Breaking News
Home / ಬೆಳಗಾವಿ / ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the love

ಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ ತಾಯಿಗಳ ನೋವು, ಕಷ್ಟ, ಶ್ರಮ ಅರ್ಥೈಸಿಕೊಂಡು ಗುರುಗಳ ಸನ್ಮಾರ್ಗದಲ್ಲಿ ನಡೆದಾಗ ಜೀವನ ಎಂಬ ಬದುಕಿಗೆ ಒಂದು ಅರ್ಥ ಒದಗಿಸಲು ಸಾಧ್ಯವಿದೆ. ಬದುಕು ನಾವು ಅಂದುಕೊಂಡಷ್ಟು ಸುಲಭವಾಗಿಲ್ಲ ಇಂದಿನ ದಿನದಲ್ಲಿ ಎಷ್ಟೇ ಪ್ರಯತ್ನಿಸಿದರೂ ನೌಕರಿ ಎಂಬ ಕನಸ್ಸುಗಳನ್ನು ಸಾಕಾರಗೊಳಿಸಿಕೊಳ್ಳಲು ಆಗುತ್ತಿಲ್ಲ ಪ್ರಯತ್ನ ನಿರಂತರವಾಗಿದ್ದರೆ ಮಾತ್ರ ನಮ್ಮ ಜೀವನದ ಗುರಿಯನ್ನು ಮುಟ್ಟಲು ಸಾಧ್ಯವಿದೆ ಎಂದು ಹುನಕುಪ್ಪಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯರಾದ ಚಂದ್ರಕಾಂತ ಬಿ. ಪೂಜೇರಿ ಅಭಿಪ್ರಾಯಪಟ್ಟರು.
ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಸಮಾಜಕಾರ್ಯ ಪದವಿ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ. ಮತ್ತು ಎನ್.ಎಸ್.ಎಸ್. ಘಟಕಗಳಡಿಯಲ್ಲಿ ಹಮ್ಮಿಕೊಂಡಿರುವ ವಿದ್ಯಾರ್ಥಿ ಮಾರ್ಗದರ್ಶನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಪದವಿ ವಿದ್ಯಾರ್ಥಿಗಳಿಗೆ ಅನೇಕ ಅವಕಾಶಗಳನ್ನು ಪದವಿ ನಂತರ ಇದ್ದು ಅವುಗಳ ಜೊತೆಗೆ ಸ್ವಾವಲಂಬನೆ ಬದುಕಿಗೆ ಪೂರಕವಾದ ವೃತ್ತಿಗಳು ಕೋರ್ಸಗಳು ನಮ್ಮ ಪ್ರತಿಭೆಗೆ ತಕ್ಕಂತೆ ಇಂದಿನ ದಿನಗಳಲ್ಲಿ ವಿವಿಧ ಇಲಾಖೆಗಳಲ್ಲಿ ಅವಕಾಶವಿದೆ. ಸಾಮಾಜಿಕ ಮಾಧ್ಯಮಗಳಿಂದ ಇಂದಿನ ಯುವಕರು ದಾರಿ ತಪ್ಪುತ್ತಿದ್ದು ಯೋಗ್ಯವಾದ ಬದುಕಿನ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ ಎಂದು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಹೇಳಿದರು.
ಕಾಲೇಜು ಉಪನ್ಯಾಸಕ  ಮತ್ತು ಘಟಕಾಧಿಕಾರಿ ಮಲ್ಲಪ್ಪ ಪಾಟೀಲ ಮಾತನಾಡಿ ಪದವಿ ನಂತರ ಹಲವಾರು ಕೋರ್ಸಗಳು ತೆರದಬಾಗಿಲು ನಮ್ಮ ಬಳಿ ಇವೆ ಪದವಿ ನಂತರ ಅವುಗಳ ಸದುಪಯೋಗ ಪಡೆದುಕೊಂಡು ತಮ್ಮ ನಿಜವಾದ ಬದುಕನ್ನು ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲಿ ಇದೆ. ಸರಿಯಾದ ಮಾರ್ಗದಲ್ಲಿ ನಡೆದುಕೊಂಡು ನಮ್ಮ ಗುರಿ ತಲುಪಲು ಪ್ರಯತ್ನಿಸಬೇಕೆಂದು ಪದವಿ ವಿದ್ಯಾರ್ಥಿಗಳಿಗೆ ಪ್ರಾಸ್ತಾವಿಕವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕಾಲೇಜು ಪ್ರಾಚಾರ್ಯ ಸತೀಶ ಗೋಟೂರೆ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ ವಿದ್ಯಾರ್ಥಿ ಜೀವನದ ನಂತರ ನಾವುಗಳು ಯಾವುದಾದರೊಂದು ವೃತ್ತಿ ಮಾಡಲೇ ಬೇಕಾಗಿದ್ದು ನಮ್ಮ ಬದುಕು ಸುಂದರಗೊಳ್ಳುವಂತಹ ವೃತಿ ಮತ್ತು ಕೋರ್ಸಗಳನ್ನು ಆಯ್ಕೆ ಮಾಡಿಕೊಂಡು ಪ್ರಯತ್ನಿಸುವ ಛಲ ನಮ್ಮ ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶಿವಾನಂದ ಸತ್ತಿಗೇರಿ, ರಾಜು ಪತ್ತಾರ, ಸುನೀಲ ಸತ್ತಿ, ರಾಘವೇಂದ್ರ ಮುಕ್ಕುಂದ ಎಂ.ಎಸ್.ಒಡೇಯರ ಅಶ್ವೀನಿ ಗುರುವ ಅಕ್ಷತಾ ಹೊಸಮನಿ ಸವಿತಾ ಮಳಲಿ ನಂದಾ ತಳವಾರ ಸಾಧನಾ ಖಂಡ್ರಟ್ಟಿ ಸವಿತಾ ವೆಂಕಟಾಪೂರ ಹಾಜರಿದ್ದರು
ವಿದ್ಯಾರ್ಥಿನಿ ವಿದ್ಯಾಶ್ರೀ ವಡೇರ ನಿರೂಪಿಸಿದರು ರೀಸಿಕಾ ಬೆನ್ನಳ್ಳಿ ಸ್ವಾಗತಿಸಿದರು ಮಹಾನಂದಾ ಮುತ್ನಾಳ ವಂದಿಸಿದರು.

 


Spread the love

About inmudalgi

Check Also

ಸಕಾಲದಲ್ಲಿ ಸಾಲ ಮರುಪಾವತಿಸಿ ಬ್ಯಾಂಕಿನ ಪ್ರಗತಿಗೆ ಸಹಕರಿಸಿ: ಎಮ್.ಪನೀಶಾಯಣ್ಣ

Spread the loveಬೆಟಗೇರಿ:ವಿವಿಧ ಯೋಜನೆಗಳಡಿಯಲ್ಲಿ ರೈತರಿಗೆ ಮತ್ತು ಸ್ವಸಹಾಯ ಸಂಘಗಳಿಗೆ ಹಾಗೂ ಗ್ರಾಹಕರಿಗೆ, ಗ್ರಾಮೀಣ ವಲಯದ ಕೆನರಾ ಬ್ಯಾಂಕನಿಂದ ದೊರಕುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ