*ಅರಿಹಂತ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ. ಮಹಾದೇವ್ ಡಿ. ದೀಕ್ಷಿತ್ ಅವರಿಗೆ “ಲೈಫ್ಟೈಮ್ ಅಚೀವ್‌ಮೆಂಟ್ ಅವಾರ್ಡ್”*
ಬೆಳಗಾವಿ : ನಗರದ ಅರಿಹಂತ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ಮಹಾದೇವ್ ಡಿ. ದೀಕ್ಷಿತ ಅವರನ್ನು, ಸೊಸೈಟಿ ಆಫ್ ಮಿನಿಮಲಿ ಇನ್ವೇಸಿವ್ ಕಾರ್ಡಿಯೊವ್ಯಾಸ್ಕುಲರ್ ಹಾಗೂ ಥೋರಾಸಿಕ್ ಸರ್ಜನ್‌ಸ್ ಆಫ್ ಇಂಡಿಯಾ (SMICTS) ಕೊಡಮಾಡುವ ಲೈಫಟೈಮ್ ಅಚೀವಮೆಂಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 9ನೇ ವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ. ದಿಕ್ಷಿತ ಅವರು ಕಳೆದ ಸುಮಾರು ದಶಕಗಳಿಂದ ತೆರೆದ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದು,
ಚಿಕ್ಕರಂದ್ರದ ಮೂಲಕ (ಮಿನಿಮಲಿ ಇನ್ವೇಸಿವ್) ಹೃದಯ ಶಸ್ತ್ರಚಿಕಿತ್ಸೆ ನಡೆಸುವಲ್ಲಿ ದೀರ್ಘಕಾಲದ ನಿಷ್ಠೆ, ಪರಿಶ್ರಮ ಮತ್ತು ಮಹತ್ತರ ಕೊಡುಗೆಯನ್ನು ಪರಿಗಣಿಸಿ ನೀಡಲಾಗಿದೆ. ಅವರ ನಿರಂತರ ಸೇವೆ, ಅಧ್ಯಯನ ಮತ್ತು ಸಂಶೋಧನೆಯ ಮೂಲಕ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಹೊಸ ಆವಿಷ್ಕಾರಗಳ ಮೂಲಕ ನಾವಿನ್ಯತೆಯನ್ನು ಅಳವಡಿಸಿಕೊಂಡಿದ್ದಾರೆ.
ಡಾ. ಮಹಾದೇವ್ ಡಿ. ದೀಕ್ಷಿತ್ ಅವರ ವೃತ್ತಿ ವಿವರ:
ಡಾ. ದೀಕ್ಷಿತ್ ಅವರು ಸುಮಾರು 40 ವರ್ಷಗಳ ಅನುಭವ ಹೊಂದಿರುವ ಖ್ಯಾತ ಹೃದ್ರೋಗ ಶಸ್ತ್ರಚಿಕಿತ್ಸಕರಾಗಿದ್ದು, 40,000ಕ್ಕೂ ಅಧಿಕ ತೆರೆದ ಹೃದಯ ಶಸ್ತ್ರಚಿಕಿತ್ಸೆಗಳನ್ನು, ನೆರವೇರಿಸಿದ್ದು, ಅದರಲ್ಲಿ ಸುಮಾರು 7,500 ಅಧಿಕ ಅತ್ಯಂತ ಕ್ಲಿಷ್ಟಕರವಾದ ನವಜಾತ ಹಾಗೂ ಚಿಕ್ಕಮಕ್ಕಳ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಮಿನಿಮಲ್ ಅಕ್ಸಸ್ ವಾಲ್ವ್ ಶಸ್ತ್ರಚಿಕಿತ್ಸೆ ಮತ್ತು ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ ಆರಂಭಿಸಿ, ಹೊಸ ಮನ್ವಂತರಕ್ಕೆ ನಾಂದಿ ಹಾಡಿದ್ದಾರೆ.
ಅವರ ದೃಷ್ಟಿ ದಾನಶೀಲತೆಯ ಕಡೆಗೂ ವಿಸ್ತಾರವಾಗಿದೆ. ಅವರು ಸ್ಥಾಪಿಸಿರುವ ಆಸ್ಪತ್ರೆಗಳು ಮತ್ತು ಧಾರ್ಮಿಕ ಸಂಸ್ಥೆಗಳು 20,000ಕ್ಕೂ ಹೆಚ್ಚು ಉಚಿತ ಶಸ್ತ್ರಚಿಕಿತ್ಸೆಗಳನ್ನು ಅಗತ್ಯವಿರುವ ಸಮುದಾಯಗಳಿಗೆ ಒದಗಿಸಿದ್ದವೆ.
ಡಾ. ದೀಕ್ಷಿತ್ ಅವರ ಅಪೂರ್ವ ವೃತ್ತಿಯನ್ನು ಅನೇಕ ಪ್ರಶಸ್ತಿಗಳು ಒಪ್ಪಿಕೊಂಡಿವೆ, ಅದರಲ್ಲಿ ಕರ್ನಾಟಕ ರಾಜ್ಯ ರಾಜೋತ್ಸವ ಪ್ರಶಸ್ತಿ ಮತ್ತು ಕೆಎಲ್ ಇ ವಿಶ್ವವಿದ್ಯಾಲಯದ “ಉತ್ತಮ ವಿಜ್ಞಾನಿ” ಪ್ರಶಸ್ತಿ ಪ್ರಮುಖವಾಗಿದೆ. FRCS (ಗ್ಲಾಸ್ಗೋ) ಹಕ್ಕುಪತ್ರ ಹೊಂದಿರುವ ಅವರ ವೃತ್ತಿ ಶಸ್ತ್ರಚಿಕಿತ್ಸೆ ವೈಭವ, ನವೋದ್ಯಮ ಮತ್ತು ಸಮುದಾಯ ಸೇವೆ ಯ ಸಾರ್ಥಕತೆಯನ್ನು ಪ್ರತಿಬಿಂಬಿಸುತ್ತದೆ.
ಅರಿಹಂತ್ ಆಸ್ಪತ್ರೆ, ಡಾ. ದೀಕ್ಷಿತ್ ಅವರ ಈ ವಿಶಿಷ್ಟ ಸಾಧನೆಯ ಬಗ್ಗೆ ಅಪಾರ ಹೆಮ್ಮೆಯನ್ನು ವ್ಯಕ್ತಪಡಿಸಿ, ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಈ ಗೌರವವು ವೈದ್ಯಕೀಯ ಕ್ಷೇತ್ರಕ್ಕೆ ಸ್ಫೂರ್ತಿದಾಯಕವಾಗಿದ್ದು, ವಿಶ್ವಮಟ್ಟದ ಹೃದಯ ಆರೈಕೆಯನ್ನು ಒದಗಿಸುವಲ್ಲಿ ಆಸ್ಪತ್ರೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ.