Breaking News
Home / ಬೆಳಗಾವಿ / ಬೆಟಗೇರಿ ಪಿಕೆಪಿಎಸ್‍ಗೆ 25.52ಲಕ್ಷ ರೂಪಾಯಿ ಲಾಭ

ಬೆಟಗೇರಿ ಪಿಕೆಪಿಎಸ್‍ಗೆ 25.52ಲಕ್ಷ ರೂಪಾಯಿ ಲಾಭ

Spread the love

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಸನ್2024-25ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಸೆ.11ರಂದು ಸಂಘದ ಕಾರ್ಯಾಲಯದಲ್ಲಿ ನಡೆಯಿತು.

ಸಂಘದ ಮುಖ್ಯಕಾರ್ಯನಿರ್ವಾಹಕ ಅಡಿವೆಪ್ಪ ಮುರಗೋಡ ವಾರ್ಷಿಕ ವರದಿ ಮಂಡಿಸಿ ಮಾತನಾಡಿದ ಅವರು, ಸಂಘವು ಸನ್2024-25ನೇ ಸಾಲಿನಲ್ಲಿ ಸಂಘವು ಒಟ್ಟು 25,52,000/-ರೂ.ಗಳ ನಿವ್ವಳ ಲಾಭ ಗಳಿಸಿದೆ. ಸಂಘದ ಶೇರು ಸದಸ್ಯರಿಗೆ ಶೇ6ರಷ್ಟು ಡಿವ್ಹಿಡೆಂಡ್ ವಿತರಿಸಲಾಗುವದು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಬಸವಂತ ಕೋಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಶೇರ ಸದಸ್ಯರು, ಗ್ರಾಹಕರು, ನಾಗರಿಕರ ಜೊತೆ ಆಡಳಿತ ಮಂಡಳಿ ಸದಸ್ಯರು ಸಂಘದ ಸಮಗ್ರ ಪ್ರಗತಿ, ಸಂಘದಿಂದ ದೊರಕುವ ವಿವಿಧ ಸಾಲ, ಸೌಲಭ್ಯಗಳ ಕುರಿತು ಚರ್ಚಿಸಿದರು. ಈ ವೇಳೆ ಸಂಘದ ಆಡಳಿತ ಮಂಡಳಿ ಸದಸ್ಯರು, ಶೇರ ಸದಸ್ಯರು, ಗ್ರಾಹಕರು, ಸಂಘದ ಸಿಬ್ಬಂದಿ ವರ್ಗ, ಇತರರು ಇದ್ದರು.


Spread the love

About inmudalgi

Check Also

ಬಸವರಾಜ ತಿಪ್ಪಣ್ಣ ಕರೆಪ್ಪಗೊಳ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Spread the love ಬೆಟಗೇರಿ :ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕಾಗವಾಡ ವಲಯ ವ್ಯಾಪ್ತಿಯ ಶಿರಗುಪ್ಪಿ ಸಿದ್ದೇಶ್ವರ ವಿದ್ಯಾಲಯದ ಹೈಸ್ಕೂಲ್ ವಿಭಾಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ