Breaking News
Home / ಬೆಳಗಾವಿ / *ಯುವ ಸಂಘಟಕ ಸಿದ್ದಣ್ಣ ದುರದುಂಡಿ ಗೆ ಮಾತೃಭೂಮಿ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿದ ಸಚಿವ ಸಂತೋಷ ಲಾಡ್*

*ಯುವ ಸಂಘಟಕ ಸಿದ್ದಣ್ಣ ದುರದುಂಡಿ ಗೆ ಮಾತೃಭೂಮಿ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿದ ಸಚಿವ ಸಂತೋಷ ಲಾಡ್*

Spread the love

ಮೂಡಲಗಿ : ಮಾತೃಭೂಮಿ ಯುವಕರ ಸಂಘ (ರಿ) ಬೆಂಗಳೂರು ಇದರ ವತಿಯಿಂದ ಬೆಂಗಳೂರಿನ ನಾಗಮಂಗಲ ಹರ್ಷ ಇಂಟರನಿಷನಲ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡದ ಮಾತೃಭೂಮಿ 30 ನೇ ವಾರ್ಷಿಕೋತ್ಸವದ ಸಾಧಕರ ಸಂಭ್ರಮ ಸಮಾವೇಶದಲ್ಲಿ ಸಂಘಟನೆಯ ಸರದಾರ ಸಿದ್ದಣ್ಣ ದುರದುಂಡಿ ಅವರಿಗೆ ಮಾತೃಭೂಮಿ ರಾಜ್ಯ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಹಾಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌದರಿ, ಸಂಸ್ಥಾಪಕರಾದ ಡಾ. ಎಸ್ ಬಾಲಾಜಿ, ಚಲನಚಿತ್ರ ನಟರಾದ ಗುರುರಾಜ್ ಹೊಸಕೋಟೆ ಅವರು ಪ್ರಶಸ್ತಿ ಪ್ರಧಾನ ಮಾಡಿದರು.

ಯುವ ಸಾಧಕ ಸಿದ್ದಣ್ಣ ದುರದುಂಡಿ ಅವರು 18 ವರ್ಷಗಳಿಂದ ಯುವಜನ ಸೇವೆ, ಕ್ರೀಡೆ, ಜಾನಪದ ಕಲೆ, ಸಾಹಿತ್ಯ ಸಾoಸ್ಕೃತಿಕ, ಸ್ವಚ್ಛ ಭಾರತ ಅಭಿಯಾನ್, ಗಿಡ ಮರಗಳನ್ನು ನೆಟ್ಟು ಸುಂದರ ಪರಿಸರ ನಿರ್ಮಿಸುವದು, ಅರೋಗ್ಯ ಜಾಗೃತಿ ಶಿಬಿರಗಳನ್ನು ಮಾಡುವದು ಯುವಜನ ಸಂಘಟನೆ, ಧಾರ್ಮಿಕ ಡೊಳ್ಳು ಕುಣಿತ, ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿಗಳು ಮಾಡುವದು, ಮಹಿಳಾ ಸಬಲೀಕರಣ, ಮುಖ್ಯವಾಗಿ ಯುವಜನ ಸಂಘಟನೆ, ನಿರಂತರ ನಿಶ್ವಾರ್ಥ ಸೇವೆಯನ್ನು ಪರಿಗಣಿಸಿ ಸಿದ್ದಣ್ಣ ದುರದುಂಡಿ ಅವರಿಗೆ ಮಾತೃಭೂಮಿ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಸಿದ್ದಣ್ಣ ದುರದುಂಡಿಯವರು ಶ್ರೀ ಮಹಾಲಕ್ಷ್ಮಿದೇವಿ ಡೊಳ್ಳು ಕುಣಿತ ಕಲಾ ಸಂಘದ ಕಾರ್ಯಾಧ್ಯಕ್ಷರಾಗಿ, ಜೈ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಘದ ಅಧ್ಯಕ್ಷರಾಗಿ, ಅಷ್ಟೆ ಅಲ್ಲದೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಹಲವಾರು ಯುವಕ ಸಂಘಗಳು, ಮಹಿಳಾ ಸಂಘಗಳು, ಯುವತಿ ಮಂಡಳಗಳು, ಕ್ರೀಡಾ ಮತ್ತು ಸಾoಸ್ಕೃತಿಕ ಸಂಘಗಳನ್ನು ಹುಟ್ಟು ಹಾಕುತ್ತಾ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಂಘಟನೆ ಹಾಗೂ ಕಾರ್ಯಕ್ರಮ ಆಯೋಜನೆ ಮಾಡಿದ ಕೀರ್ತಿ ಸಿದ್ದಣ್ಣ ದುರದುಂಡಿ ಅವರಿಗೆ ಸಲ್ಲುತ್ತದೆ ಅವರ ಅನುಪಮ ಸೇವೆಯನ್ನು ಪರಿಗಣಿಸಿ ಸಚಿವ ಸಂತೋಷ ಲಾಡ್ ಅವರು ಸಿದ್ದಣ್ಣ ದುರದುಂಡಿ ಅವರಿಗೆ ಮಾತೃಭೂಮಿ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿದರು.

ಕಾರ್ಯಕ್ರಮದಲ್ಲಿ ಶ್ರೀಕ್ಷೆತ್ರ ಸಿದ್ದಲಿಂಗ ಸ್ವಾಮೀಜಿ, ಪೂಜ್ಯಶ್ರೀ ಸಿದ್ದರಾಜು ಸ್ವಾಮೀಜಿ, ಉಪ ನಿರ್ದೇಶಕರಾದ ಡಾ. ಮಂಜುಳಾ ಹುಲ್ಲಹಳ್ಳಿ, ಸಿ ಬಿ ರಂಗಯ್ಯಾ, ನೆಲಮಂಗಲ ತಹಸೀಲ್ದಾರ್ ಬೀರಪ್ಪ ಪೂಜೇರಿ, ತಾ ಪo ಕಾರ್ಯಾನಿರ್ವಕ ಅಧಿಕಾರಿ ಬಿಂದು ಮೇಡಂ, ಕನ್ನಡ ಅಭಿವೃದ್ಧಿ ಪ್ರಧಿಕಾರದ ಕಾರ್ಯಾದರ್ಶಿ ಡಾ. ಸಂತೋಷ್ ಹಾನಗಲ್, ರಾಜ್ಯ ಕಾರ್ಯದರ್ಶಿ ಸುರೇಶರೈ ಕಲಬುರ್ಗಿ ವಿಭಾಗಿಯ ಸಂಚಾಲಕರು ಮಂಜುನಾಥ ಗೊಂಡಬಾಳ, ವಿಜಯಪುರ ಜಿಲ್ಲಾಧ್ಯಕ್ಷರಾದ ಪುಂಡಲೀಕ ಮುರಾಳ, ಪವನಕುಮಾರ್ ನಾಯಕ, ಕಡಬಗೆರೆ ಮುನಿರಾಜು, ಚೇತನ್ ಅಹಿಂಸಾ, ಸಂಗಮೇಶ ಬಬಲೇಶ್ವರ ಹಾಗೂ ಸಂಘಟಕರು ಉಪಸ್ಥಿತರಿದ್ದರು.

ಸಮಾಜ ಸೇವಕ ಸಿದ್ದಣ್ಣ ದುರದುಂಡಿ ಮಾತೃಭೂಮಿ ರಾಜ್ಯ ಪ್ರಶಸ್ತಿ ಲಭಿಸಿದ್ದಕ್ಕೆ ಹಲವಾರು ಸಂಘ ಸಂಸ್ಥೆಗಳು, ವಿವಿಧ ಇಲಾಖೆಗಳು, ಯುವ ಸಂಘಟನೆಗಳು ಶುಭ ಹಾರೈಸಿ ಅಭಿನಂದಿಸಿವೆ.


Spread the love

About inmudalgi

Check Also

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಬೆಳಗಾವಿ (ಹುಕ್ಕೇರಿ):  ನಾನಾಗಲೀ, ನನ್ನ ಕುಟುಂಬವಾಗಲಿ. ಎಂದಿಗೂ ಜಾತಿ ರಾಜಕೀಯ ಮಾಡಿಲ್ಲ. ಜನರ ಪ್ರೀತಿ, ಆಶೀರ್ವಾದದಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ