ಮೂಡಲಗಿ: ಸೆ. 22 ರಿಂದ ಆ.7 ರವರೆಗೆ ರಾಜ್ಯದಲ್ಲಿ ನಡೆಯುವ ಬಹುನಿರೀಕ್ಷಿತ ಸಾಮಾಜಿಕ ಶೈಕ್ಷಣಿಕ ಜಾತಿ ಗಣತಿ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಉಪ್ಪಾರ ಸಮಾಜ ಭಾಂದವರು ತಮ್ಮ ಮನೆ ಮನೆಗೆ ಸಮೀಕ್ಷೆ ಮಾಡಲು ಬಂದಾಗ ಜಾತಿ ಕಾಲಂನಲ್ಲಿ ಉಪ್ಪಾರ ಎಂದು ನಮೂದಿಸ ಬೇಕೆಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ಅಧ್ಯಕ್ಷ ವಿಷ್ಣು ಲಾತೂರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ
ರಾಜ್ಯದ್ಯಂತ ಉಪಾರ ಜನಾಂಗದವರು ಅವರವರ ಕಸಬುಗಳ ಮೂಲಕ ಅವರು ಬೇರೆ ಬೇರೆಯಾಗಿ ಗುರುತಿಸಲ್ಪಡುತ್ತಿದ್ದು. ಇದರಿಂದ ಜಾತಿಗಣತಿಯಲ್ಲಿ ಉಪ್ಪಾರ ಜನಾಂಗದವರು ಬೇರೆ ಬೇರೆ ರೀತಿಯಾಗಿ ಜಾತಿಯನ್ನು ನಮೂದಿಸಿದರೆ. ಸರಕಾರದಿಂದ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗುತ್ತವೆ. ಆದ್ದರಿಂದ ನಾವು ಸಾಮಾಜಿಕ ಶೈಕ್ಷಣಿಕ ಜಾತಿಗಣತಿ ಸಮೀಕ್ಷೆ ಸಂದರ್ಭದಲ್ಲಿ ಜಾತಿಯ ಕಾಲಂನಲ್ಲಿ ಉಪ್ಪಾರ ಜನಾಂಗದವರು ಎಲ್ಲರೂ ಉಪ್ಪಾರ ಎಂದು ನಮೂದಿಸಬೇಕು ಎಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ಅಧ್ಯಕ್ಷ ವಿಷ್ಣು ಲಾತೂರ, ಮತ್ತು ವಿಶ್ವ ಭಗಿರಥ ಟ್ರಸ್ಟಿನ ಅಧ್ಯಕ್ಷ ಈಶ್ವರ ಶಿರಕೋಳ ಅವರು ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.
