ಸಾಧು ಸಂಸ್ಥಾನಮಠದ ಸದ್ಗುರು ಡಾ.ಶಿವಾನಂದ ಭಾರತಿ ಮಹಾಸ್ವಾಮಿಜಿ ಸ್ವಾಗತ ಮೆರವಣಿಗೆ ಬಳಿಕ ರಾತ್ರಿ 8 ಗಂಟೆಗೆ ಭಾರತಿ ಶ್ರೀಗಳ ಘನ ಅಧ್ಯಕ್ಷತೆಯಲ್ಲಿ ಪ್ರವಚನ ನಡೆಯಲಿದ್ದು, ಹಳಕಟ್ಟಿಯ ನಿಜಗುಣ ಸ್ವಾಮಿಜಿ, ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಡಾ. ನೀಲಮ್ಮಾತಾಯಿ (ಅಸುಂಡಿ), ಇಂಚಲದ ಪೂರ್ಣಾನಂದ ಭಾರತಿ ಸ್ವಾಮಿಜಿ, ಮಲ್ಲಾಪೂರ(ಕೆ.ಎನ್)ದ ಚಿದಾನಂದ ಸ್ವಾಮಿಜಿ, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ಹುಣಶ್ಯಾಳ(ಪಿ.ಜಿ) ನಿಜಗುಣ ದೇವರು, ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಮಹಾರಾಜರು, ಕುಳ್ಳೂರ ಬಸವಾನಂದ ಭಾರತಿ ಸ್ವಾಮೀಜಿ, ಹಡಗಿನಾಳದ ಮಲ್ಲೇಶ ಶರಣರು, ಗದಗದ ಶರಣೆ ಮೈತ್ರಾ ತಾಯಿಯವರು, ವರಗುಣವಾವುದು? ಎಂಬ ವಿಷಯದ ಮೇಲೆ ಪ್ರವಚನ, ಕರಿಕಟ್ಟಿ ಗುರುನಾಥ ಶಾಸ್ತ್ರೀಗಳಿಂದ ಕೀರ್ತನೆ ಜರುಗಲಿದೆ.
ಸ್ಥಳೀಯ ಶರಣ ಬಸವಂತ ನೀಲಣ್ಣವರ, ಬಸವರಾಜ ಯಾದವಾಡ, ವಿಠ್ಠಲ ಚಂದರಗಿ(ಗಿರಣಿ) ಹಾಗೂ ಕುಟುಂಬದವರಿಂದ ಡಾ. ಶಿವಾನಂದ ಭಾರತಿ ಶ್ರೀಗಳಿಗೆ ಭಕ್ತಿಯ ತುಲಾಭಾರ ಸೇವೆ, ಕಿರೀಟ ಮಹಾಪೂಜೆ, ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸದ್ಭಕ್ತರಿಂದ ರಾತ್ರಿ ಶಿವ ಭಜನೆ, ಶಿವಜಾಗರಣೆ, ಮದರಖಂಡಿ ಸಿದ್ಧಾರೂಢ ಮಠಪತಿ ತಬಲಾ ಸಾಥ್‍ದೊಂದಿಗೆ ಶೇಗುಣಿಸಿ ಮಲ್ಲನಗೌಡ ಶಿವಲಿಂಗಪ್ಪಗೋಳ ಅವರಿಂದ ಸಂಗೀತ ಸೇವೆ, ಗ್ರಾಪಂ ಮಾಜಿ ಅಧ್ಯಕ್ಷ ಬಸವಂತ ಕೋಣಿ ಸಹೋದರರಿಂದ ಮಹಾಪ್ರಸಾದ ಸೇವೆ ನಡೆಯಲಿದೆ.
ಆ.28ರಂದು ಮುಂಜಾನೆ 10 ಗಂಟೆಗೆ ಸಮ್ಮೇಳನದಲ್ಲಿ ಉಪಸ್ಥಿತರಿರುವ ಸಕಲ ಮಹಾತ್ಮರಿಂದ ಕಡಿದು ಮೋಹಿತು ಮನದ ತಾಪವು ಒಡೆಯ ಗುರುವಿನ ವಾಕ್ಯದಿಂದಲಿ ಎಂಬ ವಿಷಯದ ಮೇಲೆ ಪ್ರವಚನ ನಡೆದು, ಸಾಧಕರಿಗೆ, ದಾನಿಗಳಿಗೆ ಸತ್ಕಾರ, ಆಶೀರ್ವಾದ, ಶ್ರೀಗಳಿಂದ ಆಶೀರ್ವಚನ, ಮಹಾಮಂಗಲ, ಮಹಾಪ್ರಸಾದ ಕಾರ್ಯಕ್ರಮ ಜರುಗಿ ಸತ್ಸಂಗ ಸಮ್ಮೇಳನ ಸಮಾರೊಪಗೊಳ್ಳಲಿದೆ ಎಂದು ಇಲ್ಲಿಯ ಈಶ್ವರ ಭಜನಾ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ